Short News

ಟ್ರಾಫಿಕ್ ಪೊಲೀಸರಿಗೆ ಶಾಕ್ ನೀಡಿದ ಸರ್ಕಾರ!..ಸಾರ್ವಜನಿಕರಿಗೆ ಸಿಹಿಸುದ್ದಿ!!

ಟ್ರಾಫಿಕ್ ಪೊಲೀಸರಿಗೆ ಶಾಕ್ ನೀಡಿದ ಸರ್ಕಾರ!..ಸಾರ್ವಜನಿಕರಿಗೆ ಸಿಹಿಸುದ್ದಿ!!

ಟ್ರಾಫಿಕ್ ಪೊಲೀಸರು ವಾಹನ ಸವಾರರಿಂದ ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪತ್ರ (ಆರ್‌ಸಿ) ಮತ್ತು ಇನ್ಶೂರೆನ್ಸ್ ದಾಖಲೆ ಪತ್ರಗಳ ಮೂಲ ದಾಖಲೆಯೇ ಪರಿಶೀಲನೆಗೆ ಬೇಕೆಂದು ಕೇಳುವಂತಿಲ್ಲ ಎಂದು ಸಚಿವಾಲಯ ಸೂಚಿಸಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮಗಳಂತೆ ವಾಹನ ಸವಾರರಿಂದ ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪತ್ರ ಮತ್ತು ಇನ್ಶೂರೆನ್ಸ್ ಪತ್ರಗಳ ಮೂಲ ದಾಖಲೆಯನ್ನೇ ಕೇಳುವಂತಿಲ್ಲ. ಇದು ರಾಜ್ಯ ಸರ್ಕಾರದ ವ್ಯಾಪ್ತಿಗೂ ಒಳಪಡಲಿದ್ದು, 'ಎಲೆಕ್ಟ್ರಾನಿಕ್‌ ಸ್ವರೂಪದ' ದಾಖಲೆಗಳನ್ನು ಅಧಿಕೃತವೆಂದೇ ಅಧಿಕಾರಿಗಳು ಪರಿಗಣಿಸತಕ್ಕದ್ದು ಎಂದು ಸಚಿವಾಲಯ ತಿಳಿಸಿದೆ.
ಕೆಪಿಎಲ್ 2018: ಟಾಸ್ ಗೆದ್ದ ಬೆಳಗಾವಿ ಪ್ಯಾಂಥರ್ಸ್ ಮೊದಲು ಫೀಲ್ಡಿಂಗ್

ಕೆಪಿಎಲ್ 2018: ಟಾಸ್ ಗೆದ್ದ ಬೆಳಗಾವಿ ಪ್ಯಾಂಥರ್ಸ್ ಮೊದಲು ಫೀಲ್ಡಿಂಗ್

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ(ಆಗಸ್ಟ್ 15) ಸಂಜೆ ಮಳೆ ಕಾರಣ ಕೊಂಚ ತಡವಾಗಿ ಬಿಸಿ ಬಿಸಿ ಕ್ರಿಕೆಟ್ ಆರಂಭವಾಗಿದೆ. ರಾಬಿನ್ ಉತ್ತಪ್ಪ ನೇತೃತ್ವದ ಬೆಂಗಳೂರು ಬ್ಲಾಸ್ಟರ್ಸ್ ಗೆ ಟಾಸ್ ಸೋತರೂ ಮೊದಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದೆ ಮಳೆ ಕಾರಣ ತಡವಾಗಿ ಕೆಪಿಎಲ್ 2018 ಉದ್ಘಾಟನಾ ಪಂದ್ಯ ಆರಂಭವಾಗಿದೆ. 18ವರ್ಷ ವಯಸ್ಸಿನ ಎಡಗೈ ಸ್ಪಿನ್ನರ್ ಶುಭಾಂಗ್ ಅವರು ಕೆಎಸ್ ಸಿಎ ಲೀಗ್ ನಲ್ಲಿ ಅದ್ಭುತ ಪ್ರದರ್ಶನ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಟಿ20ಕ್ರಿಕೆಟ್ ನಲ್ಲಿ ಒಳ್ಳೆ ಹಿಟ್ಟರ್ ಗಳೆನಿಸಿರುವ ರಾಬಿನ್ ಉತ್ತಪ್ಪ ಹಾಗೂ ಪವನ್ ದೇಶಪಾಂಡೆರನ್ನು ಶುಭಾಂಗ್ ಅವರು ಹೇಗೆ ಕಟ್ಟಿ ಹಾಕುತ್ತಾರೆಂದು ನೋಡಬೇಕಿದೆ.
ನಿಲ್ಲದ ಮಳೆ, ಕರ್ನಾಟಕದ 14 ಜಿಲ್ಲೆಗಳಲ್ಲಿ ಹೈ ಅಲರ್ಟ್!

