Short News

ಗಡ್ಡಕ್ಕೆ ಕತ್ತರಿ ಬಿದ್ದ ಬೆನ್ನಲ್ಲೆ ಹೊಸ ಸಿನಿಮಾ ಆರಂಭಿಸಿದ ರಾಕಿಂಗ್ ಸ್ಟಾರ್

ಗಡ್ಡಕ್ಕೆ ಕತ್ತರಿ ಬಿದ್ದ ಬೆನ್ನಲ್ಲೆ ಹೊಸ ಸಿನಿಮಾ ಆರಂಭಿಸಿದ ರಾಕಿಂಗ್ ಸ್ಟಾರ್

ಸುಮಾರು ಎರಡೂವರ್ಷದ ನಂತರ ರಾಕಿಂಗ್ ಸ್ಟಾರ್ ಯಶ್ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. 'ಕೆಜಿಎಫ್' ಚಿತ್ರದ ಪಾತ್ರಕ್ಕಾಗಿ ಗಡ್ಡ ಮತ್ತು ತಲೆ ಕೂದಲು ಬಿಟ್ಟಿದ್ದ ರಾಕಿಂಗ್ ಕೊನೆಗೂ ತಮ್ಮ ಲುಕ್ ಬದಲಾಯಿಸಿದ್ದಾರೆ. ತಮ್ಮ ರಗಡ್ ಲುಕ್ ಬದಲಿಸಿಕೊಂಡು, ಹ್ಯಾಂಡ್ಸಮ್ ರೂಪ ಪಡೆದ ನಂತರ ತಮ್ಮ ಹೊಸ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಹೌದು, 'ಕೆಜಿಎಫ್' ಚಿತ್ರದ ನಂತರ ಯಶ್ ಅಭಿನಯಿಸಲಿರುವ 'ಮೈ ನೇಮ್ ಈಸ್ ಕಿರಾತಕ' ಚಿತ್ರದ ಮುಹೂರ್ತ ಇಂದು ಜರುಗಿದೆ. ಈ ಹಿಂದೆ 'Rambo 2' ಹಾಗೂ 'ಕೃಷ್ಣ ರುಕ್ಕು' ಚಿತ್ರ ಮಾಡಿದ್ದ ಅನಿಲ್ ಕುಮಾರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಜಯಣ್ಣ ಕಂಬೈನ್ಸ್ ನಿರ್ಮಾಣ ಮಾಡುತ್ತಿದೆ.
ಮಾಲ್ಡೀವ್ಸ್ ಅಧ್ಯಕ್ಷೀಯ ಚುನಾವಣೆ, ಇಬ್ರಾಹಿಂಗೆ ಗೆಲುವು, ಭಾರತಕ್ಕೆ ಸಂಭ್ರಮ

ಮಾಲ್ಡೀವ್ಸ್ ಅಧ್ಯಕ್ಷೀಯ ಚುನಾವಣೆ, ಇಬ್ರಾಹಿಂಗೆ ಗೆಲುವು, ಭಾರತಕ್ಕೆ ಸಂಭ್ರಮ

ಮಾಲ್ಡೀವ್ಸ್ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಗೆಲುವನ್ನು ಸ್ವಾಗತಿಸಿ, ಭಾರತ ಸರ್ಕಾರವು ಶುಭ ಹಾರೈಸಿದೆ. ಚೀನಾ ಬೆಂಬಲಿತ ಹಾಲಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರಿಗೆ ಸೋಲುಂಟಾಗಿದೆ. ಸೊಲಿಹ್ ಅವರು 1,34,616 ಮತಗಳನ್ನು ಗಳಿಸಿದರೆ, ಯಮೀನ್ ಅವರು 96,132 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಚುನಾವಣೆಗೂ ಮುನ್ನ ಮಾಲ್ಡೀವ್ಸ್ ನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿತ್ತು. ಅಧ್ಯಕ್ಷ ಯಮೀನ್ ಅವರು ತಮ್ಮ ವಿರೋಧಿಗಳನ್ನು ಜೈಲಿಗಟ್ಟಿದ್ದರು, ಕೆಲವರನ್ನು ಗಡೀಪಾರು ಮಾಡಿದ್ದರು. ಇದರ ಪರಿಣಾಮವಾಗಿ ಅಮೆರಿಕ ಹಾಗೂ ವೀಶ್ವಸಂಸ್ಥೆಯಿಂದಲೂ ನಿರ್ಬಂಧ ಹೇರಿಕೆಯ ಎಚ್ಚರಿಕೆ ಸಂದೇಶ ಎದುರಿಸಿದ್ದರು.
ಸೆಪ್ಟೆಂಬರ್ 24 ರಿಂದ 30 ವರೆಗಿನ ವಾರ ಭವಿಷ್ಯ

