Short News

ಆಧಾರ್ ಲಿಂಕ್ ಮಾಡಬೇಕೆಂದು ಕರೆ ಬಂದರೆ ಹುಷಾರ್ , ಅಕೌಂಟ್‍ನಲ್ಲಿದ್ದ  ನಿಮ್ಮ, ಹಣ ಮಾಯ!

ಆಧಾರ್ ಲಿಂಕ್ ಮಾಡಬೇಕೆಂದು ಕರೆ ಬಂದರೆ ಹುಷಾರ್ , ಅಕೌಂಟ್‍ನಲ್ಲಿದ್ದ ನಿಮ್ಮ, ಹಣ ಮಾಯ!

ನಾವು ಬ್ಯಾಂಕಿನಿಂದ ಮಾತಾಡುತ್ತಿರುವುದು. ನಿಮ್ಮ ಅಕೌಂಟ್‍ಗೆ ಆಧಾರ್ ನಂಬರ್ ಲಿಂಕ್ ಮಾಡುವ ಸಲುವಾಗಿ ನಂಬರ್ ಹೇಳಿ ಎಂದು ನಯವಾಗಿ ಮಾತನಾಡಿ, ನಂಬರ್ ಪಡೆದು ನಂತರ ನಿಮ್ಮ ಎಟಿಎಂ ಕಾರ್ಡ್ ನಂಬರ್ ಹೇಳಿ ನಿಮಗೆ ಬದಲಿ ನಂಬರ್ ಸಿಗುತ್ತದೆ. ಸರ್ಕಾರ ಜಿಎಸ್‍ಟಿಯ ಹೊಸ ನಂಬರ್ ಕೊಟ್ಟಿದ್ದಾರೆ, ಅದು ನಿಮ್ಮ ಅಕೌಂಟ್‍ಗೆ ಸೇರಿಸಬೇಕು ಕೇಳಿಕೊಂಡು ಫೋನ್ ಬಂದರೆ ಯಾವುದೇ ಕಾರಣಕ್ಕೆ ನೀಡಬೇಡಿ ಹಾಗೇನಾದರು ಅನುಮಾನ ಬಂದರೆ ನೀವು ಬ್ಯಾಂಕ್‍ಗೆ ಹೋಗಿ ವಿಚಾರಿಸಿ. ಈಗಾಗಲೇ ತುಮಕೂರು,ಕುಣಿಗಲ್ ,ತಿಪಟೂರು,ಗುಬ್ಬಿ,ಶಿರಾ ಸೇರಿದಂತೆ ರಾಜ್ಯದ ಹಲವು ಕಡೆ ವಂಚಕರು ಈ ರೀತಿ ಮಾಡಿ ಅನೇಕ ಮಂದಿ ಹಣ ಕಳೆದುಕೊಂಡು ಪರಿತಪಿಸುತ್ತಿದ್ದಾರೆ.
ಚುಂಚನಕಟ್ಟೆ ಜಲಪಾತೋತ್ಸವದಲ್ಲಿ ನಟ ಸುದೀಪ್

ಚುಂಚನಕಟ್ಟೆ ಜಲಪಾತೋತ್ಸವದಲ್ಲಿ ನಟ ಸುದೀಪ್

ಒಂದೆಡೆ ಬಣ್ಣ ಬಣ್ಣದ ಬೆಳಕಿನ ನಡುವೆ ಹೊಸ ಸೊಬಗಿನಿಂದ ಹರಿಯುವ ಜಲಪಾತ, ಮತ್ತೊಂದೆಡೆ ಜನಸಾಗರ. ಇವುಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ. ಇದು ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತೋತ್ಸವ ಸಮಾರೋಪ ಸಮಾರಂಭದಲ್ಲಿ ಕಂಡು ಬಂದ ದೃಶ್ಯಗಳು. ಜಲಪಾತೋತ್ಸವ ಕಾರ್ಯಕ್ರಮ ಭಾನುವಾರ ವರ್ಣರಂಜಿತವಾಗಿ ಸಮಾರೋಪಗೊಂಡಿತು. ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಿತ್ರ ನಟ ಕಿಚ್ಚ ಸುದೀಪ್, ಸಚಿವ ಸಾ.ರಾ.ಮಹೇಶ್ ಅವರ ಜನಪರ ಕಾರ್ಯಕ್ರಮಗಳು ಹೆಚ್ಚು ಜನಮನ್ನಣೆ ಗಳಿಸಲಿ, ಇನ್ನೂ ಹೆಚ್ಚಿನ ಅಧಿಕಾರವನ್ನು ಅವರಿಗೆ ಕರುಣಿಸಲಿ. ಮುಂದಿನ ವರ್ಷಗಳಲ್ಲಿ ಜಲಪಾತೋತ್ಸವ ಮತ್ತಷ್ಟು ವಿಜೃಂಭಣೆಯಿಂದ ನಡೆಯಲಿ ಎಂದು ಆಶಿಸಿದರು.
ಬಿಗ್ ಬಾಸ್ ರಿಯಾಲಿಟಿ ಶೋ ನ ಮೊದಲ ಪ್ರೋಮೋ ರಿಲೀಸ್​!

