Short News

ಕೇರಳಕ್ಕೆ  12 ಕೋಟಿ ಕೊಟ್ಟ ಸಲ್ಮಾನ್ ಖಾನ್: ಟ್ವೀಟ್ ಮಾಡಿ ಡಿಲೀಟ್ ಮಾಡಿದ ನಟ

ಕೇರಳಕ್ಕೆ 12 ಕೋಟಿ ಕೊಟ್ಟ ಸಲ್ಮಾನ್ ಖಾನ್: ಟ್ವೀಟ್ ಮಾಡಿ ಡಿಲೀಟ್ ಮಾಡಿದ ನಟ

ಕೇರಳ ಜನರಿಗೆ ಸಲ್ಮಾನ್ ಖಾನ್ ಬಹುದೊಡ್ಡ ಸಹಾಯ ಮಾಡಿದ್ದಾರೆ. ನನ್ನ ಗಮನಕ್ಕೆ ಬಂದ ಪ್ರಕಾರ 12 ಕೋಟಿ ಮೊತ್ತವನ್ನ ಕೇರಳ ಜನತೆಗಾಗಿ ಸಲ್ಲು ಭಾಯ್ ನೀಡಿದ್ದಾರೆ ಎಂದು ಬಾಲಿವುಡ್ ನಟ ಜಾವೀದ್ ಜಫೇರಿ ಟ್ವೀಟ್ ಮಾಡಿದ್ದರು. ನಂತರ ಅದನ್ನ ಡಿಲೀಟ್ ಮಾಡಿ, ಮತ್ತೊಂದು ಟ್ವೀಟ್ ಮಾಡಿದರು. ನಂತರ ''ಸಲ್ಮಾನ್ ಖಾನ್ ಕೇರಳಗೆ 12 ಕೋಟಿ ಕೊಟ್ಟಿದ್ದಾರೆ ಎಂದು ನಾನು ಟ್ವೀಟ್ ಮಾಡಿಲ್ಲ. 12 ಕೋಟಿದ್ದಾರೆ ಎಂಬ ವಿಷ್ಯವಷ್ಟೇ ನನ್ನ ಕಿವಿಗೂ ಬಿದ್ದಿದೆ ಎಂದು ಟ್ವೀಟ್ ಮಾಡಿದ್ದೆ. ಸಲ್ಲು ಅವರ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ, ಇದನ್ನ ಯಾರೂ ಬೇಕಾದ್ರು ನಂಬುತ್ತಾರೆ, ಹಾಗೆ ನಾನು ನಂಬಿದೆ ಎಂದು ಟ್ವೀಟ್ ಮಾಡಿದ್ದಾರೆ.
ವಿಶ್ವ ನಂ.2 ಬ್ಯಾಡ್ಮಿಂಟನ್ ಆಟಗಾರ ಲೀ ಚೊಂಗ್ ವೈಗೆ ಮೂಗಿನ ಕ್ಯಾನ್ಸರ್!

ವಿಶ್ವ ನಂ.2 ಬ್ಯಾಡ್ಮಿಂಟನ್ ಆಟಗಾರ ಲೀ ಚೊಂಗ್ ವೈಗೆ ಮೂಗಿನ ಕ್ಯಾನ್ಸರ್!

ಬ್ಯಾಡ್ಮಿಂಟನ್ ದಂತಕತೆ, ಮಲೇಷ್ಯಾ ಆಟಗಾರ ಲೀ ಚೊಂಗ್ ವೈಗೆ ಆರಂಭಿಕ ಹಂತದ ಮೂಗಿನ ಕ್ಯಾನ್ಸರ್ ಇದೆ. ಚಿಕಿತ್ಸೆಗಾಗಿ ಅವರು ಚೈವಾನ್ ಗೆ ತೆರಳಿದ್ದಾರೆ ಎಂದು ಮಲೇಷ್ಯಾದ ಬ್ಯಾಡ್ಮಿಂಟನ್ ಅಸೋಸಿಯೇಷನ್ ಶನಿವಾರ ತಿಳಿಸಿದೆ. ಲೀ ಚೊಂಗ್ ಗೆ ಖಾಯಿಲೆಯಿದೆ ಎಂದು ಇತ್ತೀಚೆಗೆ ವರದಿಯೊಂದರಲ್ಲಿ ಹೇಳಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಲೇಷ್ಯನ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಅಧ್ಯಕ್ಷ ಸೆರಿ ನಾರ್ಜಾ ಜಕರಿಯಾ ಅವರು, 'ಹೌದು, ಲೀ ಚೊಂಗ್ ವೈಗೆ ಆರಂಭಿಕ ಹಂತದಲ್ಲಿರುವ ಮೂಗಿನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ' ಎಂದು ಖಾತರಿಪಡಿಸಿದ್ದಾರೆ.
ಧವನ್-ರೋ'ಹಿಟ್' ಶತಕ, ಪಾಕ್ ವಿರುದ್ಧ ಭಾರತಕ್ಕೆ ಗೆಲುವು

