World Short News

ಈತ ಬೆನ್ನಿಗೆ ಶವರ್ ಕಟ್ಟಿಕೊಂಡು ಬಸ್ ನಿಲ್ದಾಣದಲ್ಲಿ ಸ್ನಾನ ಮಾಡಿದ : ವೈರಲ್

ಈತ ಬೆನ್ನಿಗೆ ಶವರ್ ಕಟ್ಟಿಕೊಂಡು ಬಸ್ ನಿಲ್ದಾಣದಲ್ಲಿ ಸ್ನಾನ ಮಾಡಿದ : ವೈರಲ್

 • ಇಲ್ಲೊಬ್ಬ ವ್ಯಕ್ತಿ ಬಿಸಿಲಿನ ಬೇಗೆಯಿಂದ ಕೂಲ್ ಆಗೋಕೆ ಬ್ಯಾಕ್‍ಪ್ಯಾಕ್‍ನಂತೆ ಶವರ್ ಜೊತೆಯಲ್ಲಿಟ್ಟುಕೊಂಡು ತಿರುಗುತ್ತಿದ್ದು, ಬಸ್ ನಿಲ್ದಾಣದಲ್ಲಿ ಸ್ನಾನ ಮಾಡುತ್ತಿದ್ದಾನೆ.
 • ಚೀನಾದ ಚಾಂಗ್‍ಕಿಂಗ್‍ನಲ್ಲಿ ಇದೇ ತಿಂಗಳು ಈ ವಿಡಿಯೋವನ್ನ ಸೆರೆಹಿಡಿಯಲಾಗಿದೆ.
 • ಪ್ರಸಕ್ತ ತಿಂಗಳಿನಲ್ಲಿ ಚಾಂಗ್‍ಕಿಂಗ್‍ನಲ್ಲಿ ಉಷ್ಣಾಂಶ 100 ಡಿಗ್ರಿ ದಾಟಿದೆ ಎಂದು ವರದಿಯಾಗಿದೆ.
ರಾಜಕುಮಾರಿ ಡಯಾನಾ ಲೈಂಗಿಕ ರಹಸ್ಯಗಳ ವಿಡಿಯೋ ಟೇಪ್ ಬಹಿರಂಗ!

ರಾಜಕುಮಾರಿ ಡಯಾನಾ ಲೈಂಗಿಕ ರಹಸ್ಯಗಳ ವಿಡಿಯೋ ಟೇಪ್ ಬಹಿರಂಗ!

 • ದಿವಂಗತ ರಾಜಕುಮಾರಿ ಡಯಾನಾ ಅವರ ಹೊಸ ವಿಡಿಯೋ ಟೇಪ್ ಬಹಿರಂಗ.
 • ಇಪ್ಪತ್ತೊಂದು ಗಂಟೆಗಳ ಆ ವಿಡಿಯೋದಲ್ಲಿ ತಮ್ಮ ಲೈಂಗಿಕ ವಿಚಾರ ಹೇಳಿಕೊಂಡಿರುವ ಡಯಾನಾ.
 • ಲಂಡನ್ ನ ಚಾನೆಲ್ 4 ಸುದ್ದಿ ಸಂಸ್ಥೆ ಹೇಳಿಕೆ.
ಬೋಟ್ಸ್ವಾನಾಗೆ ದಲೈ ಲಾಮ ಭೇಟಿ: ಚೀನಾ ಎಚ್ಚರಿಕೆ

ಬೋಟ್ಸ್ವಾನಾಗೆ ದಲೈ ಲಾಮ ಭೇಟಿ: ಚೀನಾ ಎಚ್ಚರಿಕೆ

 • ಆಫ್ರಿಕಾ ಬೋಟ್ಸ್ವಾನಾದ ರಾಜಧಾನಿಯಲ್ಲಿ ಮಾನವ ಹಕ್ಕುಗಳ ಸಮ್ಮೇಳನದಲ್ಲಿ ಆ.17-19ರಂದು ದಲೈ ಲಾಮ ಭಾಷಣ ಮಾಡಲಿದ್ದಾರೆ.
 • ಈ ಹಿನ್ನೆಲೆಯಲ್ಲಿ ಚೀನಾ ಆಫ್ರಿಕಾಗೆ ಎಚ್ಚರಿಕೆ ನೀಡಿದ್ದು, ದಲೈ ಲಾಮರ ಭೇಟಿಯ ವಿಷಯ ಚೀನಾದ ಸಾರ್ವಭೌಮತೆ ಹಾಗೂ ಪ್ರಾದೇಶಿಕ ಸಮಗ್ರತೆಗೆ ಸಂಬಂಧಿಸಿದ ವಿಷಯವಾಗಿದೆ.
 • ಈ ಹಿನ್ನೆಲೆಯಲ್ಲಿ ಚೀನಾದ ಹಿತಾಸಕ್ತಿಗಳನ್ನು ಗೌರವಿಸುವಂತೆ ಆಫ್ರಿಕಾದ ರಾಷ್ಟ್ರಕ್ಕೆ ಚೀನಾ ಆಗ್ರಹಿಸುತ್ತದೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲು ಕಾಂಗ್ ಹೇಳಿದ್ದಾರೆ.
ಕಂದಹಾರ್ ಸೇನಾ ನೆಲೆ ಮೇಲೆ ದಾಳಿ, 26 ಸೈನಿಕರು, 80 ಉಗ್ರರು ಬಲಿ

ಕಂದಹಾರ್ ಸೇನಾ ನೆಲೆ ಮೇಲೆ ದಾಳಿ, 26 ಸೈನಿಕರು, 80 ಉಗ್ರರು ಬಲಿ

 • ಅಫ್ಘಾನಿಸ್ತಾನದ ಪ್ರಮುಖ ನಗರ ಕಂದಹಾರ್ ನಲ್ಲಿರುವ ಸೇನಾ ನೆಲೆಯ ಮೇಲೆ ತಾಲಿಬಾನ್ ಉಗ್ರರ ದಾಳಿ
 • ಪರಿಣಾಮ 26 ಜನ ಸೈನಿಕರು ಅಸುನೀಗಿದ್ದು, ಘಟನೆಯಲ್ಲಿ 13 ಜನರು ಗಾಯಗೊಂಡಿದ್ದಾರೆ.
 • ಮಂಗಳವಾರ ತಡರಾತ್ರಿ ಕಂದಹಾರ್ ಪ್ರಾಂತ್ಯದ ಖಾಕ್ರೆಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
 • ಇನ್ನು ಘಟನೆಯಲ್ಲಿ 21 ಜನರು ನಾಪತ್ತೆಯಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಜತೆಗೆ 7 ಜನರನ್ನು ಉಗ್ರರು ಅಪಹರಿಸಿದ್ದಾರೆ.