Short News

ಎಸ್ಬಿಐ ಖಡಕ್ ಸೂಚನೆ! ಡಿಸೆಂಬರ್ 31 ರ ಒಳಗಾಗಿ ಎಟಿಎಂ ಕಾರ್ಡ್ ಬದಲಿಸಬೇಕು

ಎಸ್ಬಿಐ ಖಡಕ್ ಸೂಚನೆ! ಡಿಸೆಂಬರ್ 31 ರ ಒಳಗಾಗಿ ಎಟಿಎಂ ಕಾರ್ಡ್ ಬದಲಿಸಬೇಕು

ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹೊಸ ಇಎಂವಿ ಚಿಪ್ ತಂತ್ರಜ್ಞಾನ ಅಳವಡಿಸಿರುವ ಕಾರ್ಡುಗಳನ್ನು ಡಿಸೆಂಬರ್ 31ರ ಒಳಗೆ ಪಡೆಯುವಂತೆ ತಿಳಿಸಿದೆ.ಮೆಗ್ನೆಟಿಕ್ ಸ್ಟ್ರೈಪ್ ನ ಹಳೆಯ ಎಟಿಎಂ ಕಮ್ ಡೆಬಿಟ್ ಕಾರ್ಡುಗಳನ್ನು ಬದಲಿಸಿ ಇವಿಎಂ ಚಿಪ್ ಹೊಂದಿರುವ ಹೊಸ ಕಾರ್ಡ್ ಗಳನ್ನು ಡಿಸೆಂಬರ್ 31 ಕ್ಕೆ ಮುಂಚಿತವಾಗಿ ಬದಲಿಸಲು ಗ್ರಾಹಕರಿಗೆ ಕೇಳಿದೆ. ಆನ್ಲೈನ್ ವಂಚನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರನ್ನು ವಂಚನೆಗಳಿಂದ ರಕ್ಷಿಸುವ ಉದ್ದೇಶದಿಂದ ಇವಿಎಂ ಚಿಪ್ ಆಧಾರಿತ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಬಿಡುಗಡೆ ಮಾಡಲು ಆರ್ಬಿಐ ಹೇಳಿದೆ.
ಯುವ ಪ್ರತಿಭೆಗೆ ಕಾಲ್ ಶೀಟ್ ಕೊಟ್ಟ ರವಿಚಂದ್ರನ್ ಪುತ್ರ ಮನೋರಂಜನ್.!

ಯುವ ಪ್ರತಿಭೆಗೆ ಕಾಲ್ ಶೀಟ್ ಕೊಟ್ಟ ರವಿಚಂದ್ರನ್ ಪುತ್ರ ಮನೋರಂಜನ್.!

ಮನೋರಂಜನ್ ತಮ್ಮ ಚೊಚ್ಚಲ ಚಿತ್ರದಿಂದಲೂ ಹೊಸ ನಿರ್ದೇಶಕರು ಹಾಗೂ ಯುವ ಪ್ರತಿಭೆಗಳಿಗೆ ಮಣೆ ಹಾಕಿದ್ದಾರೆ. ಈ ಬಾರಿಯೂ ನವ ನಿರ್ದೇಶಕರಿಗೆ ಮನೋರಂಜನ್ ಕಾಲ್ ಶೀಟ್ ನೀಡಿದ್ದಾರೆ. ಸದ್ಯ 'ಚಿಲ್ಲಂ' ಚಿತ್ರದಲ್ಲಿ ಬಿಜಿಯಾಗಿರುವ ಮನೋರಂಜನ್ ಇದೀಗ 'ಮುಂದಿನ ನಿಲ್ದಾಣ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಮುಂದಿನ ನಿಲ್ದಾಣ' ಚಿತ್ರಕ್ಕೆ 'ಜೀವನದ ಪ್ರಾರಂಭ' ಎಂಬ ಟ್ಯಾಗ್ ಲೈನ್ ಇಡಲಾಗಿದೆ. ಹೊಸ ರೀತಿಯಲ್ಲಿ 'ಮುಂದಿನ ನಿಲ್ದಾಣ' ಚಿತ್ರದ ಸ್ಕ್ರಿಪ್ಟ್ ಬರೆದು, ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವವರು ಮನು. ಈ ಚಿತ್ರಕ್ಕೆ ಮನು ಸಹೋದರ ಜಗದೀಶ್ ರವರೇ ಬಂಡವಾಳ ಹಾಕಲಿದ್ದಾರೆ.
ವಿವಾದಾತ್ಮಕ ಗ್ರಾಫೈಟ್ ಕಂಪನಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ತಂಡ

