Short News

ಎಸ್ಬಿಐ ಸೂಚನೆ! ಡಿಸೆಂಬರ್ 31 ರ ಒಳಗಾಗಿ ಎಟಿಎಂ ಕಾರ್ಡ್ ಬದಲಿಸಬೇಕು

ಎಸ್ಬಿಐ ಸೂಚನೆ! ಡಿಸೆಂಬರ್ 31 ರ ಒಳಗಾಗಿ ಎಟಿಎಂ ಕಾರ್ಡ್ ಬದಲಿಸಬೇಕು

  • ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹೊಸ ಇಎಂವಿ ಚಿಪ್ ತಂತ್ರಜ್ಞಾನ ಅಳವಡಿಸಿರುವ ಕಾರ್ಡುಗಳನ್ನು ಡಿಸೆಂಬರ್ 31ರ ಒಳಗೆ ಪಡೆಯುವಂತೆ ತಿಳಿಸಿದೆ.
  • ಮೆಗ್ನೆಟಿಕ್ ಸ್ಟ್ರೈಪ್ ನ ಹಳೆಯ ಎಟಿಎಂ ಕಮ್ ಡೆಬಿಟ್ ಕಾರ್ಡುಗಳನ್ನು ಬದಲಿಸಿ ಇವಿಎಂ ಚಿಪ್ ಹೊಂದಿರುವ ಹೊಸ ಕಾರ್ಡ್ ಗಳನ್ನು ಡಿಸೆಂಬರ್ 31 ಕ್ಕೆ ಮುಂಚಿತವಾಗಿ ಬದಲಿಸಲು ಗ್ರಾಹಕರಿಗೆ ಕೇಳಿದೆ.
  • ಆನ್ಲೈನ್ ವಂಚನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರನ್ನು ವಂಚನೆಗಳಿಂದ ರಕ್ಷಿಸುವ ಉದ್ದೇಶದಿಂದ ಇವಿಎಂ ಚಿಪ್ ಆಧಾರಿತ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಬಿಡುಗಡೆ ಮಾಡಲು ಆರ್ಬಿಐ ಹೇಳಿದೆ.

ಭಾರತದಲ್ಲಿ ಆರಂಭವಾಯ್ತು ಐಫೋನ್ XS, ಐಫೋನ್ XS Max ಪ್ರೀ ಬುಕ್ಕಿಂಗ್‌

ಭಾರತದಲ್ಲಿ ಆರಂಭವಾಯ್ತು ಐಫೋನ್ XS, ಐಫೋನ್ XS Max ಪ್ರೀ ಬುಕ್ಕಿಂಗ್‌

ಹೊಸ ಆಪಲ್ ಐಫೋನ್ ಗಳಾದ ಐಫೋನ್ ಎಕ್ಸ್ಎಸ್ ಮತ್ತು ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ಸೆಪ್ಟೆಂಬರ್ 28 ರಿಂದ ಭಾರತದಲ್ಲಿ ಮಾರಾಟವಾಗಲಿದೆ. ಆದರೆ ಒಂದು ವೇಳೆ ಬಿಡುಗಡೆಗೊಂಡ ದಿನವೇ ಹೊಸ ಐಫೋನ್ ನಿಮ್ಮ ಕೈಯಲ್ಲಿರಬೇಕು ಎಂದು ಇಚ್ಛಿಸಿದರೆ ಪ್ರೀಬುಕ್ ಮಾಡಬೇಕಾಗುತ್ತದೆ. ಐಫೋನ್ ಎಕ್ಸ್ ಎಸ್ ಮತ್ತು ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ನ ಎಲ್ಲಾ ವೇರಿಯಂಟ್ ಫೋನ್ ಗಳ ಪ್ರೀಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಏರ್ ಟೆಲ್ ಮತ್ತು ರಿಲಯನ್ಸ್ ಜಿಯೋ ಗಳು ಈಗಾಗಲೇ ಪ್ರೀಬುಕ್ಕಿಂಗ್ ಆರ್ಡರ್ ಗಳನ್ನು ಸ್ವೀಕರಿಸಲು ಆರಂಭಿಸಿದ್ದು ಏರ್ ಟೆಲ್ ಮತ್ತು ರಿಲಯನ್ಸ್ ಜಿಯೋ ವೆಬ್ ಸೈಟ್ ಗಳಲ್ಲಿ ಕ್ರಮವಾಗಿ ಆರ್ಡರ್ ಮಾಡಲು ಗ್ರಾಹಕರಿಗೆ ಅವಕಾಶವಿದೆ.
ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ ಅರ್ಜಿ ಆಹ್ವಾನ

ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ ಅರ್ಜಿ ಆಹ್ವಾನ

ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಡಾಕ್ಟರ್ಸ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 29, 2018 ಕೊನೆಯ ದಿನಾಂಕ. ಎಂಬಿಬಿಎಸ್ ವಿದ್ಯಾಭ್ಯಾಸವಾಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಕ್ಲಿನಿಕಲ್ ಜಡ್ಜ್ ಮೆಂಟ್ ಸ್ಕಿಲ್ ಅವಶ್ಯಕವಾಗಿದೆ. ಹುದ್ದೆಗೆ ಅರ್ಜಿ ಸಲ್ಲಿಸಲು ಆಫೀಶಿಯಲ್ ವೆಬ್‌ಸೈಟ್ https://www.sailcareers.com/ ಗೆ ಲಾಗಿನ್ ಆಗಿ.
ಭಾರತದ ಮೊದಲ 'ದೇಸಿ' ಜಿಪಿಎಸ್‌ ಬಿಡುಗಡೆ..!

ಭಾರತದ ಮೊದಲ 'ದೇಸಿ' ಜಿಪಿಎಸ್‌ ಬಿಡುಗಡೆ..!

ಕಳೆದ ವರ್ಷದಿಂದ ಕೇಳಿಬರುತ್ತಿದ್ದ "ದೇಸಿ" ಜಿಪಿಎಸ್ ಮಾಡ್ಯೂಲ್ ಅಂತೂ ಬಿಡುಗಡೆಯಾಗಿದೆ. ನವದೆಹಲಿಯಲ್ಲಿ ನಡೆದ ಒಂದು ಸಮಾರಂಭದಲ್ಲಿ, ST ಮೈಕ್ರೊಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಟೆಕ್ ಸ್ಥಳಗಳನ್ನು ಪತ್ತೆಹಚ್ಚಲು ಭಾರತ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (IRNSS) ಆಧಾರಿತ GT ಘಟಕವನ್ನು UTraQ ಪರಿಚಯಿಸಿತು. ಇದುವರೆಗೂ ಡಿವೈಸ್ ನಲ್ಲಿರುವ ಜಿಪಿಎಸ್ ಅಪ್ಲಿಕೇಷನ್ ಯುಎಸ್ ಸೆಟಲೈಟ್ ನೀಡುವ ಮಾಹಿತಿಯ ಅನುಸಾರವೇ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ UTraQ ಭಾರತೀಯ ಮೂಲಕ ಸ್ಯಾಟಲೈಟ್ ಸಿಸ್ಟಮ್ ನ್ನು ಹೊಂದಿದ್ದು ಹೆಚ್ಚು ನಿಖರವಾಗಿರುವ ಮತ್ತು ವಿಶ್ವಾಸಾರ್ಹ ಸ್ಥಳದ ಡಾಟಾವನ್ನು ಒದಗಿಸುತ್ತದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more