Short News

ಆಸ್ತಿ ಮೇಲೆ ಸಾಲ ಪಡೆಯುವುದು ಹೇಗೆ?

ಆಸ್ತಿ ಮೇಲೆ ಸಾಲ ಪಡೆಯುವುದು ಹೇಗೆ?

  • ಯಾವುದಾದರೂ ಹಣಕಾಸು ಅಗತ್ಯ ಪೂರೈಸಲು ಸಾಲ ಪಡೆಯಲು ಯೋಚಿಸುತ್ತಿದ್ದರೆ ಮನೆ ಅಡಮಾನ ಸಾಲ (Home Equity Loan) ಅತ್ಯಂತ ಸೂಕ್ತವಾಗಿದೆ. ಯಾವುದೇ ವ್ಯಾಜ್ಯ ಇಲ್ಲದ ಹಾಗೂ ಸಮರ್ಪಕ ದಾಖಲಾತಿಗಳನ್ನು ಹೊಂದಿದ ವಾಸದ ಮನೆ ಅಥವಾ ವಾಣಿಜ್ಯ ಆಸ್ತಿಯನ್ನು (ಸ್ಥಿರಾಸ್ತಿ) ಅಡಮಾನವಿಟ್ಟು ಪಡೆಯುವ ಸಾಲವನ್ನು ಮನೆ ಅಡಮಾನ ಸಾಲ ಎಂದು ಕರೆಯಲಾಗುತ್ತದೆ. ಮಕ್ಕಳ ಮದುವೆ ಖರ್ಚು, ಶಿಕ್ಷಣ ಅಥವಾ ಮತ್ತೊಂದು ಆಸ್ತಿ ಖರೀದಿ ಸೇರಿದಂತೆ ಹಲವಾರು ಹಣಕಾಸು ಅಗತ್ಯಗಳ ಪೂರೈಕೆಗೆ ಮನೆ ಅಡಮಾನ ಸಾಲ ಪಡೆಯಬಹುದಾಗಿದೆ. ಸಾಲ ನೀಡುವ ಸಂಸ್ಥೆಯು ಮನೆಯ ಮಾರುಕಟ್ಟೆ ಮೌಲ್ಯವನ್ನು ಆಧರಿಸಿ ಮನೆಯನ್ನು ಭದ್ರತೆಯಾಗಿಟ್ಟುಕೊಂಡು ಸಾಲ ನೀಡುತ್ತದೆ.

ಅಬ್ಬಾಬ್ಬಾ ಉಡುಪಿ ಜಿಲ್ಲೆಯಲ್ಲಿ ಮಹಾಮಳೆಗೆ 40 ಕೋಟಿ ನಷ್ಟ!

ಅಬ್ಬಾಬ್ಬಾ ಉಡುಪಿ ಜಿಲ್ಲೆಯಲ್ಲಿ ಮಹಾಮಳೆಗೆ 40 ಕೋಟಿ ನಷ್ಟ!

ರಾಜ್ಯದಲ್ಲಿ ಮಲೆನಾಡು ಶಿವಮೊಗ್ಗ, ಕರಾವಳಿ, ದಕ್ಷಿಣ ಕನ್ನಡ, ಬಳ್ಳಾರಿ, ದಾವಣಗೆರೆ ಜಿಲ್ಲೆಯಾದ್ಯಂತ ಮಳೆ ನಿರಂತರವಾಗಿ ಸುರಿಯುತ್ತಲೇ ಇದೆ. ಜಿಲ್ಲಾಡಳಿತ ನರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಅಂದಹಾಗೆ ಉಡುಪಿಯಲ್ಲಿ ಮಳೆಯ ಆರ್ಭಟಕ್ಕೆ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, 40 ಕೋಟಿ ರೂ. ಪರಿಹಾರಕ್ಕಾಗಿ ಪ್ರಸ್ತಾವನೆ ಕಳಿಸಲಾಗಿದೆ. ಮುಖ್ಯವಾಗಿ ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಅತಿ ಹೆಚ್ಚು ಹಾನಿ ಉಂಟಾಗಿದ್ದು, ಈತನಕ ಹಲವು ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದೆ.
"ಒಂದೇ ಒಂದು ಬಾರಿ ವಾಜಪೇಯಿ  ಭಾಷಣ ಕೇಳಬೇಕು ಎಂದೆನಿಸುತ್ತಿದೆ"