ವಿವಾದಾತ್ಮಕ ಗ್ರಾಫೈಟ್ ಕಂಪನಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ತಂಡ

ಬೆಂಗಳೂರಿನ ವೈಟ್‌ಫೀಲ್ಡ್ ನಲ್ಲಿರುವ ವಿವಾದಾತ್ಮಕ ಗ್ರಾಫೈಟ್ ಇಂಡಿಯಾ ಲಿಮಿಟೆಡ್ ಕಂಪನಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಂಡ ಭೇಟಿ ನೀಡಿ ಪರಿಶೀಲಿಸಲಿದ್ದು, ದಶಕಗಳ ಕಾಲದ ವಿವಾದ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ವೈಟ್‌ಫೀಲ್ಡ್ ನಲ್ಲಿ ಸ್ಥಳೀಯ ನಿವಾಸಿಗಳ ವಿರೋಧದ ನಡುವೆಯೂ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎನ್ನಲಾದ ಕಂಪನಿ ವಿರುದ್ಧ ಸ್ಥಳೀಯರು ನೀಡಿರುವ ದೂರು ಆಧರಿಸಿ ಮಾಲಿನ್ಯ ನಿಯಂತ್ರಣ ಮಂಡಳಿ ಭೇಟಿ ನೀಡಲಿದೆ. ಅನುಮತಿ ಇಲ್ಲದೆ ಕಾರ್ಯ ನಿರ್ವಹಿಸುತ್ತಿರುವುದರ ಬಗ್ಗೆ ವರದಿ ಸಿದ್ಧಪಡಿಸಲಿದೆ.
ಅದೃಷ್ಟ ನಿಮ್ಮ ಕೈಹಿಡಿಯಬೇಕೇ? ಹಾಗಾದರೆ ಈ ವಸ್ತುಗಳು ನಿಮ್ಮ ಬಳಿ ಇರಲಿ

ಅದೃಷ್ಟ ನಿಮ್ಮ ಕೈಹಿಡಿಯಬೇಕೇ? ಹಾಗಾದರೆ ಈ ವಸ್ತುಗಳು ನಿಮ್ಮ ಬಳಿ ಇರಲಿ

ಕೀಗಳನ್ನು ಸರದಂತೆ ನಿಮ್ಮ ಕುತ್ತಿಗೆಯಲ್ಲಿ ಧರಿಸುವುದರಿಂದ ಅದೃಷ್ಟ ನಿಮ್ಮ ಕೈಹಿಡಿಯಲಿದೆ. ಮೂರು ಕೀಗಳನ್ನು ಜೊತೆಯಾಗಿ ಧರಿಸುವುದರಿಂದ ಕೂಡ ಅದೃಷ್ಟ ನಿಮ್ಮದಾಗಲಿದೆ. ತುಪ್ಪ ಮತ್ತು ಹೂವುಗಳಿಂದ ಮಾಡಿದ ದೂಪದ್ರವ್ಯಗಳು ಋಣಾತ್ಮಕ ಶಕ್ತಿಯನ್ನು ನಿವಾರಿಸುತ್ತವೆ. ದೂಪ ಕಡ್ಡಿಗಳನ್ನು ಬಳಸದೆಯೇ ನಿಜವಾದ ದೂಪವನ್ನು ಬಳಸಬೇಕು. ನಮ್ಮ ಧರ್ಮಗ್ರಂಥಗಳಲ್ಲಿ ದಾನಕ್ಕೆ ಬಹಳಷ್ಟು ಮಹತ್ವ ನೀಡಲಾಗಿದೆ. ವಾಸ್ತವವಾಗಿ, ಇದು ಪ್ರತಿ ಧರ್ಮದಲ್ಲಿಯೂ ಮಹತ್ವದ್ದಾಗಿದೆ. ಕೆಲವು ದೇಣಿಗೆಗಳನ್ನು ಮಾಡದೆ ಸಂಪೂರ್ಣ ವೇಗವನ್ನು ಪರಿಗಣಿಸಲಾಗುವುದಿಲ್ಲ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more