ಧವನ್-ರೋ'ಹಿಟ್' ಶತಕ, ಪಾಕ್ ವಿರುದ್ಧ ಭಾರತಕ್ಕೆ ಗೆಲುವು

ಏಷ್ಯಾ ಕಪ್ 2018ರ ಸೂಪರ್ ಫೋರ್ ಮೂರನೇ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರ ಆಕರ್ಷಕ ಶತಕದಾಟ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಸುಲಭ ಜಯ ದಾಖಲಿಸಲು ನೆರವು ನೀಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ಶೋಯೆಬ್ ಮಲ್ಲಿಕ್ 78, ನಾಯಕ ಸರ್ಫರಾಜ್ ಅಹಮ್ಮದ್ 44 ರನ್ ನೆರವಿನಿಂದ 50 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದು 237 ರನ್ ಪೇರಿಸಿ ಭಾರತಕ್ಕೆ 238 ಗರಿಷ್ಟ ರನ್ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ಭಾರತಕ್ಕೆ ರೋಹಿತ್-ಧವನ್ ಭರ್ಜರಿ ಜೊತೆಯಾಟದ ಬೆಂಬಲ ದೊರೆಯಿತು. 
ಲಂಚಕ್ಕಾಗಿ ರಫೇಲ್ ಡೀಲನ್ನು ಕಾಂಗ್ರೆಸ್ ವಾಪಸ್ ಕಳಿಸಿತ್ತು : ಆರ್‌ಎಸ್‌ಪಿ

ಲಂಚಕ್ಕಾಗಿ ರಫೇಲ್ ಡೀಲನ್ನು ಕಾಂಗ್ರೆಸ್ ವಾಪಸ್ ಕಳಿಸಿತ್ತು : ಆರ್‌ಎಸ್‌ಪಿ

"ಇದು ಅತ್ಯಂತ ನಾಚಿಕೆಗೇಡಿನ ವಿಷಯ, ಬೇಜವಾಬ್ದಾರಿಯುತವಾದದ್ದು. ಒಂದು ರಾಷ್ಟ್ರದ ಪ್ರಧಾನಿಯ ವಿರುದ್ಧ ಯಾವುದೇ ರಾಷ್ಟ್ರೀಯ ಪಕ್ಷದ ಅಧ್ಯಕ್ಷರೊಬ್ಬರು ಇಂಥ ಪದಗಳನ್ನು ಬಳಿಸಿಲ್ಲ. ರಾಹುಲ್ ಅಂಥವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?" ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ನರೇಂದ್ರ ಮೋದಿಯವರು ದೇಶಕ್ಕೆ ಮೋಸ ಮಾಡಿದ್ದಾರೆ, ದೇಶದ ಪ್ರಧಾನಿ 'ಕಳ್ಳ' (ಚೋರ್) ಎಂದು ಜರಿದು, ತಮ್ಮ ಹುದ್ದೆಯ ಘನೆಯನ್ನೂ ಮೀರಿ ಬಳಸಿರುವ ಪದಗಳಿಗಾಗಿ ರಾಹುಲ್ ಗಾಂಧಿಯವರನ್ನು ಮಾತಿನಲ್ಲೇ ಜರಿದುಹಾಕಿದ್ದಾರೆ ಬಿಜೆಪಿ ನಾಯಕ ರವಿ ಶಂಕರ್ ಪ್ರಸಾದ್.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more