Short News

ಟ್ರಾಫಿಕ್ ಪೊಲೀಸರ ಭರ್ಜರಿ ಕಾರ್ಯಚರಣೆ- ಬೆಚ್ಚಿದ ಮಾಡಿಫೈ ಪ್ರಿಯರು..!

ಟ್ರಾಫಿಕ್ ಪೊಲೀಸರ ಭರ್ಜರಿ ಕಾರ್ಯಚರಣೆ- ಬೆಚ್ಚಿದ ಮಾಡಿಫೈ ಪ್ರಿಯರು..!

ಸಂಚಾರಿ ನಿಯಮಗಳನ್ನ ಉಲ್ಲಂಘಿಸುವವರ ವಿರುದ್ಧ ಬೆಂಗಳೂರು ಟ್ರಾಫಿಕ್ ಪೊಲೀಸರು ಈಗಾಗಲೇ ಸಾವಿರಾರು ಪ್ರಕರಣ ದಾಖಲಿಸಿ ಕಠಿಣಕ್ರಮ ಕೈಗೊಳ್ಳುತ್ತಿದ್ದರೂ ಕಾನೂನು ಬಾಹಿರವಾಗಿ ಮಾಡಿಫೈ ಮಾಡುವವರ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ. ಹೀಗಾಗಿ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿ ಬೈಕ್ ಎಕ್ಸಾಸ್ಟ್ ಮಾಡಿಫೈ ಮಾಡಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ಟ್ರಾಫಿಕ್ ಪೊಲೀಸರು ಮಾಡಿಫೈ ಪ್ರಿಯರಿಗೆ ಶಾಕ್ ನೀಡುತ್ತಿದ್ದಾರೆ. ಒಂದು ವೇಳೆ ನೀವು ಕೂಡಾ ರಾಯಲ್ ಬೈಕ್ ಅಥವಾ ಇತರೆ ಸೂಪರ್ ಬೈಕ್‌ಗಳನ್ನು ಹೊಂದಿದ್ದರೆ ಕಾನೂನು ಬಾಹಿರ ಬೈಕ್ ಮಾಡಿಫೈ ಮಾಡಿಸುವ ಮತ್ತೊಮ್ಮೆ ಯೋಚಿಸಿ.
ವಿದೇಶಿ ಪತ್ರಿಕೆಗಳಲ್ಲಿ ವಾಜಪೇಯಿ ಬಗೆಗೆ ಅಧ್ಬುತ ಹೆಡ್ ಲೈನ್

ವಿದೇಶಿ ಪತ್ರಿಕೆಗಳಲ್ಲಿ ವಾಜಪೇಯಿ ಬಗೆಗೆ ಅಧ್ಬುತ ಹೆಡ್ ಲೈನ್

ಸದಾ ತನ್ನ ಚುರುಕಾದ ಕುಟುಕುವ ತಲೆಬರಹದಿಂದ ಖ್ಯಾತವಾಗಿರುವ ಟೆಲಿಗ್ರಾಫ್ ಪತ್ರಿಕೆ ವಾಜಪೇಯಿ ಅವರ ನಿಧನಕ್ಕೆ ಅದ್ಬುತ ಹೆಡ್‌ಲೈನ್ ನೀಡಿದೆ. ಪ್ರಸ್ತುತ ರಾಜಕೀಯಕ್ಕೂ ಸಲ್ಲುವಂತೆ 'ರಾಜಧರ್ಮ ರಿಮೈಂಡರ್'(ರಾಜಧರ್ಮ ನೆನಪಿಸುವಾತ)ಎಂದು ತಲೆ ಬರಹ ನೀಡಿದೆ. ಪ್ರಧಾನಿ ಮೋದಿಗೆ ರಾಜಧರ್ಮ ಪಾಲಿಸುವಂತೆ ಅಟಲ್‌ ಜೀ ಹೇಳಿದ್ದು ಆಗ ಬಹುದೊಡ್ಡ ಸುದ್ದಿಯಾಗಿತ್ತು. ಇನ್ನು ನ್ಯೂ ಯಾರ್ಕ್ ಟೈಮ್ಸ್‌ ವರದಿಯಂತೆ ಪರಮಾಣು ರೇಸ್ ಹಾಗೂ ಶಾಂತಿ ಎರಡನ್ನೂ ಪ್ರಾರಂಭಿಸಿದ್ದಾತ ನಿಷ್ಕಲ್ಮಷ ರಾಜಕಾರಣಿ ಎಂದು ಗುರುತಿಸಿದೆ. ಅವರೊಬ್ಬ ಬಲಫಂಥೀಯ ರಾಜಕಾರಣಿ ಆಗಿದ್ದರು. ಅವರು ಮೂಡಿಸಿರುವ ಛಾಪು ಭಾರತ ರಾಜಕಾರಣದಲ್ಲಿ ಬಹಳ ಕಾಲ ಉಳಿಯಲಿದೆ ಎಂದಿದೆ.
ನಿಮ್ಮ ಮೊಬೈಲ್ 'ಸಿಮ್' ಜೋಪಾನ!.ಈ ಒಂದು ತಪ್ಪಿಗೆ ನೀವು ಮನೆ ಮಠ ಕಳೆದುಕೊಳ್ಳಬಹುದು!

