Short News

ಲಾಭದಾಯಕ ಸಂಸ್ಥೆಗಳ ಪೈಕಿ ಬಿಎಂಡಬ್ಲ್ಯು ಹಿಂದಿಕ್ಕಿದ ಸುಜುಕಿ

ಲಾಭದಾಯಕ ಸಂಸ್ಥೆಗಳ ಪೈಕಿ ಬಿಎಂಡಬ್ಲ್ಯು ಹಿಂದಿಕ್ಕಿದ ಸುಜುಕಿ

ಸದ್ಯ ದೇಶದಲ್ಲಿ ಕಾರು ಖರೀದಿ ಟ್ರೆಂಡ್ ಹೇಗಿದೆ ಅಂದ್ರೆ, ಮಾರಾಟವಾಗುವ ಪ್ರತಿ ನೂರು ಕಾರುಗಳ ಪೈಕಿ 50ರಿಂದ 55 ಕಾರುಗಳು ಮಾರುತಿ ಸುಜುಕಿ ನಿರ್ಮಾಣದ ಕಾರುಗಳೇ ರಸ್ತೆಗಿಳಿಯುತ್ತಿದ್ದು, ಇದೇ ಕಾರಣಕ್ಕೆ ಲಾಭಾಂಶ ವಿಚಾರದಲ್ಲಿ ಐಷಾರಾಮಿ ಸಂಸ್ಥೆಗಳನ್ನೇ ಮಿರಿಸಿರುವ ಸುಜುಕಿ ಸಂಸ್ಥೆಯು ಭಾರತವಷ್ಟೇ ಅಲ್ಲದೇ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ತನ್ನದೇ ಆದ ಬೇಡಿಕೆ ಹೊಂದಿದೆ.ಇದೇ ಕಾರಣಕ್ಕೆ ಭಾರತದಲ್ಲಿ ನಂ.1 ಕಾರು ಉತ್ಪಾದನೆ ಮತ್ತು ಮಾರಾಟ ಸಂಸ್ಥೆಯಾಗಿ ಹೊರಹೊಮ್ಮಿರುವ ಮಾರುತಿ ಸುಜುಕಿ ಸಂಸ್ಥೆಯು ಶೇ.51ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದು, ಬಿಎಂಡಬ್ಲ್ಯು ಸಂಸ್ಥೆಗಿಂತಲೂ ಭಾರೀ ಲಾಭಾಂಶ ತನ್ನದಾಗಿಸಿಕೊಂಡಿದೆ.
'ಕ್ಲಸ್ಟರ್ ತಲೆನೋವನ್ನು' ಮಾತ್ರೆಗಳಿಲ್ಲದೆ ನಿಯಂತ್ರಿಸಬಹುದು!

'ಕ್ಲಸ್ಟರ್ ತಲೆನೋವನ್ನು' ಮಾತ್ರೆಗಳಿಲ್ಲದೆ ನಿಯಂತ್ರಿಸಬಹುದು!

ಕ್ಲಸ್ಟರ್ ತಲೆನೋವಿಗೆ ಕೆಲವೊಂದು ಮನೆಮದ್ದುಗಳು..ಇಲ್ಲಿದೆ ನೋಡಿ, ತುಂಬಾ ಖಾರವಾಗಿರುವಂತಹ ಮೆಣಸಿನಲ್ಲಿ ಕ್ಯಾಪ್ಸಿಸಿನ್ ಅಂಶವಿದ್ದು, ಇದು ಕ್ಲಸ್ಟರ್ ತಲೆನೋವನ್ನು ತಗ್ಗಿಸುವುದು ಎಂದು ಅಧ್ಯಯನಗಳು ಹೇಳಿವೆ. ಇದರಿಂದ ಕ್ಯಾಪ್ಸಿಸಿನ್ ಮೂಗಿನ ಸ್ಪ್ರೇ ಕಪಾಲ ಸಂಬಂಧ ನರವನ್ನು ದುರ್ಬಲಗೊಳಿಸಿ ಮತ್ತು ಕ್ಲಸ್ಟರ್ ನೋವಿನಲ್ಲಿ ಇರುವಂತಹ ರಾಸಾಯನಿಕದ ಮಟ್ಟವನ್ನು ಕಡಿಮೆ ಮಾಡಿಕೊಡುವುದು. ನಿಮಗೆ ಪದೇ ಪದೇ ಕ್ಲಸ್ಟರ್ ತಲೆನೋವು ಕಾಡುತ್ತಲಿದ್ದರೆ, ಆಗ ನಿಮ್ಮ ದೇಹದಲ್ಲಿ ಮೆಗ್ನಿಶಿಯಂ ಮಟ್ಟವು ಕಡಿಮೆ ಇದೆ ಎಂದು ತಿಳಿದುಕೊಳ್ಳಿ. ಮೆಗ್ನಿಶಿಯಂ ಅಧಿಕವಾಗಿರುವಂತಹ ಆಹಾರ ಸೇವನೆ ಮಾಡಿದರೆ ಒಳ್ಳೆಯದು.

