Short News

2019ರ ಕವಾಸಕಿ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್ ಬಿಡುಗಡೆ

2019ರ ಕವಾಸಕಿ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್ ಬಿಡುಗಡೆ

ಕವಾಸಕಿ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಸೂಪರ್ ಬೈಕ್ ಮಾದರಿಗಳಾದ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ 2019ರ ಆವೃತ್ತಿಗಳನ್ನ ಬಿಡುಗಡೆ ಮಾಡಿದೆ.ಕಳೆದ 2 ವರ್ಷಗಳ ಹಿಂದೆಯೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಹೊಸ ಆವೃತ್ತಿಗಳನ್ನು ಕಾಣುತ್ತಿರುವ ನಿಂಜಾ ಹೆಚ್2, ಹೆಚ್2 ಕಾರ್ಬನ್ ಮತ್ತು ಹೆಚ್2ಆರ್ ಬೈಕ್‌ಗಳು ಇದೀಗ ವಿಶ್ವದರ್ಜೆ ಸೌಲಭ್ಯಗಳೊಂದಿಗೆ ಮರು ಬಿಡುಗಡೆಯಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಹೆಚ್2 ಬೈಕಿನ ಬೆಲೆಯನ್ನು ರೂ.34.50 ಲಕ್ಷಕ್ಕೆ, ಹೆಚ್2 ಕಾರ್ಬನ್ ಬೈಕ್ ಬೆಲೆಯನ್ನು ರೂ. 41 ಲಕ್ಷಕ್ಕೆ ಮತ್ತು ಹೆಚ್2ಆರ್ ಬೈಕಿನ ಬೆಲೆಯನ್ನು ರೂ. 72 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.
ನಿಮ್ಮ ಕಲ್ಪನೆಗೂ ಸಿಗದ ನೂತನ ತಂತ್ರಜ್ಞಾನ ಈ 'ಬಿಹೇವಿಯರಲ್ ಬಯೊಮೆಟ್ರಿಕ್ಸ್'!!

ನಿಮ್ಮ ಕಲ್ಪನೆಗೂ ಸಿಗದ ನೂತನ ತಂತ್ರಜ್ಞಾನ ಈ 'ಬಿಹೇವಿಯರಲ್ ಬಯೊಮೆಟ್ರಿಕ್ಸ್'!!

ಈ ತಂತ್ರಜ್ಞಾನ ಪ್ರಪಂಚದ ಆಳ ಅಗಲಗಳನ್ನು ಅರ್ಥಮಾಡಿಕೊಳ್ಳಲು ಇಡೀ ಜೀವನ ಕೂಡ ಸಾಕಾಗದು ಎಂದು ಅನಿಸಿಸುವುದು ಸಾಮಾನ್ಯ. ಏಕೆಂದರೆ, ಈ ಹೊತ್ತಿಗಾಗಲೇ ತಂತ್ರಜ್ಞಾನ ಆ ರೀತಿಯಲ್ಲಿ ಬೆಳೆದುಬಿಟ್ಟಿದೆ. ನಮಗೆ ತಿಳಿಯದಂತೆ ನಮ್ಮ ಊಹೆಗೂ ಸಿಗದಂತೆ ತಂತ್ರಜ್ಞಾನ ನಮ್ಮನ್ನಾವರಿಸಿದೆ. ಇದಕ್ಕೆ ಹೊಸ ಉದಾಹರಣೆ ಎಂದರೆ 'ಬಿಹೇವಿಯರಲ್ ಬಯೊಮೆಟ್ರಿಕ್ಸ್'!ಹೌದು, ಇಂತಹದೊಂದು ಶಬ್ದ ನಿಮ್ಮ ಕಿವಿಗೆ ಬಿದ್ದಾಕ್ಷಣ 'ಬಯೊಮೆಟ್ರಿಕ್ಸ್' ಎಂಬ ಪದ ಮಾತ್ರ ನಿಮ್ಮ ಕಲ್ಪನೆಗೆ ಮೂಡುತ್ತದೆ. ಆದರೆ, 'ಬಿಹೇವಿಯರಲ್ ಬಯೊಮೆಟ್ರಿಕ್ಸ್' ಎಂಬ ತಂತ್ರಜ್ಞಾನ ನಿಮ್ಮ ಊಹೆಯನ್ನು ಸಹ ಮೀರಿದೆ.

