Movie Short News

'ಜಾನಿ' ಸೆಟ್ ನಲ್ಲಿ ವಿಜಿ ಮತ್ತು ರಂಗಾಯಣ ರಘು, ರಚಿತಾ ರಾಮ್!

'ಜಾನಿ' ಸೆಟ್ ನಲ್ಲಿ ವಿಜಿ ಮತ್ತು ರಂಗಾಯಣ ರಘು, ರಚಿತಾ ರಾಮ್!

ಕನಕ ಚಿತ್ರ ಮುಗಿಸಿರುವ ದುನಿಯಾ ವಿಜಯ್ ಮಾತ್ರ ಸೈಲಾಂಟ್ ಆಗಿ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರೀತಮ್ ಗುಬ್ಬಿ ನಿರ್ದೇಶನ ಮಾಡುತ್ತಿರುವ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ದುನಿಯಾ ವಿಜಯ್, ರಂಗಾಯಣ ರಘು ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ. ಇಬ್ಬರು ಶೂಟಿಂಗ್ ನಲ್ಲಿರುವ ಫೋಟೋ ಈಗ ಹರಿದಾಡುತ್ತಿದೆ. ಇನ್ನು ರಚಿತಾ ರಾಮ್ ಈ ಚಿತ್ರದ ನಾಯಕಿಯಾಗಿದ್ದು,ಶೂಟಿಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡದಲ್ಲಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ 'ರಾಜಕುಮಾರ'!

ಕನ್ನಡದಲ್ಲಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ 'ರಾಜಕುಮಾರ'!

ಪುನೀತ್ ರಾಜಕುಮಾರ್ ಅವರ 'ರಾಜಕುಮಾರ' ಸಿನಿಮಾ ಈಗಾಗಲೇ ಸಾಕಷ್ಟು ದಾಖಲೆಗಳನ್ನು ತನ್ನ ಖಾತೆಯಲ್ಲಿ ಇಟ್ಟುಕೊಂಡಿದೆ. ಅದೇ ರೀತಿ ಇದೀಗ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. 'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ..' ಹಾಡು ಈಗ ಯೂ ಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಿಸಿರುವ ಕನ್ನಡದ ಹಾಡು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಸದ್ಯ ಈ ಹಾಡು ಯೂಟ್ಯೂಬ್ ನಲ್ಲಿ 40 ಮಿಲಿಯನ್ ಗೂ ಹೆಚ್ಚು ಹಿಟ್ಸ್ ಪಡೆದಿದೆ. ಜೊತೆಗೆ 143000ಲೈಕ್ಸ್ ಪಡೆದಿದೆ.

ನಿರ್ದೇಶಕನ ಒಳಗಿನ ಕಥೆ ಹೇಳುವ 'ನನ್ ಮಗಳೇ ಹೀರೋಯಿನ್'

ನಿರ್ದೇಶಕನ ಒಳಗಿನ ಕಥೆ ಹೇಳುವ 'ನನ್ ಮಗಳೇ ಹೀರೋಯಿನ್'

'ನನ್ ಮಗಳೇ ಹೀರೋಯಿನ್' ಒಂದು ಪಕ್ಕಾ ಕಾಮಿಡಿ ಸಿನಿಮಾ. ನಗಿಸುವುದರ ಜೊತೆಗೆ ಒಬ್ಬ ಸಿನಿಮಾ ನಿರ್ದೇಶಕನ ಕಷ್ಟವನ್ನು ಚಿತ್ರದಲ್ಲಿ ಹೇಳಲಾಗಿದೆ. ಕಥೆ ಹಿಡಿದು ಗಾಂಧಿನಗರಕ್ಕೆ ಬರುವ ಪ್ರತಿ ನಿರ್ದೇಶಕನ ಕಥೆ ಸಿನಿಮಾದಲ್ಲಿದೆ. Rating: 3.0/5 ಸಂಪೂರ್ಣ ವಿಮರ್ಶೆ ತಿಳಿಯಲು ಮುಂದೆ ಓದಿ...

'ಪದ್ಮಾವತಿ' ವಿವಾದಕ್ಕೆ ಟ್ವಿಸ್ಟ್: ರಿಲೀಸ್ ದಿನಾಂಕ ಮುಂದಕ್ಕೆ ಹೋಯ್ತು.!

'ಪದ್ಮಾವತಿ' ವಿವಾದಕ್ಕೆ ಟ್ವಿಸ್ಟ್: ರಿಲೀಸ್ ದಿನಾಂಕ ಮುಂದಕ್ಕೆ ಹೋಯ್ತು.!

ವಿವಾದ ವಿಪರೀತವಾದ ಪರಿಣಾಮ 'ಪದ್ಮಾವತಿ' ಚಿತ್ರದ ಬಿಡುಗಡೆ ದಿನಾಂಕ ಬದಲಾಗಿದೆ ಎನ್ನಲಾಗುತ್ತಿದೆ. 'ಪದ್ಮಾವತಿ' ಚಿತ್ರಕ್ಕೆ ಸೆನ್ಸಾರ್ ಗಾಗಿ ಸಲ್ಲಿಸಿದ್ದ ಅರ್ಜಿ ಅಪೂರ್ಣವಾಗಿದೆ ಎಂಬ ಕಾರಣಕ್ಕೆ ಸೆನ್ಸಾರ್ ಮಂಡಳಿ ಚಿತ್ರದ ಬಿಡುಗಡೆಗೆ ತಾತ್ಕಲಿಕ ತಡೆ ನೀಡಿದೆ. ಪ್ರಮಾಣ ಪತ್ರಕ್ಕೆ ಸಹಿ ಹಾಕದೆ ಚಿತ್ರತಂಡಕ್ಕೆ ಅರ್ಜಿ ವಾಪಸ್ ನೀಡಿದೆ ಎನ್ನಲಾಗಿದೆ. ಡಿ.1ಕ್ಕೆ ರಿಲೀಸ್ ಆಗಬೇಕಿದ್ದ 'ಪದ್ಮಾವತಿ' ಸಿನಿಮಾ ಮೂಲಗಳ ಪ್ರಕಾರ ಜನವರಿ 12 ರಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆಯಂತೆ.