Short News

ಬರಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ರಿಯರ್ ಡಿಸ್ಕ್ ಬ್ರೇಕ್ ವೇರಿಯಂಟ್.

ಬರಲಿದೆ ಬಜಾಜ್ ಪಲ್ಸರ್ ಎನ್ಎಸ್ 160 ರಿಯರ್ ಡಿಸ್ಕ್ ಬ್ರೇಕ್ ವೇರಿಯಂಟ್.

ದೇಶಿಯ ಅಗ್ರ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾದ ಬಜಾಜ್ ಆಟೋ 2017ರಲ್ಲಿ ತಮ್ಮ ಪಲ್ಸರ್ ಎನ್ಎಸ್ 160 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಸಂಸ್ಥೆಯು ಈ ಬೈಕ್‍‍ಗೆ ಹೆಚ್ಚು ಸುರಕ್ಷಾ ಸೌಲತ್ತುಗಳನ್ನು ನೀಡಲು, ಹಿಂಭಾಗದ ಚಕ್ರಗಳಿಗೆ ಡಿಸ್ಕ್ ಬ್ರೇಕ್ ಅನ್ನು ಅಳವಡಿಸುತ್ತಿದೆ. ಬಜಾಜ್ ಪಲ್ಸರ್ ಎನ್ಎಸ್ 160 ಬೈಕ್ ಬಿಡುಗಡೆಗೊಂಡಾಗ ಮುಂಭಾಗ ಚಕ್ರಗಳಿಗೆ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರಗಳಿಗೆ ಡ್ರಮ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವದಿಸಲಾಗಿತ್ತು. ಆದರೇ ಇದೀಗ ಈ ಬೈಕ್ ಹಿಂಭಾಗದ ಚಕ್ರಗಳಿಗು ಡಿಸ್ಕ್ ಬ್ರೇಕ್ ಅನ್ನು ಪಡೆಯಲಿದ್ದು, ಕೆಲವೇ ದಿನಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ.
ಚಂದ್ರನಲ್ಲಿ ಮಂಜುಗಡ್ಡೆ: ದೃಢಪಡಿಸಿದ ಇಸ್ರೋದ ಚಂದ್ರಯಾನ ನೌಕೆ

ಚಂದ್ರನಲ್ಲಿ ಮಂಜುಗಡ್ಡೆ: ದೃಢಪಡಿಸಿದ ಇಸ್ರೋದ ಚಂದ್ರಯಾನ ನೌಕೆ

ಚಂದ್ರನ ದ್ರುವ ಪ್ರದೇಶಗಳಲ್ಲಿನ ಕಪ್ಪನೆಯ ಹಾಗೂ ತಣ್ಣನೆಯ ಭಾಗಗಳಲ್ಲಿ ಘನೀಕೃತ ನೀರಿನ ಅಸ್ತಿತ್ವ ಇದೆ ಎಂದು ನಾಸಾ ತಿಳಿಸಿದೆ. ಭಾರತ 10 ವರ್ಷಗಳ ಹಿಂದೆ ಉಡಾವಣೆ ಮಾಡಿದ್ದ ಚಂದ್ರಯಾನ-1 ಬಾಹ್ಯಾಕಾಶ ನೌಕೆಯು ನೀಡಿರುವ ಮಾಹಿತಿಗಳ ಆಧಾರದಲ್ಲಿ ನಾಸಾ ಈ ಮಾಹಿತಿ ನೀಡಿದೆ. ಚಂದ್ರನ ಮೇಲ್ಮೈನಲ್ಲಿ ಸಾಕಷ್ಟು ಪ್ರಮಾಣದ ಮಂಜುಗಡ್ಡೆಯಿದೆ. ಕೆಲವೇ ಮಿಲಿಮೀಟರ್‌ಗಳ ಅಂತರದಲ್ಲಿ ನೀರು ಸಿಗುವ ಸಾಧ್ಯತೆಯಿದೆ. ಇದರಿಂದ ಭವಿಷ್ಯದ ಚಟುವಟಿಕೆಗಳಿಗೆ ಸಂಪನ್ಮೂಲವಾಗಿ, ಜತೆಗೆ ಚಂದ್ರನಲ್ಲಿ ವಾಸ ಮಾಡುವ ಉದ್ದೇಶಕ್ಕೂ ನೆರವಾಗಲಿದೆ. ಮಂಜುಗಡ್ಡೆಯು ಅಲ್ಲಲ್ಲಿ ಹಂಚಿಹೋಗಿದ್ದು, ಬಹಳ ಪುರಾತನ ಕಾಲದ್ದಿರಬಹುದು ಎಂದು ನಾಸಾ ಅಭಿಪ್ರಾಯಪಟ್ಟಿದೆ.
ಅಪ್ರಾಪ್ತೆ ಮೇಲೆ ದೌರ್ಜನ್ಯ ಎಸಗಿದ್ದವರಿಗೆ ಗಲ್ಲು: ಐತಿಹಾಸಿಕ ತೀರ್ಪು

