Short News

ಕಮಲ್ ಹಾಸನ್ 'ವಿಶ್ವರೂಪಂ-2' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ಕಮಲ್ ಹಾಸನ್ 'ವಿಶ್ವರೂಪಂ-2' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ಕಮಲ್ ಹಾಸನ್ ಅಭಿನಯದ 'ವಿಶ್ವರೂಪಂ-2' ಬಿಡುಗಡೆ ಆಗಿದೆ. ಐದು ವರ್ಷದ ನಂತರ ತೆರೆಕಂಡಿರುವ 'ವಿಶ್ವರೂಪಂ-2' ಚಿತ್ರ ಹಿಂದಿನಿಂದಲೂ ಭಾರಿ ನೀರೀಕ್ಷೆಗಳನ್ನು ಹುಟ್ಟುಹಾಕಿತ್ತು. ಇಂದು(ಆಗಸ್ಟ್ 10) ಬಿಡುಗಡೆ ಆಗಿರುವ 'ವಿಶ್ವರೂಪಂ-2' ಚಿತ್ರವನ್ನು ಅಭಿಮಾನಿಗಳು ಕಾತುರದಿಂದ ನೋಡಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ 'ವಿಶ್ವರೂಪಂ-2' ಚಿತ್ರ ಬಿಡುಗಡೆ ಆಗಿದೆ. ಸಾಕಷ್ಟು ವಿವಾದಗಳ ಮಧ್ಯೆ ಬಿಡುಗಡೆ ಆಗಿರುವ ಚಿತ್ರದಲ್ಲಿನ ಕಮಲ್ ಹಾಸನ್ ಅಭಿನಯಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಸಿನಿಮಾ ನೋಡಿದ ಅಭಿಮಾನಿಗಳು ಟ್ವಿಟ್ಟರ್ ಮೂಲಕ ಮಿಶ್ರ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ.
ರಶ್ಮಿಕಾ ಅಭಿನಯವನ್ನು ಹಾಡಿ ಹೊಗಳಿದ 'ಪ್ರಿನ್ಸ್' ಮಹೇಶ್ ಬಾಬು

ರಶ್ಮಿಕಾ ಅಭಿನಯವನ್ನು ಹಾಡಿ ಹೊಗಳಿದ 'ಪ್ರಿನ್ಸ್' ಮಹೇಶ್ ಬಾಬು

ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅಭಿನಯದ ತೆಲುಗು ಸಿನಿಮಾ 'ಗೀತ ಗೋವಿಂದಂ' ನಿನ್ನೆಯಷ್ಟೇ ವಿಶ್ವದಾದ್ಯಂತ ಬಿಡುಗಡೆ ಆಗಿತ್ತು. ರೋಮ್ಯಾಂಟಿಕ್ ಹಾಗೂ ಕಾಮಿಡಿ ಲವ್ ಸ್ಟೋರಿ ಆಗಿರುವ 'ಗೀತ ಗೋವಿಂದಂ' ಚಿತ್ರಕ್ಕೆ ಪ್ರೇಕ್ಷಕರ ವಲಯದಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಇದೇ ವೇಳೆ ''ಗೀತ ಗೋವಿಂದಂ' ಜಯಗಳಿಸಿದೆ. ನಾನು ಈ ಚಿತ್ರವನ್ನ ಸಿಕ್ಕಾಪಟ್ಟೆ ಎಂಜಾಯ್ ಮಾಡಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟನೆ ಅತ್ಯದ್ಭುತವಾಗಿದೆ. ಇನ್ನೂ ನಟ ಸುಬ್ಬರಾಜು ಹಾಗೂ ವೆನ್ನಿಲ್ಲಾ ಕಿಶೋರ್ ವಿಶೇಷ ಮನ್ನಣೆಗೆ ಅರ್ಹರು. ಇಡೀ ತಂಡಕ್ಕೆ ನನ್ನ ಶುಭ ಹಾರೈಕೆಗಳು'' ಎಂದು ನಟ ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ.
ವಾಜಪೇಯಿ ಇನ್ನು ನೆನಪು ಮಾತ್ರ ಎಂದು ಕಂಬನಿ ಮಿಡಿದ ರಾಹುಲ್ ಗಾಂಧಿ

ವಾಜಪೇಯಿ ಇನ್ನು ನೆನಪು ಮಾತ್ರ ಎಂದು ಕಂಬನಿ ಮಿಡಿದ ರಾಹುಲ್ ಗಾಂಧಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿಧಿವಶರಾಗಿದ್ದಾರೆ. ಭಾರತದ ರಾಜಕಾರಣದ ಅಜಾಶತ್ರುವಿನ ಅಗಲಿಕೆಗೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಭಾರತ ರತ್ನ, ಅಟಲ್ ಬಿಹಾರಿ ವಾಜಪೇಯಿ ಇನ್ನು ನೆನಪು ಮಾತ್ರ. ಅವರ ಅಗಲಿಕೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿ ಕಂಬನಿ ಮಿಡಿದಿರುವ ರಾಹುಲ್ ಗಾಂಧಿ, ಇವತ್ತು ಭಾರತಾಂಬೆ ಶ್ರೇಷ್ಠ ಮಗನನ್ನು ಕಳೆದುಕೊಂಡಿದೆ. ಇಂದು ನಾವು ಅವರನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದುಃಖ ಬರಿಸುವ ಶಕ್ತಿ ಸಿಗಲಿ ಅಂತಾ ಟ್ವೀಟ್ ಮಾಡಿದ್ದಾರೆ.
ಗಂಡು ಮಗುವಿಗೆ ಜನ್ಮ ನೀಡಿದ ಗಾಯಕಿ ನಂದಿತಾ

ಗಂಡು ಮಗುವಿಗೆ ಜನ್ಮ ನೀಡಿದ ಗಾಯಕಿ ನಂದಿತಾ

ಕನ್ನಡದ ಜನಪ್ರಿಯ ಗಾಯಕಿಯರ ಪೈಕಿ ನಂದಿತಾ ಕೂಡ ಒಬ್ಬರು. ಸಾಕಷ್ಟು ಸೂಪರ್ ಹಿಟ್ ಸಿನಿಮಾ ಹಾಡುಗಳಿಗೆ ಧ್ವನಿಯಾಗಿರುವ ಇವರು ಈಗ ಅಮ್ಮನಾದ ಸಂಭ್ರಮದಲ್ಲಿ ಇದ್ದಾರೆ. ಗಾಯಕಿ ನಂದಿತಾ ಅವರು ರಾಕೇಶ್ ಅವರೊಂದಿಗೆ ವಿವಾಹ ಆಗಿದ್ದು, ಈ ದಂಪತಿಗೆ ಈಗ ಗಂಡು ಮಗು ಜನಿಸಿದೆ. ಈ ಸಂತಸ ವಿಷಯವನ್ನು ನಂದಿತಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿನ್ನೆ ಬೆಳಗ್ಗೆ ಅಂದರೆ ಸ್ವಾತಂತ್ರ್ಯ ದಿನಾಚರಣೆ ದಿನ ಮಗು ಹುಟ್ಟಿದೆ. ಫೇಸ್ ಬುಕ್ ನಲ್ಲಿ ನಂದಿತಾ ಅವರ ನೂರಾರು ಅಭಿಮಾನಿಗಳು ಹಾಗೂ ಚಿತ್ರರಂಗದ ಮಿತ್ರರು ಶುಭ ಹಾರೈಸಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more