ನಿಲ್ಲದ ಮಳೆ, ಕರ್ನಾಟಕದ 14 ಜಿಲ್ಲೆಗಳಲ್ಲಿ ಹೈ ಅಲರ್ಟ್!

ದಕ್ಷಿಣ ಭಾರತದಲ್ಲಿ ಮುಂಗಾರು ಅಬ್ಬರ ಮುಂದುವರೆದಿದ್ದು, ಕೇರಳದಲ್ಲಿ ಅಬ್ಬರಿಸುತ್ತಿರುವ ಮುಂಗಾರು ಮಳೆ ಕರ್ನಾಟಕದ ಕರಾವಳಿ ಪ್ರದೇಶಕ್ಕೂ ವ್ಯಾಪಿಸಿದೆ. ಪರಿಣಾಮ ಕರ್ನಾಟಕದ ನದಿಗಳಲ್ಲಿನ ನೀರಿನ ಪ್ರಮಾಣ ಹೆಚ್ಚಾಗಿದ್ದು, ಕೊಡಗು, ಭಾಗಮಂಡಲದಲ್ಲಿ ಭಾರಿ ಮಳೆಯಾಗುತ್ತಿದೆ. ಮಾತ್ರವಲ್ಲ ಕಾವೇರಿ ಉಕ್ಕಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ,ಹಾಸನ,ಕೊಡಗು,ಮೈಸೂರು,ಮಂಡ್ಯ,ದಾವಣಗೆರೆ, ಚಾಮರಾಜನಗರ,ಬೆಳಗಾವಿ,ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಪ್ರವಾಹ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 237 ಕೋಟಿ ಹಣವನ್ನು ಮೀಸಲಿಟ್ಟಿದೆ.
ಏರ್  ಇಂಡಿಯಾಕ್ಕಾಗಿ ರಕ್ಷಣಾ ಸಚಿವೆ ನಿರ್ಮಲಾಗೆ ದೇವೇಗೌಡರಿಂದ ಪತ್ರ!

ಏರ್ ಇಂಡಿಯಾಕ್ಕಾಗಿ ರಕ್ಷಣಾ ಸಚಿವೆ ನಿರ್ಮಲಾಗೆ ದೇವೇಗೌಡರಿಂದ ಪತ್ರ!

ದೇಶದ 'ರಕ್ಷಣಾ ರಾಜಧಾನಿ' ಎನಿಸಿಕೊಂಡಿರುವ ಬೆಂಗಳೂರಿನ ಹೆಮ್ಮೆಯ ಕಾರ್ಯಕ್ರಮಗಳಲ್ಲಿ ಒಂದೆನಿಸಿರುವ 'ಏರೋ ಇಂಡಿಯಾ' 2018 ಸ್ಥಳಾಂತರದ ಬಗ್ಗೆ ಎದ್ದಿರುವ ವಿವಾದ ಇನ್ನೂ ಬಗೆಹರಿದಿಲ್ಲ. ಈ ನಡುವೆ ಈ ಕುರಿತಂತೆ ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡ ಅವರು ಪ್ರತಿಕ್ರಿಯಿಸಿ, ಬೆಂಗಳೂರಿನಲ್ಲೇ ಏರೋ ಇಂಡಿಯಾ ಶೋ ನಡೆಯಲಿದೆ ಎಂದಿದ್ದಾರೆ. ಏರೋ ಇಂಡಿಯಾ ಸ್ಥಳಾಂತರವಾಗಬಾರದು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಬೆಂಗಳೂರಿನಲ್ಲೇ ಏರ್ ಶೋ ನಡೆಸುವಂತೆ ಒತ್ತಾಯಿಸುತ್ತೇನೆ ಎಂದಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more