Short News

ಒಂದು ಬಾರಿಯ ಚಾರ್ಜ್‍ಗೆ 500ಕಿಮೀ ಪ್ರಯಾಣಿಸುವ ಟಾಟಾ ನಿಯೊ ಎಲೆಕ್ಟ್ರಿಕ್ ಎಸ್‍‍ಯುವಿ..

ಒಂದು ಬಾರಿಯ ಚಾರ್ಜ್‍ಗೆ 500ಕಿಮೀ ಪ್ರಯಾಣಿಸುವ ಟಾಟಾ ನಿಯೊ ಎಲೆಕ್ಟ್ರಿಕ್ ಎಸ್‍‍ಯುವಿ..

ರತನ್ ಟಾಟ ಗ್ರೂಪ್ ,  ಟಾಟಾ ಟೆಕ್ನಾಲಜಿಸ್ ಮತ್ತು ಚೀನ ರಾಷ್ಟ್ರಕ್ಕೆ ಸೇರಿದ ನಿಯೊ ಎಲೆಕ್ಟ್ರಿಕ್ ವಾಹನ ಸಂಸ್ಥೆಯ ಭಾಗಸ್ವಾಮ್ಯದಲ್ಲಿ ನಿಯೊ ಇಎಸ್8 ಎಂಬ ಎಲೆಕ್ಟ್ರಿಕ್ ಎಸ್‍‍ಯುವಿ ಕಾರನ್ನು ಉತ್ಪತ್ತಿ ಮಾಡಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿಲೋಮೀಟರ್‍‍ನ ಮೈಲೇಜ್ ನೀಡುವ ಈ ಕಾರಿನ ಬೆಲೆ ರೂ.48.30 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಆಟೋ ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಲು ಈ ಕಾರು ತಯಾರಾಗುತ್ತಿದೆ ಎಂದರೆ ತಪ್ಪಾಗಲ್ಲ.
ಅಡುಗೆಮನೆಯ 'ಅಡುಗೆ ಸೋಡಾ' ಮೊಡವೆಗೆ ಪರ್ಫೆಕ್ಟ್ ಮನೆಮದ್ದು

ಅಡುಗೆಮನೆಯ 'ಅಡುಗೆ ಸೋಡಾ' ಮೊಡವೆಗೆ ಪರ್ಫೆಕ್ಟ್ ಮನೆಮದ್ದು

ಬೇಕಿಂಗ್ ಸೋಡಾ ಮತ್ತು ಲಿಂಬೆ ರಸವನ್ನು ಮಿಶ್ರ ಮಾಡಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ನಿಮ್ಮ ಸ್ವಚ್ಛ ಮುಖಕ್ಕೆ ಈ ಲೇಯರ್ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಹಾಗೆಯೇ ಬಿಡಿ. ನಂತರ ಅದನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಕೊನೆಗೆ, ನಿಮ್ಮ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ ಮತ್ತು ಮಸಾಜ್ ಮಾಡಿ. ವಾರದಲ್ಲಿ 2-3 ಬಾರಿ ಇದನ್ನು ಪುನರಾವರ್ತನೆ ಮಾಡಿ. ಜೇನು ಮತ್ತು ಬೇಕಿಂಗ್ ಸೋಡಾವನ್ನು ಪೇಸ್ಟ್‌ನಂತೆ ಮಾಡಿ. ನಿಮ್ಮ ಮುಖವನ್ನು ತೊಳೆದುಕೊಳ್ಳಿ ಮತ್ತು ಕಲೆಯಿರುವ ಜಾಗದಲ್ಲಿ ಇದನ್ನು ಹಚ್ಚಿ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಅದ್ದಿ. ಪೇಸ್ಟ್ ಹಚ್ಚಿರುವಲ್ಲಿ ಈ ಬಟ್ಟೆಯನ್ನು ಇಡಿ.

ಕೊಪ್ಪಳ: ಪೊಲೀಸ್ ವಸತಿಗೃಹಗಳಲ್ಲಿ ನೊಣಗಳ ಹಾವಳಿ

ಕೊಪ್ಪಳ: ಪೊಲೀಸ್ ವಸತಿಗೃಹಗಳಲ್ಲಿ ನೊಣಗಳ ಹಾವಳಿ

ಕೊಪ್ಪಳ ಜಿಲ್ಲೆಯ ಬಸಾಪುರ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ವಸತಿ ಗೃಹಗಳಲ್ಲಿ ನೊಣಗಳ ಹಾವಳಿ ವಿಪರೀತವಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಸತಿಗೃಹಗಳ ಬಳಿ ಕೋಳಿಫಾರಂ ಇರುವುದರಿಂದಲೇ ನೊಣಗಳ ಹಾವಳಿ ಹೆಚ್ಚಾಗಿದೆ. ನೊಣಗಳ ನಿಯಂತ್ರಣಕ್ಕೆ ಕೋಳಿಫಾರಂ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ ತಹಶಿಲ್ದಾರರಿಂದ ನಿಮಗೆ ನೋಟಿಸ್ ನೀಡಲಾಗಿದ್ದು, ನೊಣಗಳ ನಿಯಂತ್ರಣ ಹಾಗೂ ಸ್ವಚ್ಛತೆಗೆ ಪ್ರತಿ ದಿನ ಪರ್ಯಾಯ ವ್ಯವಸ್ಥೆ ಕೈಗೊಳ್ಳಿ ಇಲ್ಲದಿದ್ದಲ್ಲಿ, ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಸೂಚನೆ ನೀಡಿದ್ದಾರೆ.
ಎಚ್‌ಸಿಎಲ್  ನಿಂದ 177 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಎಚ್‌ಸಿಎಲ್ ನಿಂದ 177 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಎಚ್‌ಸಿಎಲ್ 177 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 6, 2018 ಕೊನೆಯ ದಿನವಾಗಿದೆ. ಹಿಂದೂಸ್ತಾನ್ ಚೋಪರ್ ಲಿಮಿಟೆಡ್ 177 ಎಕ್ಸಿಕ್ಯೂಟೀವ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ವೇತನ ಶ್ರೇಣಿಯನ್ನು ಅಧಿಸೂಚನೆಯಲ್ಲಿ ಪ್ರಕಟಿಸಿಲ್ಲ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಬಿಬಿಎ, ಬಿಸಿಎ, ಎಂಎ, ಎಂಟೆಕ್, ಸಿಎ, ಐಸಿಡಬ್ಲ್ಯೂಎ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more