Short News

ಬಾಕ್ಸ್ ಆಫೀಸ್ ನಲ್ಲಿ 'ಅಯೋಗ್ಯ'ನ ನಾಗಾಲೋಟ: 10 ಕೋಟಿ ಕ್ಲಬ್ ಸೇರಿದ ಚಿತ್ರ

ಬಾಕ್ಸ್ ಆಫೀಸ್ ನಲ್ಲಿ 'ಅಯೋಗ್ಯ'ನ ನಾಗಾಲೋಟ: 10 ಕೋಟಿ ಕ್ಲಬ್ ಸೇರಿದ ಚಿತ್ರ

ಒಂದೊಳ್ಳೆ ಸಿನಿಮಾ ಬಂದ್ರೆ ಕನ್ನಡ ಪ್ರೇಕ್ಷಕರು ಖಂಡಿತ ಕೈಬಿಡಲ್ಲ ಅನ್ನೋದಕ್ಕೆ ಲೇಟೆಸ್ಟ್ ಸಾಕ್ಷಿ 'ಅಯೋಗ್ಯ'. ಕನ್ನಡ ಸಿನಿ ಪ್ರೇಕ್ಷಕರ ನಾಡಿಮಿಡಿತವನ್ನ ಚೆನ್ನಾಗಿ ಅರಿತಿರುವ ನಿರ್ದೇಶಕ ಮಹೇಶ್, ಪ್ರೇಕ್ಷಕರಿಗೆ ಏನೇನು ಬೇಕೋ.. ಎಲ್ಲವನ್ನೂ 'ಅಯೋಗ್ಯ'ನ ಮೂಲಕ ನೀಡಿದ್ದಾರೆ. ಬಿಡುಗಡೆ ಆದ ಒಂಬತ್ತು ದಿನಗಳಲ್ಲಿ 'ಅಯೋಗ್ಯ' ಸಿನಿಮಾ 10 ಕೋಟಿ ಕಲೆಕ್ಷನ್ ಮಾಡಿದೆ. ಬಹುತೇಕ ಚಿತ್ರಮಂದಿರಗಳಲ್ಲಿ 'ಅಯೋಗ್ಯ' ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡುತ್ತಿದೆ ಈ ಚಿತ್ರ. ಹಾಗ್ನೋಡಿದ್ರೆ, 'ಅಯೋಗ್ಯ' ಮಹೇಶ್ ನಿರ್ದೇಶನದ ಚೊಚ್ಚಲ ಚಿತ್ರ.
ಅಂಬರೀಶ್ ಸ್ಟೈಲ್ ನಲ್ಲೇ 'ಅಂಬಿ'ಗೆ ವಿಶ್ ಮಾಡಿದ ನಟ

ಅಂಬರೀಶ್ ಸ್ಟೈಲ್ ನಲ್ಲೇ 'ಅಂಬಿ'ಗೆ ವಿಶ್ ಮಾಡಿದ ನಟ

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಸೆಪ್ಟೆಂಬರ್ 27 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸುಮಾರು ವರ್ಷದ ನಂತರ ಅಂಬರೀಶ್ ಅವರು ನಾಯಕನಾಗಿ ಕಮ್ ಬ್ಯಾಕ್ ಮಾಡ್ತಿರುವ ಸಿನಿಮಾ ಇದಾಗಿದ್ದು, ಇಡೀ ಸ್ಯಾಂಡಲ್ ವುಡ್ ಅಭಿಮಾನಿಗಳು ಮತ್ತು ಸಿನಿತಾರೆಯರು ಕೂಡ ಖುಷ್ ಆಗಿದ್ದಾರೆ. 'ಮಂಡ್ಯದ ಗಂಡು' ಮತ್ತೆ ತೆರೆಮೇಲೆ ಘರ್ಜಿಸಲಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ನಟ ರವಿಶಂಕರ್, ಅಂಬರೀಶ್ ಸ್ಟೈಲ್ ನಲ್ಲೇ ಚಿತ್ರಕ್ಕೆ ಶುಭ ಕೋರಿದ್ದಾರೆ.
ಹಿಂದು ಮಹಾಸಾಗರದ ಅಲೆಗೆ ಸಿಕ್ಕ ಅಭಿಲಾಶ್ ರಕ್ಷಣೆಗೆ ಶತಪ್ರಯತ್ನ