ಅಪ್ರಾಪ್ತೆ ಮೇಲೆ ದೌರ್ಜನ್ಯ ಎಸಗಿದ್ದವರಿಗೆ ಗಲ್ಲು: ಐತಿಹಾಸಿಕ ತೀರ್ಪು

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಯತ್ನ ಎಸಗಿದ್ದ ಇಬ್ಬರು ಕಿರಾತಕರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಮಧ್ಯ ಪ್ರದೇಶದ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಅಪ್ರಾಪ್ತರ ಮೇಲಿನ ಅತ್ಯಾಚಾರ ತಡೆಯಲು ಕೇಂದ್ರ ಸರ್ಕಾರವು ಪೋಕ್ಸೋ ಕಾಯ್ದೆಗೆ ತಿದ್ದುಪಡಿ ತಂದು, ಅಪ್ರಾಪ್ತೆ ಮೇಲಿನ ಅತ್ಯಾಚಕ್ಕೆ ಗಲ್ಲು ಶಿಕ್ಷೆಯನ್ನು ಕೊಡುವಂತೆ ಶಿಫಾರಸ್ಸು ಮಾಡಿದ ಮೇಲೆ ಮೊದಲಿಗೆ ತಿದ್ದುಪಡಿಯಾದ ಕಾನೂನು ಬಳಕೆಯಾಗಿ ಆರೋಪಿಗಳು ಗಲ್ಲಿಗೆ ಗುರಿಯಾದ ಮೊದಲ ಪ್ರಕರಣ ಇದಾಗಿದೆ. ಜೂನ್ 26ರಂದು ಮಧ್ಯಪ್ರದೇಶದ ಮಂದ್ಸಾರ್‌ನಲ್ಲಿ ಆಸಿಫ್ ಮತ್ತು ಇರ್ಪಾನ್ ಎಂಬ ಕಾಮಾಂಧರು 8

ಜಮ್ಮು ಮತ್ತು ಕಾಶ್ಮೀರದ ನೂತನ ರಾಜ್ಯಪಾಲರಾಗಿ ಸತ್ಯಪಾಲ್ ಮಲಿಕ್ ನೇಮಕ

ಜಮ್ಮು ಮತ್ತು ಕಾಶ್ಮೀರದ ನೂತನ ರಾಜ್ಯಪಾಲರಾಗಿ ಸತ್ಯಪಾಲ್ ಮಲಿಕ್ ನೇಮಕ

ಜಮ್ಮು ಮತ್ತು ಕಾಶ್ಮೀರದ ನೂತನ ರಾಜ್ಯಪಾಲರಾಗಿ ಸತ್ಯಪಾಲ್ ಮಲಿಕ್ ನೇಮಕವಾಗಿದ್ದಾರೆ. ಈ ಹಿಂದೆ ಅವರು ಬಿಹಾರದ ರಾಜ್ಯಪಾಲರಾಗಿದ್ದರು. ಸದ್ಯ ಅವರನ್ನು ವರ್ಗಾವಣೆ ಮಾಡಲಾಗಿದೆ.ಈ ವರ್ಗಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಲಾಲ್ ಜಿ ಟಂಡನ್ ಬಿಹಾರದ ನೂತನ ರಾಜ್ಯಪಾಲರಾಗಿ ಆಯ್ಕೆಯಾಗಿದ್ದಾರೆ. ಹರ್ಯಾಣ ರಾಜ್ಯಪಾಲರಾಗಿ ಸತ್ಯದೇವ್ ನಾರಾಯಣ್ ಆರ್ಯ, ತ್ರಿಪುರಾ ರಾಜ್ಯಪಾಲರಾಗಿ ಕಪ್ತಾನ್ ಸಿಂಗ್ ಸೋಲಂಕಿ, ಮೇಘಾಲಯ ರಾಜ್ಯಪಾಲರಾಗಿ ತಥಾಗತಾ ರಾಯ್, ಸಿಕ್ಕಿಂ ರಾಜ್ಯಪಾಲರಾಗಿ ಗಂಗಾಪ್ರಸಾದ್ ವರ್ಗಾವಣೆಯಾಗಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more