Short News

ಏರ್ ಇಂಡಿಯಾ ಮತ್ತೆ ಸಂಬಳ ತಡ: ಸುರಕ್ಷತೆ ಬಗ್ಗೆ ಸಿಬ್ಬಂದಿ ಕಳವಳ

ಏರ್ ಇಂಡಿಯಾ ಮತ್ತೆ ಸಂಬಳ ತಡ: ಸುರಕ್ಷತೆ ಬಗ್ಗೆ ಸಿಬ್ಬಂದಿ ಕಳವಳ

ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ, ಸತತ ಐದನೇ ತಿಂಗಳೂ ಕೂಡ ತನ್ನ ನೌಕರರ ವೇತನ ಪಾವತಿ ವಿಳಂಬ ಮಾಡಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾ, ತನ್ನ ಸಿಬ್ಬಂದಿಗೆ ಜುಲೈ ತಿಂಗಳ ಸಂಬಳವನ್ನು ಇನ್ನೂ ಮಂಜೂರು ಮಾಡಿಲ್ಲ. ಈ ಸಂಬಂಧ ಏರ್ ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ಭಾರತೀಯ ವಾಣಿಜ್ಯ ಪೈಲಟ್‌ಗಳ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ದೀಪಾಂಕರ್ ಗುಪ್ತಾ ಪತ್ರ ಬರೆದಿದ್ದಾರೆ. ಸತತ ಐದನೇ ತಿಂಗಳೂ ವೇತನ ಪಾವತಿ ವಿಳಂಬವಾಗಿರುವುದು ನೋವುಂಟು ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ದಿನಕ್ಕೆ ಕನ್ನಡದಲ್ಲಿಯೂ ಶುಭ ಕೋರಿದ ಇಸ್ರೇಲ್

ಸ್ವಾತಂತ್ರ್ಯ ದಿನಕ್ಕೆ ಕನ್ನಡದಲ್ಲಿಯೂ ಶುಭ ಕೋರಿದ ಇಸ್ರೇಲ್

ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದ್ದ ಭಾರತಕ್ಕೆ ಬುಧವಾರ ಜಗತ್ತಿನ ಅನೇಕ ದೇಶಗಳು ಶುಭಾಶಯ ತಿಳಿಸಿದ್ದವು.

ಆದರೆ, ಇಸ್ರೇಲ್ ಶುಭ ಹಾರೈಸಿದ ಪರಿ ತುಸು ವಿಭಿನ್ನವಾಗಿತ್ತು. ಇಸ್ರೇಲ್ 72ನೇ ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಭಾರತಕ್ಕೆ ಶುಭ ಹಾರೈಸಿದ್ದು ವಿಭಿನ್ನ ಭಾಷೆಗಳಲ್ಲಿ.

ನಾಲ್ಕು ಭಾಷೆಗಳಲ್ಲಿ ಇಸ್ರೇಲ್ ಶುಭ ಕೋರಿದ್ದು, ಅದರಲ್ಲಿ ಕನ್ನಡವೂ ಸೇರಿದೆ. ಹಿಂದಿ ಮತ್ತು ಮರಾಠಿ ಹೊರತಾಗಿ ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆಗಳಿಗಿಂತ ಇಸ್ರೇಲ್ ಕನ್ನಡಕ್ಕೆ ಆದ್ಯತೆ ನೀಡಿರುವುದು ವಿಶೇಷ.

ಆಗಸ್ಟ್ 20ರವರೆಗೆ ಶಿರಾಡಿ ಘಾಟ್ ಸಂಚಾರ ಸಂಪೂರ್ಣ ಬಂದ್

ಆಗಸ್ಟ್ 20ರವರೆಗೆ ಶಿರಾಡಿ ಘಾಟ್ ಸಂಚಾರ ಸಂಪೂರ್ಣ ಬಂದ್

ವಿಪರೀತ ಮಳೆಯಿಂದ ಗುಡ್ಡ ಹಾಗೂ ರಸ್ತೆ ಕುಸಿತ ಉಂಟಾಗುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆಗಸ್ಟ್ 20ರವರೆಗೂ ಶಿರಾಡಿ ಘಾಟ್ ಮಾರ್ಗದಲ್ಲಿನ ಸಂಚಾರವನ್ನು ಬಂದ್ ಮಾಡಿದೆ.

ಅಲ್ಲದೆ, ಭಾರಿ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸೀಸ್ ವಾಹನಗಳು, ಎಲ್ಲ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ಓಡಾಟವನ್ನು ಆಗಸ್ಟ್ 25ರವರೆಗೂ ನಿಷೇಧಿಸಿದೆ.

ಸಕಲೇಶಪುರ ಉಪವಿಭಾಗದ ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿ ಘಾಟ್ ಭಾಗದ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಧನಂಜಯ್-ಸೂರಿ ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತಿಬ್ಬರು ನಟಿಯರು

ಧನಂಜಯ್-ಸೂರಿ ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತಿಬ್ಬರು ನಟಿಯರು

'ಟಗರು' ಚಿತ್ರದ ನಂತರ ನಿರ್ದೇಶಕ ಸೂರಿ ಮತ್ತು ಡಾಲಿ ಧನಂಜಯ್ ಜೋಡಿಯಲ್ಲಿ ಇನ್ನೊಂದು ಸಿನಿಮಾ ಬರ್ತಿದೆ. ಈ ಚಿತ್ರಕ್ಕೆ 'ಪಾಪ್ ಕಾರ್ನ್ ಮಂಕಿ ಟೈಗರ್' ಎಂದು ಹೆಸರಿಡಲಾಗಿದೆ. ಧನಂಜಯ್ ನಾಯಕನಾಗಿದ್ದು, ನಿವೇದಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ, ಮತ್ತಿಬ್ಬರು ಹೊಸ ನಟಿಯರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಬಹಿರಂಗವಾಗಿದೆ. ಶ್ರೀನಿವಾಸ ಎಂಬ ಪಾತ್ರದಲ್ಲಿ ಧನಂಜಯ್ ಹಾಗೂ ದೇವಿಕಾ ಪಾತ್ರದಲ್ಲಿ ನಿವೇದಿತಾ ಬಣ್ಣ ಹಚ್ಚಲಿದ್ದು, ಸಪ್ತಮಿ ಹಾಗೂ ಅಮೃತಾ ಎಂಬ ನಟಿಯರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗಿರಿಜಾ ಮತ್ತು ನಂದಿನಿ ಎಂಬ ಪಾತ್ರಗಳನ್ನ ಇವರಿಬ್ಬರು ಪೋಷಿಸಲಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more