"ಒಂದೇ ಒಂದು ಬಾರಿ ವಾಜಪೇಯಿ ಭಾಷಣ ಕೇಳಬೇಕು ಎಂದೆನಿಸುತ್ತಿದೆ"

ಅಟಲ್ ಬಿಹಾರಿ ವಾಜಪೇಯಿ ಅವರಿಂದ ಮತ್ತೊಮ್ಮೆ ಭಾಷಣವನ್ನು ಕೇಳಬೇಕು ಎಂದೆನಿಸುತ್ತಿದೆ ಎಂದು ವಾಜಪೇಯಿ ಅವರ ಸೋದರಿಯ ಮಗಳು ಕಾಂತಿ ಮಿಶ್ರಾ ಹೇಳಿಕೊಂಡಿದ್ದಾರೆ. ಅವರು ಭಾಷಣ ಮಾಡುವುದನ್ನು ನಮ್ಮ ಕುಟುಂಬಸ್ಥರು ಎಂದೂ ಮರೆಯುವುದಿಲ್ಲ ಎಂದಿದ್ದಾರೆ. ಮಾಜಿ ಪ್ರಧಾನಿ ಮತ್ತು ಭಾರತರತ್ನ ಪುರಸ್ಕೃತ ವಾಜಪೇಯಿ ಅವರು ವಯೋ ಸಹಜ ಅನಾರೋಗ್ಯಕ್ಕೀಡಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಇಡಲಾಗಿದೆ. ಅವರ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಸಂಬಂಧಿಗಳು, ಗಣ್ಯರು ಆಸ್ಪತ್ರೆಯತ್ತ ದೌಡಾಯಿದುತ್ತಿದ್ದು, ಆಸ್ಪತ್ರೆಯ ಸುತ್ತ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಏನಿದು 'ಟೈಪ್ ಸಿ' ಚಾರ್ಜರ್?..ಯುವಜನತೆ ಏಕೆ ಇದರ ಹಿಂದೆ ಬಿದ್ದಿದೆ?!

ಏನಿದು 'ಟೈಪ್ ಸಿ' ಚಾರ್ಜರ್?..ಯುವಜನತೆ ಏಕೆ ಇದರ ಹಿಂದೆ ಬಿದ್ದಿದೆ?!

ಬದಲಾವಣೆ ಜಗದ ನಿಯಮವಾಗದರೆ, ಅತಿವೇಗದ ಬದಲಾವಣೆ ಮೊಬೈಲ್‌ನ ನಿಯಮ ಎನ್ನಬಹುದೇನೊ ಎನ್ನುವಷ್ಟು ಮೊಬೈಲ್ ಪ್ರಪಂಚ ಬದಲಾಗುತ್ತಿದೆ. ಮೊಬೈಲ್ ಈಗ ಸ್ಮಾರ್ಟ್‌ಫೋನ್ ಆಗಿ ಭವಿಷ್ಯದಲ್ಲಿ ಸೂಪರ್ ಸ್ಮಾರ್ಟ್‌ಫೋನ್ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಅದಕ್ಕೆ ಮೊದಲ ಹೆಜ್ಜೆಯೇ ಇತ್ತೀಚಿಗೆ ಹೆಚ್ಚು ಬಳಕೆಯಲ್ಲಿರುವ ಯುಎಸ್‌ಬಿ 'ಟೈಪ್ ಸಿ' ಚಾರ್ಜರ್.!ಹೌದು, ಇತ್ತೀಚಿಗೆ 'ಟೈಪ್ ಸಿ' ಚಾರ್ಜರ್ ಎಂಬ ಗ್ಯಾಜೆಟ್ ಬಳಕೆ ಹೆಚ್ಚಾಗುತ್ತಿದೆ. ಎಲ್ಲಾ ಮೊಬೈಲ್ ಕಂಪೆನಿಗಳು ಟೈಪ್ ಸಿ ಚಾರ್ಜರ್ ಅನ್ನು ತಮ್ಮ ಸ್ಮಾರ್ಟ್‌ಫೋನಿನಲ್ಲಿ ಅಳವಡಿಸುತ್ತಿದ್ದಾರೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more