Short News

ಹೆಣ್ಣು ವೇಷ ತೊಟ್ಟಿರುವ ಕನ್ನಡದ ಈ ನಟ ಯಾರು?

ಹೆಣ್ಣು ವೇಷ ತೊಟ್ಟಿರುವ ಕನ್ನಡದ ಈ ನಟ ಯಾರು?

ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ, 'ರಾಮ ರಾಮ ರೇ' ಖ್ಯಾತಿಯ ನಟರಾಜ್ ಚಾಲೆಂಜಿಂಗ್ ಪಾತ್ರಗಳನ್ನು ಮಾಡುತ್ತಾರೆ. ಈ ಹಿಂದೆಯಿಂದಲೂ ಅಂತಹ ಪಾತ್ರಗಳನ್ನು ಮಾಡಿಕೊಂಡು ಬಂದ ಅವರು ತಾವು ನಟಿಸಿದ್ದ ಒಂದು ಪಾತ್ರದ ಫೋಟೋವನ್ನು ನಿನ್ನೆ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ, ನಟರಾಜ್ ನಾಲ್ಕು ವರ್ಷಗಳ ಹಿಂದೆ ಕಲಾಗಂಗೋತ್ರಿ ಮಂಜು ಅವರ ನಿರ್ದೇಶನದಲ್ಲಿ ಬಂದ 'ಇದೇ ಪ್ರೀತಿ ಪ್ರೇಮ' ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈ ಧಾರಾವಾಹಿಯನ್ನು ಬಿ.ಸುರೇಶ್ ನಿರ್ದೇಶನ ಮಾಡಿದ್ದರು. ಈ ಧಾರಾವಾಹಿಯಲ್ಲಿ ಮರೀಚಿಕೆ ಎಂಬ ಪಾತ್ರವನ್ನು ನಟರಾಜ್ ನಿರ್ವಹಿಸುತ್ತಿದ್ದು, ಆ ಫೋಟೋವನ್ನು ಈಗ ಹಂಚಿಕೊಂಡಿದ್ದಾರೆ.
ಚಿಕ್ಕಮಗಳೂರು : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ಖಾಲಿ ಇದೆ

ಚಿಕ್ಕಮಗಳೂರು : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ಖಾಲಿ ಇದೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಆಗಸ್ಟ್ 31, 2018. ಜಿಲ್ಲಾ ಪಂಚಾಯತ್ ಚಿಕ್ಕಮಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 19 ಅಂಗನವಾಡಿ ಕಾರ್ಯಕರ್ತೆ, 77 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. 18 ರಿಂದ 35 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಂಗವಿಕಲ ಅಭ್ಯರ್ಥಿಗಳಿಗೆ 45 ವರ್ಷದ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ.
ಯೋಗಿ ಆದಿತ್ಯನಾಥ ಜೀವನಗಾಥೆ ಪುಸ್ತಕ ಭಾರಿ ಮಾರಾಟ

ಯೋಗಿ ಆದಿತ್ಯನಾಥ ಜೀವನಗಾಥೆ ಪುಸ್ತಕ ಭಾರಿ ಮಾರಾಟ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನಗಾಥೆಯ ಕೃತಿ 'ಯೋಗಿ ಆದಿತ್ಯನಾಥ: ದಿ ರೈಸ್ ಆಫ್‌ ಎ ಸ್ಯಾಫ್ರೋನ್ ಸೋಷಿಯಲಿಸ್ಟ್' ದೇಶದ ಅತಿ ಹೆಚ್ಚು ಮಾರಾಟ ಕಂಡ ಪುಸ್ತಕಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಲಕ್ನೋದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಉಪ ಸ್ಥಾನಿಕ ಸಂಪಾದಕ ಪ್ರವೀಣ್ ಕುಮಾರ್ ಈ ಪುಸ್ತಕ ಬರೆದಿದ್ದು, ಉತ್ತರಾಖಂಡದ ಚಿಕ್ಕ ಹಳ್ಳಿಯಿಂದ ಗೋರಖನಾಥ ದೇವಸ್ಥಾನ, ಸಂಸತ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವವರೆಗಿನ ಯೋಗಿ ಆದಿತ್ಯನಾಥ ಅವರ ಪಯಣದ ಕುರಿತು ಮಾಹಿತಿಯನ್ನು ಒಳಗೊಂಡಿದೆ.
ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ ಹೀರೋ ಹೊಸ ಡ್ಯುಯೆಟ್ 125

ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ ಹೀರೋ ಹೊಸ ಡ್ಯುಯೆಟ್ 125

ಹೀರೋ ಮೋಟೋಕಾರ್ಪ್ ಸಂಸ್ಥೆಯು ಮುಂಬರುವ ಉತ್ಸವ ದಿನಗಳಲ್ಲಿ ತನ್ನ ಬಹುನೀರಿಕ್ಷಿತಿ ಡ್ಯುಯೆಟ್ 125 ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಇದೀಗ ಹೊಸ ಸ್ಕೂಟರ್ ಅನ್ನು ಡ್ಯುಯೆಟ್‌ 125 ಬದಲಾಗಿ ವಿನೂತನ ರೀತಿಯ ಮರುನಾಮಕರಣಕ್ಕೆ ಮುಂದಾಗಿದೆ. ಹೀರೋ ಸಂಸ್ಥೆಯು ಹೊಸ ಡ್ಯುಯೆಟ್ 125 ಸ್ಕೂಟರ್ ಅನ್ನು ಡೆಸ್ಟಿನಿ 125 ಎಂದು ಮರುನಾಮಕರಣ ಮಾಡಿದೆ ಎಂಬ ಮಾಹಿತಿಗಳು ಲಭ್ಯವಾಗಿದ್ದು, ಹೊಸ ಹೆಸರಿನ ಬ್ಯಾಡ್ಜ್ ಪಡೆದುಕೊಂಡಿರುವ ಡೆಸ್ಟಿನಿ 125 ಸ್ಕೂಟರ್‌ಗಳನ್ನ ಹೀರೋ ಸಂಸ್ಥೆಯು ಈಗಾಗಲೇ ಡೀಲರ್ಸ್ ಯಾರ್ಡ್‌ಗಳಿಗೆ ರವಾನೆ ಮಾಡುತ್ತಿರುವುದಾಗಿ ಕೆಲವು ಸುದ್ದಿಮಾಧ್ಯಮಗಳು ವರದಿ ಮಾಡಿವೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more