Short News

ಬಿಟೌನ್ ಅಂಗಳಕ್ಕೆ ಮತ್ತೊಂದು ಸ್ಟಾರ್ ನಟನ ಮೊಮ್ಮಗ ಎಂಟ್ರಿ

ಬಿಟೌನ್ ಅಂಗಳಕ್ಕೆ ಮತ್ತೊಂದು ಸ್ಟಾರ್ ನಟನ ಮೊಮ್ಮಗ ಎಂಟ್ರಿ

ಬಾಲಿವುಡ್ ಅಂಗಳದಲ್ಲಿ ಅಭಿನಯದ ಮೂಲಕವೇ ಸಾಕಷ್ಟು ಸುದ್ದಿ ಮಾಡಿದ್ದ ನಟ ಅಮರೀಶ್ ಪುರಿ ಮೊಮ್ಮಗ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾನೆ. ವರ್ಧನ್ ಪುರಿ ಬಾಲಿವುಡ್ ನಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಲು ಸಿದ್ದತೆ ಮಾಡಿಕೊಂಡಿದ್ದು ಬಾಲಿವುಡ್ ನಲ್ಲಿ ರೊಮ್ಯಾಂಟಿಕ್ ಹಾಗೂ ಥ್ರಿಲ್ಲರ್ ಸಿನಿಮಾಗಳ ಮೂಲಕ ಪ್ರಖ್ಯಾತಿ ಗಳಿಸಿರುವ ಜಯಂತಿಲಾಲ್ ಗಡಾ ನಿರ್ಮಾಣದ ಸಿನಿಮಾ ಮೂಲಕ ವರ್ಧನ್ ಪುರಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ವರ್ಧನ್ ಪುರಿ ಅಭಿನಯದ ಸಿನಿಮಾ ನಾಯಕಿ ಮತ್ತು ನಿರ್ದೇಶಕರ ಹುಡುಕಾಟ ಶುರುವಾಗಿದ್ದು, ಸೆಪ್ಟೆಂಬರ್ ನಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆಗಳಿವೆ ಇದೆಯಂತೆ.
ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಎಂ.ಡಿ. ರಂಗನಾಥ್

ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಎಂ.ಡಿ. ರಂಗನಾಥ್

ಇಂದು ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ಎಂ.ಡಿ ರಂಗನಾಥ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸುಮಾರು 18 ವರ್ಷಗಳಿಂದ ಇನ್ಫೋಸಿಸ್ ಜೊತೆ ಕೆಲಸ ಮಾಡಿದ್ದ ರಂಗನಾಥ್ ತಾವು ಹೊಸ ಕ್ಷೇತ್ರಗಳಲ್ಲಿ ವೃತ್ತಿಪರ ಅವಕಾಶಗಳನ್ನು ಹುಡುಕುತ್ತೇನೆ ಎಂದಿದ್ದಾರೆ. ಅವರು ಪ್ರಸ್ತುತ ನವೆಂಬರ್ 16, 2018 ರವರೆಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದು ಅಷ್ಟರಲ್ಲಿ ಸಂಸ್ಥೆಯು ನೂತನ ಸಿಎಫ್ ಓ ಅವರನ್ನು ನೇಮಕ ಮಾಡಿಕೊಳ್ಳಲಿದೆ. ಕಳೆದ ಮೂರು ವರ್ಷಗಳಿಂದ ಇನ್ಫೋಸಿಸ್ ಸಿಎಫ್ಓ ಆಗಿರುವ ರಂಗನಾಥ್ 18 ವರ್ಷಗಳಲ್ಲಿ ಸಂಸ್ಥೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ನರದ ಒಂದು ಭಾಗ ಗಟ್ಟಿಯಾಗಿ ಬಿಡುವ ಕಾಯಿಲೆ! ಇದರ ಏಳು ಲಕ್ಷಣಗಳು

ನರದ ಒಂದು ಭಾಗ ಗಟ್ಟಿಯಾಗಿ ಬಿಡುವ ಕಾಯಿಲೆ! ಇದರ ಏಳು ಲಕ್ಷಣಗಳು

ಸಾಮಾನ್ಯವಾಗಿ ಆರೋಗ್ಯ ಚೆನ್ನಾಗಿದ್ದರೆ ನಡು ನಡುವೆ ದೇಹ ನೀಡುವ ಈ ಸೂಚನೆಗಳನ್ನು ನಾವು ಕಡೆಗಣಿಸಿಬಿಡುತ್ತೇವೆ. ಅಥವಾ ಈ ಸೂಚನೆ ನೀಡಲು ಅಗತ್ಯವಿರುವ ಸಂದರ್ಭವೇ ಬಾರದೇ ಇದ್ದು ಎಂದಾದರೊಮ್ಮೆ ಬಂದಾಗಲಾದರೂ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಉದಾಹರಣೆಗೆ ಹೃದಯದ ಕಾಯಿಲೆ ಪ್ರಾಥಮಿಕ ಹಂತದಲ್ಲಿರುವವರಿಗೆ ಸಾಮಾನ್ಯ ಆರೋಗ್ಯ ಹಾಗೂ ನಿತ್ಯದ ಸಾಮಾನ್ಯ ಚಟುವಟಿಕೆಯಿಂದಿದ್ದಷ್ಟೂ ಇದರ ಇರುವಿಕೆ ಗೊತ್ತಾವುವುದೇ ಇಲ್ಲ. ಇದರ ಇರುವಿಕೆ ಗೊತ್ತಾಗುವುದು ಒಂದು ಬಾರಿಯಾದರೂ ಸುಮಾರು ಐವತ್ತು ಮೀಟರ್ ಓಡಿದಾಗಲೇ! ಹೃದಯಭಾಗದಲ್ಲಿ ಚಿಕ್ಕದಾಗಿ ಮೀಟಿದಂತಹ ನೋವಾಗಲು ತೊಡಗುತ್ತದೆ.

ಕೊಡಗಿನಲ್ಲಿ‌ ಪ್ರವಾಹ: ದಿನದ 24 ತಾಸು ಕಾರ್ಯಾಚರಣೆಗೆ ಸಿಎಂ ಸೂಚನೆ

ಕೊಡಗಿನಲ್ಲಿ‌ ಪ್ರವಾಹ: ದಿನದ 24 ತಾಸು ಕಾರ್ಯಾಚರಣೆಗೆ ಸಿಎಂ ಸೂಚನೆ

ಕೊಡಗು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಉಂಟಾಗಿರುವ ಪ್ರವಾಹದಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಇನ್ನು ಮೂರು ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೊಡಗಿನ ಮಹಾಮಳೆ ಕುರಿತಂತೆ ಕುಮಾರಸ್ವಾಮಿ ಕೊಡಗು ಅಧಿಕಾರಿಗಳ ಉನ್ನತ ಮಟ್ಟದ ಸಭೆ ಕರೆದಿದ್ದರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಫಿ, ಅಡಿಕೆ, ತೆಂಗು,‌ಮೆಣಸು ಸೇರಿದಂತೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟ ಉಂಟಾಗಿದ್ದು, ಮೂರು ದಿನಗಳಲ್ಲಿ ಸಮಗ್ರ‌ ವರದಿ‌ ಕೊಡುವಂತೆ ಮುಖ್ಯಮಂತ್ರಿ ಸೂಚನೆ‌ ನೀಡಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more