Karnataka Short News

ಮನೆಗೆ ನುಗ್ಗಿದ ಚಿರತೆ: ಶೌಚಾಲಯದಲ್ಲಿ ರಕ್ಷಣೆ ಪಡೆದ ಮಹಿಳೆಯರು

ಮನೆಗೆ ನುಗ್ಗಿದ ಚಿರತೆ: ಶೌಚಾಲಯದಲ್ಲಿ ರಕ್ಷಣೆ ಪಡೆದ ಮಹಿಳೆಯರು

ಏಕಾಏಕಿ ಮನೆಯೊಳಗೆ ಚಿರತೆ ನುಗ್ಗಿರುವ ಕಾರಣ ಮನೆಯ ಇಬ್ಬರು ಸದಸ್ಯರು ಮನೆಯ ಶೌಚಾಲಯದಲ್ಲಿ ಸಿಲುಕಿರುವ ಘಟನೆ ತುಮಕೂರು ಜಿಲ್ಲೆಯ ಜಯನಗರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಶನಿವಾರ ಬೆಳಗ್ಗೆ ನಗರದ ಜಯನಗರ ಪೂರ್ವ 1ನೇ ಕ್ರಾಸ್ ನಲ್ಲಿರುವ ರಂಗನಾಥ್ ಎಂಬುವರ ಮನೆಗೆ ಚಿರತೆ ನುಗ್ಗಿದೆ. ಚಿರತೆ ಮನೆಯೊಳಕ್ಕೆ ನುಗ್ಗುತ್ತಿದ್ದಂತೆ ಕುಟುಂಬದ ಸದಸ್ಯರು ಭಯಗೊಂಡು, ದಿಕ್ಕುಪಾಲಾಗಿ ಓಡಿ ಹೋಗಿ ಶೌಚಾಲಯದಲ್ಲಿ ರಕ್ಷಣೆ ಪಡೆದರು. ವಿನುತಾ, ವನಜಾಕ್ಷಿ ಎಂಬುವರು ಚಿರತೆಯನ್ನು ನೋಡಿ ಗಾಬರಿಯಿಂದ ಶೌಚಾಲಯಕ್ಕೆ ತೆರಳಿ ಬಾಗಿಲು ಹಾಕಿಕೊಂಡಿದ್ದಾರೆ.
ಪೇಜಾವರ ಶ್ರೀಗಳಿಗೆ ವಿಪರೀತ ಬೆನ್ನು ನೋವು, 15 ದಿನ ವಿಶ್ರಾಂತಿ ಸೂಚನೆ

ಪೇಜಾವರ ಶ್ರೀಗಳಿಗೆ ವಿಪರೀತ ಬೆನ್ನು ನೋವು, 15 ದಿನ ವಿಶ್ರಾಂತಿ ಸೂಚನೆ

ಇಲ್ಲಿನ ಹೈಟೆಕ್ ಆಸ್ಪತ್ರೆಯಲ್ಲಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಅವರನ್ನು ಎಲುಬು ಹಾಗೂ ಕೀಲು ತಜ್ಞರು ಪರೀಕ್ಷಿಸಿದ್ದು, ಸಿಟಿ ಸ್ಕ್ಯಾನ್ ಮಾಡಲಾಗಿದೆ. ಹದಿನೈದು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಲಾಗಿದೆ.

ಜನವರಿ ಹದಿನೇಳರಂದು ತಮ್ಮ ಪರ್ಯಾಯದ ಅವಧಿಯನ್ನು ಪೂರ್ತಿ ಮಾಡಿದ್ದ ಪೇಜಾವರ ಶ್ರೀಗಳು ಸಂಚಾರದಲ್ಲಿ ತೊಡಗಿದ್ದರು.

ಕೃಷ್ಣಮಠಕ್ಕೆ ರಾಹುಲ್, ಸುತ್ತೂರು ಮಠಕ್ಕೆ ಅಮಿತ್ ಶಾ? ಇದು ಮಠ ಪಾಲಿಟಿಕ್ಸ್

ಕೃಷ್ಣಮಠಕ್ಕೆ ರಾಹುಲ್, ಸುತ್ತೂರು ಮಠಕ್ಕೆ ಅಮಿತ್ ಶಾ? ಇದು ಮಠ ಪಾಲಿಟಿಕ್ಸ್

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜನವರಿ 25ಕ್ಕೆ ಕರ್ನಾಟಕಕ್ಕೆ ಆಗಮಿಸುತ್ತಿದ್ದರೆ, ಫೆಬ್ರವರಿ 10ರಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಯೂ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಚುನಾವಣಾ ಹೊಸ್ತಿಲಲ್ಲಿ ರಾಜ್ಯಕ್ಕೆ ಇವರೆಲ್ಲಾ ಬರಲೇಬೇಕು, ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ 'ಮಠ ಪಾಲಿಟಿಕ್ಸ್' ಶುರುವಾಗುತ್ತಾ ಎನ್ನುವುದೇ ಇಲ್ಲಿ ಪ್ರಶ್ನೆ. ರಾಹುಲ್ ಗಾಂಧಿ, ಶೃಂಗೇರಿ ಮತ್ತು ಉಡುಪಿಗೆ, ಅಮಿತ್ ಶಾ, ಸುತ್ತೂರು ಮಠಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.  

ನಾಗಾ ಸಾಧುಗಳು ಶಿವಮೊಗ್ಗಕ್ಕೆ, ಅದ್ದೂರಿ ಸ್ವಾಗತ

ನಾಗಾ ಸಾಧುಗಳು ಶಿವಮೊಗ್ಗಕ್ಕೆ, ಅದ್ದೂರಿ ಸ್ವಾಗತ

ನಗರದಲ್ಲಿ ನಾಳೆ (ಜನವರಿ 20) ಧರ್ಮಜಾಗರಣ ಸಮನ್ವಯ ಸಮಿತಿ ನಡೆಸಲಿರುವ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾಗ ಸಾಧುಗಳು ನಗರಕ್ಕೆ ಈಗ ಆಗಮಿಸಿದ್ದಾರೆ.

ಮೊದಲ ಬಾರಿಗೆ ಉತ್ತರ ಭಾರತದಿಂದ ಶಿವಮೊಗ್ಗಕ್ಕೆ ಆಗಮಿಸಿದ ಇಬ್ಬರು ನಾಗಸಾದುಗಳನ್ನು ಇಂದು ಬೆಳಿಗ್ಗೆ 9ಕ್ಕೆ ಸಹ್ಯಾದ್ರಿ ಕಾಲೇಜು ಸರ್ಕಲ್ ನಲ್ಲಿ ಸಮಿತಿ ಸದಸ್ಯರು ಸ್ವಾಗತಿಸಿ ಬರಮಾಡಿಕೊಂಡರು.

ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಸಮಿತಿ ಸದಸ್ಯರು ಇಬ್ಬರು ನಾಗ ಸಾಧುಗಳನ್ನು ಬೈಕ್ Rally ಮೂಲಕ ಮೆರವಣಿಗೆ ಮಾಡಿಕೊಂಡು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರೆದುಕೊಂಡು ಹೋದರು.