ನಿಮ್ಮ ಮೊಬೈಲ್ 'ಸಿಮ್' ಜೋಪಾನ!.ಈ ಒಂದು ತಪ್ಪಿಗೆ ನೀವು ಮನೆ ಮಠ ಕಳೆದುಕೊಳ್ಳಬಹುದು!

ಈ ಮೊದಲು ಆಮಿಷಗಳನ್ನು ತೋರಿಸಿ ಜನರಿಗೆ ವಂಚಿಸುತ್ತಿದ್ದ ಸೈಬರ್ ಕ್ರಿಮಿನಲ್‌ಗಳು ಈಗ 'ಸಿಮ್ ಸ್ವ್ಯಾಪ್' ಎಂಬ ಹೊಸ ಮಾದರಿಯ ಅಪರಾಧ ದಾರಿಯನ್ನು ಕಂಡುಕೊಂಡಿದ್ದಾರೆ. ತಂತ್ರಜ್ಞಾನಗಳ ಬಗ್ಗೆ ಸಾಕಷ್ಟು ಮಾಹಿತಿ ಇರುವವರನ್ನು ಸಹ ಸುಲಭವಾಗಿ ವಂಚಿಸಬಹುದಾದ ಈ 'ಸಿಮ್ ಸ್ವ್ಯಾಪ್‌ ವಂಚನೆ' ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತಕೇಳಿ ಬರುತ್ತಿದೆ.ಹೌದು, ಈ ಸ್ಮಾರ್ಟ್‌ಫೋನ್‌, ಡಿಜಿಟಲ್‌ ವ್ಯವಹಾರದ ಬಗ್ಗೆ ಅಜ್ಞಾನ ಇದ್ದವರು ಮಾತ್ರ ಹಣ ಕಳೆದುಕೊಳ್ಳುತ್ತಾರೆ ಎನ್ನಲಾಗುತ್ತಿತ್ತು. ಆದರೆ, ಸಿಮ್ ಸ್ವ್ಯಾಪ್ ಹಗರಣದಲ್ಲಿ ನಗರದ ಪ್ರದೇಶದ ಯುವಕರೇ ಬಲೆಗೆ ಬಿದ್ದಿದ್ದಾರೆ.

ಪರಮಾಣು ಶಕ್ತಿ ತುಂಬಿದ ಶಾಂತಿಧೂತ: ವಿದೇಶಿ ಪತ್ರಿಕೆಗಳಲ್ಲಿ ವಾಜಪೇಯಿ

ಪರಮಾಣು ಶಕ್ತಿ ತುಂಬಿದ ಶಾಂತಿಧೂತ: ವಿದೇಶಿ ಪತ್ರಿಕೆಗಳಲ್ಲಿ ವಾಜಪೇಯಿ

ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತು ರಾಷ್ಟ್ರ ಮಾತ್ರವಲ್ಲ ಅಂತರ್ ರಾಷ್ಟ್ರ ವಲಯದಲ್ಲಿಯೂ ಭಾರಿ ಮನ್ನಣೆ ಇತ್ತು. ವಿದೇಶಾಂಗ ವ್ಯವಹಾರಗಳಲ್ಲಿ ಆಸಕ್ತಿ ಇದ್ದ ಅವರಿಗೆ ವಿದೇಶ ರಾಜಕಾರಣಿಗಳು ಆಪ್ತರಾಗಿದ್ದರು. ಅವರು ಪ್ರಧಾನಿಯಾದ ಮೇಲೆ ಪಾಕಿಸ್ತಾನವೂ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಗಟ್ಟಿ ಮಾಡುವ ಪ್ರಯತ್ನ ಮಾಡಿದ್ದರು. ತಾವು ಹೋದ ರಾಷ್ಟ್ರದಲ್ಲಿ ತಮ್ಮದೊಂದು ಛಾಪು ಮೂಡಿಸದೇ ಬರುತ್ತಿರಲಿಲ್ಲ. ಭಾರತ ಕಂಡ ಅಗ್ರಮಾನ್ಯ ರಾಜಕೀಯ ಮುತ್ಸದ್ದಿಗೆ ದೇಶದ ಮಾಧ್ಯಮ ವಲಯ ನುಡಿ ಗೌರವ ಸಲ್ಲಿಸಿದೆ. ಹಾಗೆಯೇ ಅಂತರರಾಷ್ಟ್ರೀಯ ಪತ್ರಿಕೆಗಳೂ ಕೂಡ ವಾಜಪೇಯಿ ಅವರ ಅಗಲಿಕೆಯನ್ನು ಪದಗಳ ಮೂಲಕ ಸ್ಮರಿಸಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more