ಸೆಪ್ಟೆಂಬರ್ 24 ರಿಂದ 30 ವರೆಗಿನ ವಾರ ಭವಿಷ್ಯ

ಜೀವನ ಎಂದರೆ ನದಿಯ ಹಾಗೆ. ಅದರ ಆರಂಭ ಹಾಗೂ ಕೊನೆಯು ವಿಸ್ಮಯ. ಆದರೆ ಆ ನದಿ ಎಲ್ಲಿ ಹುಟ್ಟಿ ಎಲ್ಲಿ ಸೇರುತ್ತದೆ? ಹರಿಸು ಸಾಗುವಾಗ ಏನೆಲ್ಲವನ್ನು ಕೊಂಡೊಯ್ಯುತ್ತಿರುತ್ತದೆ ಎನ್ನುವುದು ಅದಕ್ಕೂ ತಿಳಿದಿರುವುದಿಲ್ಲ. ನಿರಂತರವಾಗಿ ಸಾಗುತ್ತಿರುವ ನದಿಯೊಡನೆ ಬರುವುದೆಲ್ಲವೂ ಶಾಶ್ವತವಾಗಿರುವುದಿಲ್ಲ. ಕೆಲವು ಕುರುಹುಗಳು ಇರಬಹುದಷ್ಟೆ. ಹಾಗೆಯೇ ಜೀವನ ಸಹ. ನಮ್ಮ ಜೀವನದ ಪಯಣದಲ್ಲಿ ಏನೇನು ಬರುತ್ತದೆ? ಎನ್ನುವುದು ನಾವು ಊಹಿಸಲು ಸಾಧ್ಯವಿಲ್ಲ. ಅನಿರೀಕ್ಷಿತವಾಗಿ ಬರುವ ಬದಲಾವಣೆಗಳನ್ನು ಸ್ವೀಕರಿಸುತ್ತಾ ಸಾಗಬೇಕು. ಕೊನೆಗೆ ಉಳಿಯುವುದು ಒಂದು ಸುಂದರ ನೆನಪು ಅಷ್ಟೆ.

ನಾಪತ್ತೆಯಾದ ವ್ಯಕ್ತಿ  ತಮಿಳುನಾಡಿನಲ್ಲಿ ಕೊಲೆಯಾಗಿ ಪತ್ತೆ: ಪತ್ನಿಯ ಕೈವಾಡವಿರುವ ಶಂಕೆ

ನಾಪತ್ತೆಯಾದ ವ್ಯಕ್ತಿ ತಮಿಳುನಾಡಿನಲ್ಲಿ ಕೊಲೆಯಾಗಿ ಪತ್ತೆ: ಪತ್ನಿಯ ಕೈವಾಡವಿರುವ ಶಂಕೆ

ಬಜ್ಪೆ ಠಾಣೆಯಲ್ಲಿ ಇತ್ತೀಚೆಗೆ ಗಂಜಿಮಠ ನಿವಾಸಿ ಮಹಮ್ಮದ್ ಸಮೀರ್ ಪತ್ನಿ ಫಿರ್ದೌಸ್ ಮತ್ತು ಮಗುವಿನ ಜೊತೆ ಬೆಂಗಳೂರಿಗೆ ತೆರಳಿದ್ದ ವೇಳೆ ನಾಪತ್ತೆ ಆಗಿದ್ದಾನೆಂದು ಸಮೀರ್ ಅವರ ತಂದೆ ಬಜ್ಪೆ ಠಾಣೆ ಯಲ್ಲಿ ದೂರು ನೀಡಿದ್ದರು.ಈ ಪ್ರಕರಣದ ಜಾಡು ಹಿಡಿದು ಹೋದ ಪೊಲೀಸರಿಗೆ ಸಮೀರ್ ತಮಿಳುನಾಡಿನ ಕೃಷ್ಣಗಿರಿ ಎಂಬಲ್ಲಿ ಕೊಲೆಯಾಗಿರುವುದು ಪತ್ತೆಯಾಗಿದೆ. ಇದೀಗ ಈ ಕೊಲೆಗೂ ಪತ್ನಿಗೂ ಏನಾದರೂ ಸಂಭವಿದೆಯಾ ಎಂದು ಪೊಲೀಸರಿಗೆ ಶಂಕೆ ವ್ಯಕ್ತವಾಗುತ್ತಿದೆ. ಯಾಕೆಂದರೆ ಬೆಂಗಳೂರಿಗೆ ತೆರಳಿದ್ದ ಪತ್ನಿ ಫಿರ್ದೌಸ್ ಸೆ.19ರಂದು ಕಾಪುವಿನ ತವರು ಮನೆಗೆ ಆಗಮಿಸಿದ್ದು,ಮರುದಿನ 3ತಿಂಗಳ ಮಗುವನ್ನು ಮನೆಯಲ್ಲಿ ಬಿಟ್ಟು ನಾಪತ್ತೆಯಾಗಿದ್ದಾಳೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more