Short News

ಹವಾಮಾನ ವರದಿ; ಮುಂದಿನ 4 ದಿನ ಮಳೆ ಸಾಧ್ಯತೆ

ಹವಾಮಾನ ವರದಿ; ಮುಂದಿನ 4 ದಿನ ಮಳೆ ಸಾಧ್ಯತೆ

ಚಂಡಮಾರುತ ಇತ್ಯಾದಿ ಕಾರಣಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯ ಆರ್ಭಟ ಇನ್ನೂ ಕೆಲ ದಿನಗಳ ಮುಂದುವರಿಯಲಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮುಂದಿನ 4 ದಿನಗಳ ಕಾಲ ಕರ್ನಾಟಕ ಸೇರಿ ದಕ್ಷಿಣದ ಬಹುತೇಕ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ.

ಇನ್ಫೋಸಿಸ್ ಸಿಇಒ ಆಗಿ ಸಲೀಲ್ ಪರೇಖ್ ಮರು ನೇಮಕ

ಇನ್ಫೋಸಿಸ್ ಸಿಇಒ ಆಗಿ ಸಲೀಲ್ ಪರೇಖ್ ಮರು ನೇಮಕ

ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸಲಿಲ್ ಎಸ್ ಪರೇಖ್ ಮರು ನೇಮಕವಾಗಿದ್ದಾರೆ


ಇನ್ಫೋಸಿಸ್ ಸಿಇಒ ಹಾಗೂ ಎಂಡಿಯಾಗಿ ಸಲೀಲ್ ಪರೇಖ್ ಅವರನ್ನು ಮುಂದಿನ ಐದು ವರ್ಷಗಳಿಗೆ ನೇಮಿಸಲಾಗಿದೆ ಎಂದು ಇನ್ಫೋಸಿಸ್ ಬೋರ್ಡ್ ಮೇ 22ರಂದು ಪ್ರಕಟಿಸಿದೆ. ಪರೇಖ್ ಜುಲೈ 1, 2022 ರಿಂದ ಮಾರ್ಚ್ 31, 2027 ರ ತನಕ ಸಿಇಒ ಆಗಿರಲಿದ್ದಾರೆ. ಇನ್ಫೋಸಿಸ್ ಸಂಸ್ಥೆ ಸಿಇಒ ಆಗುವುದಕ್ಕೂ ಮುನ್ನ ಕ್ಯಾಪ್ಜೆಮಿನಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರು

ಕಿಮ್ಕೊ ಕೆ ರೈಡರ್ 400 ಬೈಕ್ ಅನಾವರಣ

ಕಿಮ್ಕೊ ಕೆ ರೈಡರ್ 400 ಬೈಕ್ ಅನಾವರಣ

ಕಿಮ್ಕೊ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಿತ ಹೆಸರಲ್ಲದಿರಬಹುದು ಆದರೆ ತೈವಾನ್ ಬ್ರ್ಯಾಂಡ್ ಇತರ ಏಷ್ಯಾದ ಮಾರುಕಟ್ಟೆಗಳಲ್ಲಿ ಜನಪ್ರಿಯ ಬ್ರ್ಯಾಂಡ್ ಆಗಿದೆ. ಕಿಮ್ಕೊ ಕಂಪನಿಯು ತನ್ನ ಪ್ರೈಮ್ ಮಾರಾಟಗಾರ ಕೆ ರೈಡರ್ 400 ಬೈಕ್ ಅನ್ನು 2022 ವರ್ಷಕ್ಕೆ ನವೀಕರಿಸಿದೆ.
ಹನಿಟ್ರ್ಯಾಪ್: ಪಾಕ್‌ ಮಾಯಾಂಗನೆಯ ಬಲೆಗೆ ಬಿದ್ದ ಯೋಧ, ಬಂಧನ

ಹನಿಟ್ರ್ಯಾಪ್: ಪಾಕ್‌ ಮಾಯಾಂಗನೆಯ ಬಲೆಗೆ ಬಿದ್ದ ಯೋಧ, ಬಂಧನ

ಪಾಕಿಸ್ತಾನದ ಗುಪ್ತಚರ ಇಲಾಖೆಗಾಗಿ ಕೆಲಸ ಮಾಡುವ ಮಹಿಳಾ ಏಜೆಂಟ್‌ನ ಹನಿಟ್ರ್ಯಾಪ್ ಬಲೆಗೆ ಬಿದ್ದು ಭಾರತೀಯ ಸೇನೆಯ ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡ ಆರೋಪದ ಮೇಲೆ ಭಾರತೀಯ ಸೇನೆಯ ಯೋಧನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್‌ ಕುಮಾರ್‌ ಬಂಧಿತ ಭಾರತೀಯ ಸೇನೆಯ ಯೋಧ. "ಪ್ರದೀಪ್‌ ಕುಮಾರ್‌ ಜೋಧಪುರದಲ್ಲಿರುವ ಭಾರತೀಯ ಸೇನೆಯ ಅತಿ ಸೂಕ್ಷ್ಮ ರೆಜಿಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಾಕಿಸ್ತಾನದ ಗುಪ್ತಚರ ಇಲಾಖೆಗಾಗಿ ಕೆಲಸ ಮಾಡುವ ಮಹಿಳಾ ಏಜೆಂಟ್‌ಗೆ ಅಲ್ಲಿನ ಗೌಪ್ಯ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಪ್ರದೀಪ್‌ ಕುಮಾರ್‌ನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ,'' ಎಂದು ರಾಜಸ್ಥಾನ ಪೊಲೀಸ್‌ ಇಲಾಖೆಯ ಗುಪ್ತಚರ ವಿಭಾಗದ ಡಿಜಿ ಉಮೇಶ್‌ ಮಿಶ್ರ ಮಾಹಿತಿ ನೀಡಿದರು.