ಬಿಗ್ ಬಾಸ್ ರಿಯಾಲಿಟಿ ಶೋ ನ ಮೊದಲ ಪ್ರೋಮೋ ರಿಲೀಸ್​!

ಹಿಂದಿ ಬಿಗ್ ಬಾಸ್ ರಿಯಾಲಿ ಶೋ ಆರಂಭಕ್ಕೆ ಭರದ ಸಿದ್ದತೆಗಳು ನಡೆಯುತ್ತಿವೆ. ಇದೇ ವೇಳೆ ಕಾರ್ಯಕ್ರಮದ ಮೊದಲ ಪ್ರೋಮೋ ರಿಲೀಸ್ ಆಗಿದೆ. ಈಗಾಗಲೇ ಹಿಂದಿ ಬಿಗ್ ಬಾಸ್ ಶೋ ಯಶಸ್ವಿಯಾಗಿ 11ಸೀಸನ್ ಗಳನ್ನು ಮುಗಿಸಿದೆ. ಈ ಬಾರಿಯೂ ಬಾಲಿವುಡ್ ನಟ ಸಲ್ಮಾನ್ ಖಾನ್ ಬಿಗ್​ಬಾಸ್ ನಿರೂಪಣೆ ಮಾಡಲಿದ್ದಾರೆ. ಪ್ರೋಮೋ ಭಾನುವಾರ ಬಿಡುಗಡೆಯಾಗಿದ್ದು, ಇದರಲ್ಲಿ ಶಿಕ್ಷಕನ ಪಾತ್ರದಲ್ಲಿ ಸಲ್ಲು ಕಾಣಿಸಿಕೊಂಡಿದ್ದಾರೆ. ಈ ಸಾರಿ ಶೋಗೆ ಜೋಡಿಗಳ ಅಂದರೆ, ಅತ್ತೆ-ಸೊಸೆ, ಲವರ್ಸ್​​, ಬಾಸ್​​-ನೌಕರ​ಹೀಗೆ ಜೋಡಿಗಳಾಗಿ ಸ್ಪರ್ಧಿಗಳು ಬಿಗ್​ಬಾಸ್​ ಶೋಗೆ ಬರಲಿದ್ದಾರೆ ಎನ್ನವುದು ಮೂಲಗಳಿಂದ ತಿಳಿದು ಬಂದಿದೆ.
67,990 ರೂ. ಬೆಲೆಯ ಮೊಬೈಲ್ ಅನ್ನು 7900 ರೂ.ಗೆ ಖರೀದಿಸಿ ... !!

67,990 ರೂ. ಬೆಲೆಯ ಮೊಬೈಲ್ ಅನ್ನು 7900 ರೂ.ಗೆ ಖರೀದಿಸಿ ... !!

ಸ್ಯಾಮ್ಸಂಗ್ ತನ್ನ ಹೊಸ ಸ್ಮಾರ್ಟ್ಫೋನ್ ಗ್ಯಾಲಕ್ಸಿ ನೋಟ್ 9 ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನ್ ಬೆಲೆ ಭಾರತದಲ್ಲಿ 67,990 ರೂಪಾಯಿ. 6ಜಿಬಿ ರ್ಯಾಮ್ ಮೊಬೈಲ್ ಬೆಲೆ 67,990 ರೂಪಾಯಿ. 8ಜಿಬಿ ರ್ಯಾಮ್ ಮೊಬೈಲ್ ಬೆಲೆ 84,900 ರೂಪಾಯಿ. ಮುಂಗಡ ಬುಕ್ಕಿಂಗ್ ಆಗಸ್ಟ್ 10ರಿಂದಲೇ ಶುರುವಾಗಿದ್ದು, ಆಗಸ್ಟ್ 21ರವರೆಗೆ ಅವಕಾಶವಿದೆ. ಈ ಫೋನ್ ಅನ್ನು ನೀವು ಏರ್ಟೆಲ್ ಆನ್ಲೈನ್ ಸ್ಟೋರ್ ನಲ್ಲಿ 7900 ರೂ. ನೀಡಿ ಖರೀದಿ ಮಾಡಬಹುದಾಗಿದೆ. ಉಳಿದ ಹಣವನ್ನು EMI ರೂಪದಲ್ಲಿ ಕಟ್ಟಬೇಕಾಗುತ್ತದೆ. ಹಾಗೇ ಗ್ರಾಹಕರಿಗೆ ಏರ್ಟೆಲ್ ಪೋಸ್ಟ್ ಪೇಯ್ಡ್ ಪ್ಲಾನ್ ಸಿಗಲಿದ್ದು, ಪ್ರತಿ ತಿಂಗಳು 100 ಜಿಬಿ ಡೇಟಾ, ಅನಿಯಮಿತ ಕರೆ ಸೌಲಭ್ಯ ಸಿಗಲಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more