Short News

ಸಿಂಧು ಲೋಕನಾಥ್ 'ಕಿಕಿ ಡ್ಯಾನ್ಸ್'ಗೆ ಸಖತ್ ವೈರಲ್

ಸಿಂಧು ಲೋಕನಾಥ್ 'ಕಿಕಿ ಡ್ಯಾನ್ಸ್'ಗೆ ಸಖತ್ ವೈರಲ್

ಕನ್ನಡ ನಟಿ ಸಿಂಧು ಲೋಕನಾಥ್ ಮತ್ತೆ ಕಿಕಿ ಡ್ಯಾನ್ಸ್ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಕಿಕಿ ಡ್ಯಾನ್ಸ್ ಮಾಡಿದ್ರೆ, ಬೈಯುತ್ತಿದ್ದ ಜನರ ಮಧ್ಯೆ ಸಿಂಧು ಲೋಕನಾಥ್ ಮಾಡಿರುವ ಕಿಕಿ ಡ್ಯಾನ್ಸ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದಕ್ಕೆ ಕಾರಣ ಕಿಕಿ ಡ್ಯಾನ್ಸ್ ನಲ್ಲಿ ಸಿಂಧು ಬಳಸಿಕೊಂಡಿರುವ ಹಾಡು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಆನಂದ್' ಚಿತ್ರದ 'ಟುವ್ವಿ ಟುವ್ವಿ ಎಂದು ಹಾಡುವ.....' ಗೀತೆಯನ್ನ ಬಳಸಿ ಕಿಕಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
'ಕೆಜಿಎಫ್' ಕೊಟ್ಟ ಬ್ರೇಕಿಂಗ್ : ಟ್ರೈಲರ್ ಮತ್ತು ಸಿನಿಮಾ ರಿಲೀಸ್ ದಿನಾಂಕ ಅನೌನ್ಸ್

'ಕೆಜಿಎಫ್' ಕೊಟ್ಟ ಬ್ರೇಕಿಂಗ್ : ಟ್ರೈಲರ್ ಮತ್ತು ಸಿನಿಮಾ ರಿಲೀಸ್ ದಿನಾಂಕ ಅನೌನ್ಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ದಕ್ಷಿಣ ಚಿತ್ರರಂಗದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಹಾಕಿರುವ ಸಿನಿಮಾ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಮೂಡಿಬರ್ತಿರುವ ಬಹುಕೋಟಿ ವೆಚ್ಚದ ಚಿತ್ರ. ಕೆಜಿಎಫ್ ಚಿತ್ರದ ಟ್ರೈಲರ್ ಮತ್ತು ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಎಂಬುದನ್ನ ಇಂದು (ಸೆಪ್ಟೆಂಬರ್ 16) ಅಧಿಕೃತವಾಗಿ ಘೋಷಿಸುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಅದರಂತೆ ಈಗ ಕೆಜಿಎಫ್ ಸಿನಿಮಾ ಯಾವಾಗ ಚಿತ್ರಮಂದಿರಕ್ಕೆ ಬರುತ್ತೆ ಎಂದು ಅನೌನ್ಸ್ ಮಾಡಿದ್ದಾರೆ.ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ದಕ್ಷಿಣ ಚಿತ್ರರಂಗದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಹಾಕಿರುವ ಸಿನಿಮಾ.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ಆರ್‌ಇ ಹೊಸ ಪ್ಲ್ಯಾನ್

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ಆರ್‌ಇ ಹೊಸ ಪ್ಲ್ಯಾನ್

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕ್ಲಾಸಿಕ್ 500 ಪೆಗಾಸಸ್ ಲಿಮಿಟೆಡ್ ಎಡಿಷನ್ ಬೈಕ್ ಮಾರಾಟದಲ್ಲಿ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿರುವುದು ಬಹುತೇಕ ಆರ್‌ಪಿ ಪ್ರಿಯರಿಗೆ ಗೊತ್ತಿರುವ ವಿಚಾರ. ಪೆಗಾಸಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೆಚ್ಚುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಆರ್‌ಇ ಸಂಸ್ಥೆಯು ಮಹತ್ವದ ನಿರ್ಧಾರಕ್ಕೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಂಡ್ ಇಮೇಜ್ ಹಾಳಾಗುತ್ತಿರುವುದನ್ನು ಕಂಡು ಹೊಸ ಐಡಿಯಾ ಮಾಡಿರುವ ಆರ್‌ಇ ಸಂಸ್ಥೆಯು ಅಸಮಾಧಾನ ಹೊಂದಿರುವ ಪೆಗಾಸಸ್ ಮಾಲೀಕರಿಂದ ಹೊಸ ಬೈಕ್‌ಗಳನ್ನು ವಾಪಸ್ ಪಡೆಯಲು ಮುಂದಾಗಿದೆ.

ಕಾಂಗ್ರೆಸ್ ತೃಪ್ತಿಗಾಗಿ ರಫೇಲ್ ಒಪ್ಪಂದ ಅಸಾಧ್ಯ: ರವಿಶಂಕರ್ ಪ್ರಸಾದ್

ಕಾಂಗ್ರೆಸ್ ತೃಪ್ತಿಗಾಗಿ ರಫೇಲ್ ಒಪ್ಪಂದ ಅಸಾಧ್ಯ: ರವಿಶಂಕರ್ ಪ್ರಸಾದ್

ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟನಿ ನೇತೃತ್ವದ ಕಾಂಗ್ರೆಸ್ ನಿಯೋಗ ಬುಧವಾರ ಮಹಾಲೇಖಪಾಲ(ಸಿಎಜಿ)ರನ್ನು ಭೇಟಿ ಮಾಡಿ, ರಾಫೆಲ್ ಡೀಲ್ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿತು. ಆದರೆ ಕಾಂಗ್ರೆಸ್‍ನ ನಾಯಕರ ಅಹಂಭಾವನೆ ತೃಪ್ತಿಪಡಿಸಲು ರಫೇಲ್ ಸಮರ ವಿಮಾನ ಖರೀದಿ ಒಪ್ಪಂದದ ಬಗ್ಗೆ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ದೆಹಲಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ರಫೇಲ್ ವಹಾರದಲ್ಲಿ ಯಾವುದೇ ಅಕ್ರಮ-ಅವ್ಯವಹಾರಗಳು ನಡೆದಿಲ್ಲ ಎಂದರು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more