Business Short News

ಪಾಮ್ ಆಯಿಲ್, ಚಿನ್ನದ ಮೂಲ ಆಮದು ದರ ತಗ್ಗಿಸಿದ ಭಾರತ

ಪಾಮ್ ಆಯಿಲ್, ಚಿನ್ನದ ಮೂಲ ಆಮದು ದರ ತಗ್ಗಿಸಿದ ಭಾರತ

ಭಾರತವು ಕಚ್ಚಾ ಮತ್ತು ಸಂಸ್ಕರಿಸಿದ ತಾಳೆ ಎಣ್ಣೆ, ಕಚ್ಚಾ ಸೋಯಾ ತೈಲ ಮತ್ತು ಚಿನ್ನದ ಮೂಲ ಆಮದು ಬೆಲೆಗಳನ್ನು ಕಡಿತ ಮಾಡಿದೆ. ಈ ಬಗ್ಗೆ ಶುಕ್ರವಾರ ತಡರಾತ್ರಿ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಪರಿಷ್ಕರಣೆಯ ಬೆನ್ನಲ್ಲೆ ಭಾರತ ಈ ಕ್ರಮವನ್ನು ಕೈಗೊಂಡಿದೆ. ಸರ್ಕಾರವು ಪ್ರತಿ ಹದಿನೈದು ದಿನಗಳಿಗೊಮ್ಮೆ ಖಾದ್ಯ ತೈಲಗಳು, ಚಿನ್ನ ಮತ್ತು ಬೆಳ್ಳಿಯ ಮೂಲ ಆಮದು ಬೆಲೆಗಳನ್ನು ಪರಿಷ್ಕರಣೆ ಮಾಡುತ್ತದೆ. ಈ ಮೂಲ ಆಮದು ದರವು ಆಮದುದಾರರು ಪಾವತಿಸಬೇಕಾದ ತೆರಿಗೆಯ ಮೊತ್ತವನ್ನು ಲೆಕ್ಕಹಾಕಲು ಬೆಲೆ ಆಗಿದೆ. ಭಾರತದಲ್ಲಿ ಚಿನ್ನ, ಖಾದ್ಯ ತೈಲಗಳ ಬೆಲೆಯ ಮೇಲೆ ಈ ಆಮದು ದರವು ಪರಿಣಾಮ ಬೀರುತ್ತದೆ. ಇನ್ನು ಇಂದು ಸದ್ಯಕ್ಕೆ ಚಿನ್ನದ ದರವು ಏರಿಕೆಯಾಗಿದೆ. ನಿನ್ನೆ ಗೋಲ್ಡ್ ರೇಟ್ ಸ್ಥಿರವಾಗಿತ್ತು. ಕಳೆದ ಹತ್ತು ದಿನಗಳಿಂದ ಚಿನ್ನದ ಬೆಲೆಯು ನಿರಂತರವಾಗಿ ಏರಿಳಿತ ಕಾಣುತ್ತಿದೆ. ಇನ್ನು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದ ಖಾದ್ಯ ತೈಲ ದರವು ಇತ್ತೀಚೆಗೆ ಜಾಗತಿಕವಾಗಿ ಕೊಂಚ ಇಳಿಕೆಯಾಗುತ್ತಿದೆ. ವಿಶ್ವದಲ್ಲಿ ಭಾರತವು ಖಾದ್ಯ ತೈಲಗಳು ಮತ್ತು ಬೆಳ್ಳಿಯ ಅತೀ ದೊಡ್ಡ ಆಮದುದಾರ ದೇಶವಾಗಿದೆ. ಚಿನ್ನದ ಆಮದು ವಿಚಾರಕ್ಕೆ ಬಂದಾಗ ಮಾತ್ರ ಭಾರತ 2ನೇ ಸ್ಥಾನದಲ್ಲಿ ನಿಲ್ಲುತ್ತದೆ. ಮೊದಲ ಸ್ಥಾನದಲ್ಲಿ ಚೀನಾ ಇದೆ.

8 ನಗರಗಳಲ್ಲಿ ಏರ್‌ಟೆಲ್ 5ಜಿ ಸೇವೆ ಆರಂಭ, ಯಾವೆಲ್ಲ ನಗರ?

8 ನಗರಗಳಲ್ಲಿ ಏರ್‌ಟೆಲ್ 5ಜಿ ಸೇವೆ ಆರಂಭ, ಯಾವೆಲ್ಲ ನಗರ?

ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಗಳ ನಡುವೆ ಪ್ರಸ್ತುತ 5ಜಿ ಸೇವೆ ವಿಚಾರದಲ್ಲಿ ಸ್ಪರ್ಧೆ ಏರ್ಪಟ್ಟಂತಾಗಿದೆ. ತನ್ನ 5ಜಿ ಸೇವೆಯನ್ನು ದೇಶದಲ್ಲಿ ಪ್ರಚಾರ ಮಾಡುವ ವಿಚಾರದಲ್ಲಿ ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋಗಿಂತ ಮುಂದೆ ಸಾಗಿದೆ. ಶನಿವಾರವಷ್ಟೇ ದೇಶದಲ್ಲಿ 5ಜಿ ಸೇವೆ ಆರಂಭವಾಗಿದ್ದು ಈಗ ಪ್ರಮುಖ ಟೆಲಿಕಾಂ ಸಂಸ್ಥೆಗಳು ತಮ್ಮ ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಅಕ್ಟೋಬರ್ 1ರ ಶನಿವಾರದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧಿಕೃತವಾಗಿ ಭಾರತದಲ್ಲಿ 5ಜಿ ಸೇವೆಯನ್ನು ಆರಂಭ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರ್ತಿ ಏರ್‌ಟೆಲ್‌ನ ಚೇರ್‌ಮನ್ ಸುನಿಲ್ ಭಾರ್ತಿ ಮಿತ್ತಲ್ ಕೂಡಾ ಹಾಜರಿದ್ದರು. ನಾವು ಪ್ರಮುಖವಾಗಿ ಎಂಟು ನಗರಗಳಲ್ಲಿ 5ಜಿ ಸೇವೆಯನ್ನು ಆರಂಭ ಮಾಡುತ್ತೇವೆ ಎಂದು ಆ ಕಾರ್ಯಕ್ರಮದಲ್ಲಿ ಸುನಿಲ್ ಮಿತ್ತಲ್ ಹೇಳಿದ್ದಾರೆ. ಇನ್ನು ಏರ್‌ಟೆಲ್ 5ಜಿ ಸೇವೆಯು ದೇಶದ ಪ್ರಮುಖ ನಗರಗಳಲ್ಲಿ ಮಾರ್ಚ್ 2023ರ ಒಳಗೆ ಆರಂಭವಾಗಲಿದೆ. ಮಾರ್ಚ್ 2024ರ ಒಳಗೆ ದೇಶದಾದ್ಯಂತ 5ಜಿ ಸೇವೆ ಆರಂಭ ಮಾಡುತ್ತೇವೆ ಎಂದು ಕೂಡಾ ಸುನಿಲ್ ಮಿತ್ತಲ್ ತಿಳಿಸಿದ್ದಾರೆ. ಇನ್ನು ದೀಪಾವಳಿಗೂ ಮುನ್ನವೇ ರಿಲಯನ್ಸ್ ಜಿಯೋ ಅತೀ ವೇಗದ ನೆಟ್‌ವರ್ಕ್ ಆದ 5ಜಿಯನ್ನು ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾದಲ್ಲಿ ಆರಂಭ ಮಾಡಲು ಮುಂದಾಗಿದೆ. ಹಾಗೆಯೇ ದೇಶದಾದ್ಯಂತ 2023ರ ಮಾರ್ಚ್ ಒಳಗೆ ಆರಂಭ ಮಾಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. ಹಾಗೆಯೇ ಅಗ್ಗದ ದರದಲ್ಲಿ 5ಜಿ ಸೇವೆ ನೀಡಲಾಗುವುದು ಎಂದು ಕೂಡಾ ಹೇಳಿದ್ದಾರೆ.

ಅಕ್ಟೋಬರ್ 3: ಕಚ್ಚಾತೈಲ ದರ ಏರಿಕೆ, ಪೆಟ್ರೋಲ್-ಡೀಸೆಲ್ ಬೆಲೆ ಹೇಗಿದೆ?

ಅಕ್ಟೋಬರ್ 3: ಕಚ್ಚಾತೈಲ ದರ ಏರಿಕೆ, ಪೆಟ್ರೋಲ್-ಡೀಸೆಲ್ ಬೆಲೆ ಹೇಗಿದೆ?