ಹಿಂದು ಮಹಾಸಾಗರದ ಅಲೆಗೆ ಸಿಕ್ಕ ಅಭಿಲಾಶ್ ರಕ್ಷಣೆಗೆ ಶತಪ್ರಯತ್ನ

ಹಿಂದು ಮಹಾಸಾಗರದಲ್ಲಿ ನಡೆಯುತ್ತಿರುವ ಗೋಲ್ಡ್ ನ ಗ್ಲೋಬ್ ರೇಸ್ 2018 ರಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಅಭಿಲಾಶ್ ಟಾಮಿ ಅವರು ಬಲವಾದ ಅಲೆಗಳ ಹೊಡತಕ್ಕೆ ಸಿಕ್ಕಿದ್ದು, ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಭಾರತೀಯ ನೌಕಾಸೇನೆಯ ಕಮಾಂಡರ್ ಆಗಿರುವ ಅಭಿಲಾಶ್ ಅವರ ಹಾಯಿದೋಣಿ 'ಥುರಿಯಾ' ಬಲವಾದ ಅಲೆಗೆ ಸಿಕ್ಕ ಪರಿಣಾಮ ದೋಣಿಯ ಹಿಂಭಾಗ ಜಖಂಗೊಂಡಿತ್ತು. ಅಲೆಯ ರಭಸ ಅವರನ್ನು ಬಹು ದೂರಕ್ಕೆ ಎಸೆದಿರುವ ಸಂಭವವಿದ್ದು, ಅವರು ಆಸ್ಟ್ರೇಲಿಯದ ಪರ್ಥ್ ಬಳಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ಅಚ್ಚರಿ ಜಗತ್ತು: ಶಿಶ್ನವಿಲ್ಲದೆ ಹುಟ್ಟಿದ ವ್ಯಕ್ತಿಯ ಕಥೆಯಿದು!

ಅಚ್ಚರಿ ಜಗತ್ತು: ಶಿಶ್ನವಿಲ್ಲದೆ ಹುಟ್ಟಿದ ವ್ಯಕ್ತಿಯ ಕಥೆಯಿದು!

ಆಂಡ್ರೂ ವಾರ್ಡ್ಲೆ ಪರಿಸ್ಥಿತಿಯು 20 ಮಿಲಿಯನ್ ಜನರಲ್ಲಿ ಒಬ್ಬರಿಗೆ ಬರುವಂತಹ ಜನನ ಸಂಬಂಧಿ ಅಸಾಮಾನ್ಯತೆ. ಆತ ಶಿಶ್ನವಿಲ್ಲದೆ ಹುಟ್ಟಿದ ಮತ್ತು ಬ್ಲೆಡರ್ ಎಸ್ಟ್ರೋಫಿ ಇತ್ತು. ಇದು ತುಂಬಾ ಅಪರೂಪದ ಜನ್ಮಜಾತ ಅಂಗವೈಕಲ್ಯ. ಇದು ಸಾಮಾನ್ಯವಾಗಿ ಸೊಂಟದೊಳಗಡೆ ಇರುವಂತಹ ಅಂಗ. ಆಂಡ್ರೂ ಪ್ರತಿನಿತ್ಯ ರಾತ್ರಿ ಮಲಗುವಾಗ ದೇವರಲ್ಲಿ ತನಗೆ ಶಿಶ್ನ ನೀಡು ಎಂದು ಪ್ರಾರ್ಥಿಸುತ್ತಿದ್ದ. ಆಂಡ್ರೂಗೆ ವೃಷಣಗಳು ಇದ್ದರೂ ಆತನಿಗೆ ಶಿಶ್ನವು ಇರಲಿಲ್ಲವೆಂದು ವರದಿಗಳು ಹೇಳಿವೆ. ಶಿಶ್ನ ಪಡೆಯುವ ಸಲುವಾಗಿ ಆತ ಕಳೆದ ನಾಲ್ಕು ವರ್ಷದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more