Short News

ಬಿಎಸ್ಎನ್ಎಲ್ ರಾಖಿ ಆಫರ್, ಅನಿಯಮಿತ ಕರೆ ಹಾಗು ಡೇಟಾ ಸೌಲಭ್ಯ

ಬಿಎಸ್ಎನ್ಎಲ್ ರಾಖಿ ಆಫರ್, ಅನಿಯಮಿತ ಕರೆ ಹಾಗು ಡೇಟಾ ಸೌಲಭ್ಯ

ಸರ್ಕಾರಿ ಸ್ವಾಮ್ಯದ ಬಿಸ್ಎನ್ಎನ್ ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಆಕ್ರಮಣಕಾರಿ ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಜಿಯೋ ಪ್ರವೇಶಾತಿ ನಂತರದಲ್ಲುಂಟಾದ ದರಸಮರದಲ್ಲಿ ಪೈಪೋಟಿ ನೀಡುತ್ತಲೇ ಬಂದಿದೆ. ಪ್ರಸ್ತುತ ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಬಿಎಸ್ಎನ್ಎಲ್ಸಂಸ್ಥೆ ರಾಖಿ ಯೋಜನೆ ಪರಿಚಯಿಸಿದೆ. ರೂ. 399ರ ರಾಖಿ ಯೋಜನೆ ಮೂಲಕ ಬಿಎಸ್ಎನ್ಎಲ್ ಬಳಕೆದಾರರಿಗೆ ಭರ್ಜರಿ ಆಫರ್ ನೀಡಲು ಮುಂದಾಗಿದೆ. ಅನಿಯಮಿತ ಕರೆ, ಉಚಿತ ರೋಮಿಂಗ್, ಡೇಟಾ, ಎಸ್ಎಂಎಸ್ ಸೌಲಭ್ಯ ಒಳಗೊಂಡಿದೆ. ಈ ಆಫರ್ 74 ದಿನಗಳ ವ್ಯಾಲಿಡಿಟಿ ಹೊಂದಿದೆ. ಆಗಸ್ಟ್ 26ರಿಂದ ಆರಂಭವಾಗಲಿರುವ STV399 ರಾಖಿ ಆಫರ್ ನಲ್ಲಿ ವಿಶೇಷ ಸೌಲಭ್ಯ ಇದೆ.
ಕಾಂಗ್ರೆಸ್ ಶಾಸಕರಿಗೆ ಮುಂಬೈಗೆ ಹೋಗಲು ಹೇಳಿದ್ದೇ ನಾನು: ಕುಮಾರಸ್ವಾಮಿ

ಕಾಂಗ್ರೆಸ್ ಶಾಸಕರಿಗೆ ಮುಂಬೈಗೆ ಹೋಗಲು ಹೇಳಿದ್ದೇ ನಾನು: ಕುಮಾರಸ್ವಾಮಿ

ಕಾಂಗ್ರೆಸ್‌ನ ಮೂವರೂ ಶಾಸಕರು ನನ್ನ ಜತೆ ಸಂಪರ್ಕದಲ್ಲಿ ಇದ್ದಾರೆ. ಅವರನ್ನು ಮುಂಬೈಗೆ ನಾವೇ ಕಳುಹಿಸಿರುವುದು' ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌ನ ಮತ್ತೊಬ್ಬ ಶಾಸಕನನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಅವರೆಲ್ಲ ಜವಾಬ್ದಾರಿ ಇರುವ ಶಾಸಕರು. ಪಕ್ಷವನ್ನು ಬಿಡುವುದಿಲ್ಲ ಎಂದು ಹೇಳಿದರು.

ಸರ್ಕಾರ ಟೇಕಾಫ್ ಆಗಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಹೇಳುತ್ತಿದ್ದಾರೆ. ಅವರು ಸಮ್ಮಿಶ್ರ ಸರ್ಕಾರ ಕೆಡವಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಸರ್ಕಾರ ಬಿಎಸ್‌ವೈ ಅವರ ಸರ್ಕಾರದಂತೆ ಡಿನೋಟಿಫೈನಲ್ಲಿ ಟೇಕಾಫ್ ಆಗಿಲ್ಲ ಎಂದು ಲೇವಡಿ ಮಾಡಿದರು.