RSS ಅಂತರ್ಜಾತೀಯ ವಿವಾಹವನ್ನು ವಿರೋಧಿಸೋಲ್ಲ: ಭಾಗವತ್

RSS ಅಂತರ್ಜಾತೀಯ ವಿವಾಹವನ್ನು ವಿರೋಧಿಸೋಲ್ಲ: ಭಾಗವತ್

ರಾಷ್ಟ್ರೀಯ ಸ್ವಯಂಸೇವಕಸಂಘವು ಅಂತರ್ಜಾತೀಯ ವಿವಾಹವನ್ನು ವಿರೋಧಿಸುವುದಿಲ್ಲ ಎಂದು RSSಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ 3 ದಿನಗಳ ಆರೆಸ್ಸೆಸ್ ಉಪನ್ಯಾಸ ಸರಣಿಯ ಮೂರನೇ ದಿನವಾದ ಬುಧವಾರ ಅವರು ಮಾತನಾಡುತ್ತಿದ್ದರು. 'ಸಂಘದ ಎಷ್ಟೋ ಕಾರ್ಯಕರ್ತರ ನಡುವಲ್ಲೇ ಇಂಥ ವಿವಾಹಗಳಾಗಿವೆ. ನಾವು ಅದನ್ನು ವಿರೋಧಿಸುವುದಿಲ್ಲ.' ಎಂದು ಭಾಗವತ್ ಹೇಳಿದ್ದಾರೆ. 1942ರಲ್ಲಿ ಮೊದಲ ಅಂತರ್ಜಾತೀಯ ವಿವಾಹವಾದಾಗ, ಜೋಡಿಗಳಿಗೆ ಮೊದಲು ಅಭಿನಂದನೆ ಸಲ್ಲಿಸಿದ್ದು ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಮತ್ತು ಆರೆಸ್ಸೆಸ್ ನ ಸರಸಂಘಚಾಲಕ್ ಆಗಿದ್ದ ಗುರೂಜಿ(ಮಾಧವರಾವ್ ಗೋಳ್ವಲ್ಕರ್) ಎಂಬುದನ್ನು ಅವರು ಸ್ಮರಿಸಿದರು.
ಪಾಕಿಸ್ತಾನ ಪರ ಬೇಹುಗಾರಿಕೆ, ಬಿಎಸ್‌ಎಫ್‌ ಜವಾನ ಬಂಧನ

ಪಾಕಿಸ್ತಾನ ಪರ ಬೇಹುಗಾರಿಕೆ, ಬಿಎಸ್‌ಎಫ್‌ ಜವಾನ ಬಂಧನ

ಪಾಕಿಸ್ತಾನದ ಐಎಸ್‌ಐ ಪರವಾಗಿ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಿಎಸ್‌ಎಫ್‌ ಜವಾನನ್ನು ಬಂಧಿಸಲಾಗಿದೆ. ಗೂಢಚಾರಿಕೆ ನಡೆಸುವಂತೆ ಹನಿ ಟ್ರ್ಯಾಪ್ ಮಾಡಿ ಜವಾನನ ಮೇಲೆ ಒತ್ತಡ ಹಾಕಲಾಗಿತ್ತು. ಬಂಧಿತನನ್ನು ಅಚ್ಯುತಾನಂದ ಮಿಶ್ರಾ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ಪಡೆ ಪೊಲೀಸರು ನೋಯ್ಡಾದಲ್ಲಿ ಬುಧವಾರ ಮಿಶ್ರಾನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಅಚ್ಯುತಾನಂದ ಮಿಶ್ರಾ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more