ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
ಜನವರಿ 28ರಂದು ಭಾರತೀಯ ಕಾಲಮಾನ ಬೆಳಗ್ಗೆ 03:18ಕ್ಕೆ ಕ್ಕೆ ಶುಕ್ರನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡಲಿದ್ದು ಇದರ ಪ್ರಭಾವ ರಾಶಿಗಳ ಮೇಲಿರಲಿದೆ ಎಂದು ವೈದಿಕ ಶಾಸ್ತ್ರ ಹೇಳುತ್ತದೆ.
ಯಾವೆಲ್ಲಾ ರಾಶಿಯವರಿಗೆ ಯಾವ ರೀತಿಯ ಪರಿಣಾಮಗಳು ಆಗಲಿವೆ ಎಂಬ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.
ಮೇಷ ರಾಶಿ
ಮೇಷ ರಾಶಿಯವರಲ್ಲಿ ಶುಕ್ರನು ಹತ್ತನೇ ಮನೆಗೆ ಸಂಚರಿಸಲಿದ್ದಾನೆ. ಜ್ಯೋತಿಷ್ಯದಲ್ಲಿ ಈ ಮನೆಯನ್ನು ಕರ್ಮ ಭಾವ ಎಂದೂ ಕರೆಯುತ್ತಾರೆ. ಈ ಮನೆಯಲ್ಲಿ ಶುಕ್ರನ ಸ್ಥಾನ ಇದ್ದರೆ ಅದು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ.