Short News

50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇವರನಾಡಿನಲ್ಲಿ ಮಹಾಮಳೆ: 28ಕ್ಕೇರಿದ ಸಾವಿನ ಸಂಖ್ಯೆ

50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇವರನಾಡಿನಲ್ಲಿ ಮಹಾಮಳೆ: 28ಕ್ಕೇರಿದ ಸಾವಿನ ಸಂಖ್ಯೆ

ದೇವರನಾಡು ಕೇರಳದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಈವರೆಗೆ ಸಾವನ್ನಪ್ಪಿರುವವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಸಚಿವ ಕೆಜೆ ಅಲ್ಫಾನ್ಸೋ ಮಾಧ್ಯಮಗಳಿಗೆ ಮಾಹಿತಿ ನೀಡಿದೆ. ಇಡುಕ್ಕಿ ಜಿಲ್ಲೆಯಲ್ಲೇ ಅತೀ ಹೆಚ್ಚಿನ ಪ್ರಮಾಣದ ಹಾನಿಯಾಗಿದ್ದು, ಭೂಕುಸಿತ, ಪ್ರವಾಹದಲ್ಲಿ ಕೊಚ್ಚಿ ಹೋಗುವಿಕೆಯಂತಹ ವಿವಿಧ ಪ್ರಕರಣ ನಡೆದಿದೆ. ಈ ಹಿನ್ನೆಲೆಯಲ್ಲಿ ಕೇರಳದ ವಿವಿಧ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಳೆದೆರಡು ದಿನಗಳಲ್ಲಿ 128.6ಮಿಮಿ ಮತ್ತು 124ಮಿಮೀ ಮಳೆಯಾಗಿದೆ. ಜನರ ಕಷ್ಟ ಹೇಳ ತೀರದಾಗಿದೆ. ಪ್ರಸ್ತುತ ಕೇರಳದ ಮಳೆ 50 ವರ್ಷಗಳಲ್ಲೇ ಅತ್ಯಂತ ದೊಡ್ಡ ಅನಾಹುತ ಎಂದು ತಜ್ಞರು ಹೇಳಿದ್ದಾರೆ.
ಬಿಡುಗಡೆಗೊಂಡ ಯಮಹಾ ಆರ್15 ವಿ3.0 ಮೊಟೊಜಿಪಿ ಎಡಿಷನ್ ಬೈಕ್..

ಬಿಡುಗಡೆಗೊಂಡ ಯಮಹಾ ಆರ್15 ವಿ3.0 ಮೊಟೊಜಿಪಿ ಎಡಿಷನ್ ಬೈಕ್..

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಯಮಹಾ ತಮ್ಮ ವೈಜೆಡ್‍ಎಫ್ ಆರ್15 ವಿ3.0 ಬೈಕಿನ ಮೋಟೊ ಜಿಪಿ ಲಿಮಿಟೆಡ್ ಎಡಿಷನ್ ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1.30 ಲಕ್ಷಕ್ಕೆ ಬೆಲೆಯನ್ನು ನಿಗದಿಪಡಿಸಲಾಗಿದೆ. ಸಾಧಾರಣ ವೇರಿಯಂಟ್ ಬೈಕ್‍‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1.27 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ. ಹೊಸದಾಗಿ ಬಿಡುಗಡೆಗೊಂಡ ಯಮಹಾ ಆರ್ 15 ವಿ3.0 ಮೊಟೊ ಜಿಪಿ ಲಿಮಿಟೆಡ್ ಬೈಕ್ ಯಮಹಾ ರೇಸಿಂಗ್ ಬ್ಲೂ ಬಣ್ಣದಲ್ಲಿ ಲಗ್ಗೆಯಿಟ್ಟಿದ್ದು, ಮೊಟೊ ಜಿಪಿ ಚಿನ್ಹೆಯನ್ನು ಬೈಕಿನ ಫೈರಿಂಗ್, ಟ್ಯಾಂಕ್ ಮತ್ತು ಸೈಡ್ ಪ್ಯಾನಲ್‍‍ಗಳ ಮೇಲೆ ಅಳವಡಿಸಲಾಗಿದೆ.
ಒಂದು ವರ್ಷಗಳ ಕಾಲ ಹೊಸ ಕಾರುಗಳ ಬಿಡುಗಡೆಗೆ ಬ್ರೇಕ್ ಹಾಕಲಿದೆ ಮಹೀಂದ್ರಾ

ಒಂದು ವರ್ಷಗಳ ಕಾಲ ಹೊಸ ಕಾರುಗಳ ಬಿಡುಗಡೆಗೆ ಬ್ರೇಕ್ ಹಾಕಲಿದೆ ಮಹೀಂದ್ರಾ

ನಿಮಗೆಲ್ಲಾ ಗೊತ್ತಿರುವ ಹಾಗೆ ಕಳೆದ 2017ರ ಏಪ್ರಿಲ್ 1ರಿಂದ ದೇಶದಲ್ಲಿ ಬಿಎಸ್ 3 ವಾಹನಗಳ ಅಭಿವೃದ್ಧಿ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿರುವ ಕೇಂದ್ರ ಸಾರಿಗೆ ಇಲಾಖೆಯು ಬಿಎಸ್ 4 ಮತ್ತು ಅದಕ್ಕಿಂತ ಮೇಲ್ಪಟ್ಟ ವಾಹನ ಮಾದರಿಗಳನ್ನು ಮಾತ್ರವೇ ಮಾರಾಟಕ್ಕೆ ಅವಕಾಶ ನೀಡುತ್ತಿದೆ. ಹೀಗಿರುವಾಗ ಮುಂದಿನ 2020ರ ವೇಳೆಗೆ ಬಿಎಸ್ 4 ವಾಹನ ಉತ್ಪಾದನೆ ಮತ್ತು ಮಾರಾಟ ಕೂಡಾ ನಿಷೇಧಗೊಳ್ಳಲಿದ್ದು, ಇದಕ್ಕಾಗಿ ಹೊಸ ಯೋಜನೆ ರೂಪಿಸಿರುವ ಮಹೀಂದ್ರಾ ಸಂಸ್ಥೆಯು ಒಂದು ವರ್ಷಗಳ ಕಾಲ ಹೊಸ ಕಾರುಗಳ ಮಾರಾಟದಿಂದ ಹಿಂದೆ ಸರಿಯಲು ನಿರ್ಧರಿಸಲಿದೆ.
ಸಿಡುಕಿನ ಹುಡುಗಿ ದೀಪಾ ಪದಕ ಗೆದ್ದೇ ಗೆಲ್ಲುತ್ತಾಳೆ: ಕೋಚ್ ಬಿಶ್ವೇಶ್ವರ್

ಸಿಡುಕಿನ ಹುಡುಗಿ ದೀಪಾ ಪದಕ ಗೆದ್ದೇ ಗೆಲ್ಲುತ್ತಾಳೆ: ಕೋಚ್ ಬಿಶ್ವೇಶ್ವರ್

ಝಿದ್, ಗುಸ್ಸಾ ಮತ್ಲಬ್ ಝಿದ್ ಔರ್ ಗುಸ್ಸಾ ತೊ ಏಕ್ ಹಿ ಚೀಝ್ ಹೋತೀ ಹೆ' (ಮೊಂಡುತನ, ಕೋಪ. ಅಂದರೆ ಮೊಂಡುತನ ಮತ್ತು ಕೋಪ ಎರಡೂ ಒಂದೇ ವಿಚಾರವಾಗುತ್ತದೆ) ಎಂದು ದೀಪಾ ಕರ್ಮಾಕರ್ ಅವರ ಏಷ್ಯಾನ್ ಗೇಮ್ಸ್ ತಯಾರಿ ಬಗ್ಗೆ ಅವರ ಕೋಚ್ ಬಿಶ್ವೇಶ್ವರ್ ನಂದಿ ಪ್ರತಿಕ್ರಿಯಿಸಿದರು. ನಂದಿ ಅವರ ಮಾತಿನ ತಿರುಳಿಷ್ಟೇ, ಸಕಾರಾತ್ಮಕ ಸಿಡುಕಿನ ಹುಡುಗಿ ದೀಪಾ ಏಷ್ಯನ್ ಗೇಮ್ಸ್ ಪದಕ ಗೆಲ್ಲುವ ಛಲದಲ್ಲಿದ್ದಾರೆ. ಮುಂಬರಲಿರುವ ಜಕಾರ್ತಾ ಗೇಮ್ಸ್ ನಲ್ಲಿ ಫೈನಲ್ ಪ್ರವೇಶಿಸುವ ಮೊದಲ ಗುರಿಯನ್ನು ಜಿಮ್ನಾಸ್ಟ್ ಕರ್ಮಾಕರ್ ಇಟ್ಟುಕೊಂಡಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more