ಕೇರಳ: ಅತ್ಯಾಚಾರ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಕುಟುಂಬಕ್ಕೆ ಜೀವ ಬೆದರಿಕೆ

ಕೇರಳ: ಅತ್ಯಾಚಾರ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಕುಟುಂಬಕ್ಕೆ ಜೀವ ಬೆದರಿಕೆ

ಬಿಷಪ್‌ ಮೇಲೆ ಅತ್ಯಾಚಾರ ಆರೋಪ ಮಾಡಿರುವ ಕೇರಳದ ಕ್ರೈಸ್ತ ಸನ್ಯಾಸಿನಿಗೆ ಹಾಗೂ ಆಕೆಯ ಸಹೋದರಿ ಮತ್ತು ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರು ದಾಖಲಿಸಲಾಗಿದೆ. ಅತ್ಯಾಚಾರ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿಯ ಸಹೋದರಿ ಕೇರಳ ರಾಜ್ಯ ಪೊಲೀಸ್ ಡಿಜಿಪಿ, ಕೊಟ್ಟಾಯಂ ಜಿಲ್ಲೆಯ ಎಸ್‌ಪಿ ಮತ್ತು ಕಾಲಾಡಿಯ ವೃತ್ತ ನಿರೀಕ್ಷಕ ಅವರುಗಳಿಗೆ ಈ ಬಗ್ಗೆ ಲಿಖಿತ ದೂರು ನೀಡಿದ್ದು, ತಮ್ಮ ತಂಗಿ ಹಾಗೂ ತಮ್ಮ ಕುಟುಂಬಕ್ಕೆ ಸತತವಾಗಿ ಜೀವ ಬೆದರಿಕೆಗಳು ಬರುತ್ತಿವೆ ಎಂದಿದ್ದಾರೆ. ಅತ್ಯಾಚಾರ ಆರೋಪಿ ಬಿಷಪ್‌ನ ಸಹೋದರರು, ದ್ವೇಷದಿಂದ ತನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ.
ಇಂದಿನ (ಸೆ.25) ದ್ವಾದಶ ರಾಶಿಗಳ ನಿತ್ಯ ಭವಿಷ್ಯ

ಇಂದಿನ (ಸೆ.25) ದ್ವಾದಶ ರಾಶಿಗಳ ನಿತ್ಯ ಭವಿಷ್ಯ

ಮೇಷ : ತಾಯಿಯ ಕಡೆಯಿಂದ ಹಣ, ಆಸ್ತಿ ಸಿಗ ಬಹುದು. ಶುಭ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವೃಷಭ : ಹಲವಾರು ಅವಕಾಶಗಳು ನಿಮ್ಮ ಕೈ ತಪ್ಪಿ ಹೋಗಬಹುದು. ಸಿಟ್ಟು ಬಹು ಬೇಗ ಬರುತ್ತದೆ. ಮಿಥುನ: ಅತಿಥಿಗಳನ್ನು ಸತ್ಕರಿಸಿ ಅವರ ಆಶೀರ್ವಾದ ಪಡೆಯಿರಿ. ಸ್ಥಿರಾಸ್ತಿ ಮಾಡಲು ಉತ್ತಮ ಸಮಯ. ಕಟಕ : ಕುಟುಂಬದಲ್ಲಿನ ಹಲವಾರು ವಿಚಾರಗಳಲ್ಲಿ ಕಲಹ ಉಂಟಾಗಿ ನೆಮ್ಮದಿ ಇಲ್ಲದಂತಾಗುತ್ತದೆ. ಸಿಂಹ: ಕಬ್ಬಿಣ, ಎಣ್ಣೆ , ಹತ್ತಿ ವ್ಯಾಪಾರಿಗಳಿಗೆ ನಷ್ಟವಾಗುವುದು. ಕನ್ಯಾ: ಕುಟುಂಬದಲ್ಲಿ ಸಾಮರಸ್ಯವಿರುತ್ತದೆ. ತಾಳ್ಮೆಯಿಂದ ವರ್ತಿಸಿ. ತುಲಾ: ಕುಟುಂಬದಲ್ಲಿನ ಕಲಹ ಗಳಿಗೆ ಪರಿಹಾರ ಸಿಗುತ್ತದೆ. ಸ್ನೇಹಿತರಿಂದ ಲಾಭವಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more