ಜಾಗತಿಕ ಕಚ್ಚಾತೈಲ ಬೆಲೆ ಇಂದು ( ಅಕ್ಟೋಬರ್ 3) ಏರಿಕೆಯಾಗಿದೆ. ಪ್ರತಿ ಬ್ಯಾರೆಲ್‌ಗೆ 110 ಡಾಲರ್ ಗಡಿ ದಾಟಿದ್ದ ಕಚ್ಚಾ ತೈಲ ದರ ಇತ್ತೀಚೆಗೆ ಕಡಿಮೆಯಾಗಿದೆ. 90ರ ಗಡಿಗಿಂತ ಕೆಳಗೆ ಇಳಿದಿದೆ. ಆದರೆ ಏರಿಳಿತ ಕಾಣುತ್ತಿದೆ. ಹಣದುಬ್ಬರ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಕಚ್ಚಾ ತೈಲ ದರ ಗಗನಕ್ಕೆ ಏರಿತ್ತು. ಆದರೆ ಭಾರತದಲ್ಲಿ ಕಳೆದ ಹಲವಾರು ದಿನಗಳಿಂದ ಇಂಧನ ದರ ಸ್ಥಿರತೆ ಕಾಯ್ದುಕೊಂಡಿದೆ.ಜೂನ್ 10ರಂದು ಪ್ರತಿ ಬ್ಯಾರೆಲ್‌ಗೆ 123.9 ಯುಎಸ್ ಡಾಲರ್‌ಗೆ ಏರಿತ್ತು. ಬಳಿಕ ಏರಿಳಿತ ಕಂಡು ಬಂದಿದೆ. ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿ ಮೇ 21ರಂದು ಘೋಷಣೆ ಮಾಡಿದೆ. ಈ ಹಿನ್ನೆಲೆ ಭಾರತದಲ್ಲಿ ಇಂಧನ ದರವು 22ರಿಂದಲೇ ಇಳಿಕೆಯಾಗಿದೆ. ಪಂಚ ರಾಜ್ಯಗಳ ಚುನಾವಣೆ ಬಳಿಕ, ಅಂದರೆ ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಮಾರ್ಚ್ 22 ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿತ್ತು. ದೇಶದಲ್ಲಿ ಪ್ರತಿದಿನ ತೈಲ ದರ ಏರಿಕೆ ಮಾಡಲಾಗಿತ್ತು. ಆದರೆ ಹಲವಾರು ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದವು, ಈ ನಡುವೆ ಸರ್ಕಾರ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಮಹಾರಾಷ್ಟ್ರ, ಕೇರಳ ಸೇರಿದಂತೆ ಕೆಲವು ರಾಜ್ಯಗಳು ಕೂಡಾ ಸೆಸ್ ಇಳಿಕೆ ಮಾಡಿದೆ. ಕರ್ನಾಟಕವೂ ಸೆಸ್ ಅನ್ನು ಇಳಿಕೆ ಮಾಡಬೇಕು ಎಂಬ ಬೇಡಿಕೆ ಇದೆ.

Gold Rate Today: ಬಂಗಾರದ ಬೆಲೆ ಸ್ಥಿರ, ಅ.2ರ ಬೆಲೆ ವಿವರ ಇಲ್ಲಿದೆ

Gold Rate Today: ಬಂಗಾರದ ಬೆಲೆ ಸ್ಥಿರ, ಅ.2ರ ಬೆಲೆ ವಿವರ ಇಲ್ಲಿದೆ

ಸತತ ಎರಡು ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ಬೆಲೆಯು ಶನಿವಾರ ಇಳಿಕೆಯಾಗಿದೆ, ಭಾನುವಾರ(ಅ.2)ರಂದು ಸ್ಥಿರವಾಗಿದೆ. ಗೋಲ್ಡ್ ರೇಟ್ ಒಂದು ದಿನ ಏರಿಕೆಯಾದರೆ ಮರುದಿನವೇ ಇಳಿಕೆ ಕಾಣುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಸ್ಥಿರವಾಗಿದೆ. 4 ಬಾರಿ ಹೆಚ್ಚಳವಾಗಿದೆ. ಇನ್ನು ಸತತ ಎರಡು ದಿನಗಳಿಂದ ಏರಿಕೆಯಾಗಿದ್ದ ಸಿಲ್ವರ್ ರೇಟ್ ಇಂದು ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 5 ಬಾರಿ ಮಾತ್ರ ಇಳಿದಿದೆ. 2 ಬಾರಿ ಸ್ಥಿರವಾಗಿದೆ.

ಅಕ್ಟೋಬರ್ 2ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ 46,500 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ 50,730 ರೂಪಾಯಿ ಆಗಿದೆ.