ಫೀಫಾ Rankingನಲ್ಲಿ ಅಪರೂಪದ ಸಾಧನೆ: ಫ್ರಾನ್ಸ್-ಬೆಲ್ಜಿಯಂಗೆ ಅಗ್ರ ಸ್ಥಾನ!

ಫೀಫಾ Rankingನಲ್ಲಿ ಅಪರೂಪದ ಸಾಧನೆ: ಫ್ರಾನ್ಸ್-ಬೆಲ್ಜಿಯಂಗೆ ಅಗ್ರ ಸ್ಥಾನ!

ಗುರುವಾರ (ಸೆಪ್ಟೆಂಬರ್ 20) ಪ್ರಕಟಿಸಲಾಗಿರುವ ಫೀಫಾ ವಿಶ್ವ ರ್ಯಾಂಕಿಂಗ್ ನಲ್ಲಿ ವಿಶ್ವ ಚಾಂಪಿಯನ್ ಫ್ರಾನ್ಸ್ ಜೊತೆ ಬೆಲ್ಜಿಯಂ ತಂಡ ಮೊದಲ ಸ್ಥಾನ ಹಂಚಿಕೊಂಡು ಅಪರೂಪದ ಸಾಧನೆಗೆ ಕಾರಣವಾಗಿದೆ. ತಂಡಗಳೆರಡು ಅಗ್ರ ಸ್ಥಾನ ಹಂಚಿಕೊಂಡಿದ್ದು, 25 ವರ್ಷಗಳ ಬಳಿಕ ಇದೇ ಮೊದಲು. ಸೆಪ್ಟೆಂಬರ್ 11ರಂದು ನಡೆದಿದ್ದ ಯುಇಎಫ್ಎ ನೇಷನ್ಸ್ ಲೀಗ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಬೆಲ್ಜಿಯಂ ತಂಡ ಐಸ್ ಲ್ಯಾಂಡ್ ತಂಡವನ್ನು 3-0 ಅಂತರದಿಂದ ಸೋಲಿಸಿತ್ತು. ಈ ಗೆಲುವು ಬೆಲ್ಜಿಯಂ ತಂಡವನ್ನು ವಿಶ್ವ ನಂ.1 ಸ್ಥಾನದಲ್ಲಿ ತಂದು ನಿಲ್ಲಿಸಿದೆ.
ಮತ್ತೆ ಹಳಿ ಮೇಲೆ ಐಷಾರಾಮಿ ಗೋಲ್ಡನ್ ಚಾರಿಯಟ್ ಸಂಚಾರ

ಮತ್ತೆ ಹಳಿ ಮೇಲೆ ಐಷಾರಾಮಿ ಗೋಲ್ಡನ್ ಚಾರಿಯಟ್ ಸಂಚಾರ

ಕೆಎಸ್‌ಟಿಡಿಸಿ ತನ್ನ ಹೆಮ್ಮೆಯ ಗೋಲ್ಡನ್ ಚಾರಿಯಟ್ ರೈಲು ಸೇವೆಗೆ ಕೆಲವು ಬದಲಾವಣೆಗಳನ್ನು ತಂದಿದ್ದು ಮರು ಚಾಲನೆ ನೀಡಲಿದೆ. ಕರ್ನಾಟಕದ ವಿವಿಧ ಪ್ರವಾಸಿ ತಾಣಗಳ ಭೇಟಿಗೆ ಅವಕಾಶ ಒದಗಿಸುವ ಗೋಲ್ಡನ್ ಚಾರಿಯಟ್ ಸೇವೆ ಆರಂಭವಾಗಿ 10 ವರ್ಷಗಳು ಕಳೆದಿವೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು ಸೇವೆಯ ಮೂಲಸೌಕರ್ಯ ಮತ್ತು ವಾಣಿಜ್ಯ ವಹಿವಾಟು ನೋಡಿಕೊಳ್ಳಲು ಟೆಂಡರ್ ಆಹ್ವಾನಿಸಿದೆ. ಮಲ್ಪೆ ಗ್ರೂಪ್ ಆಫ್ ಹೋಟೆಲ್‌ಗೆ ನೀಡಿದ್ದ ಟೆಂಡರ್ ಈ ವರ್ಷದ ಆರಂಭದಲ್ಲಿ ಅಂತ್ಯಗೊಂಡಿತ್ತು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more