Short News

ಇಂದಿನ ಭಾರತ ಬಂದ್ ಮುಂದೂಡಿದ ದಲಿತ ಸಂಘಟನೆಗಳು

ಇಂದಿನ ಭಾರತ ಬಂದ್ ಮುಂದೂಡಿದ ದಲಿತ ಸಂಘಟನೆಗಳು

ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಕಾಯ್ದೆಯಲ್ಲಿ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ದಲಿತ ಸಂಘಟನೆಗಳು ಕರೆ ನೀಡಿದ್ದ ಬಂದ್ ಅನ್ನು ಮುಂದೂಡಲಾಗಿದ್ದು, ಇಂದು ಕೆಲವೆಡೆ ಕೇವಲ ಪ್ರತಿಭಟನೆಗಳಷ್ಟೇ ನಡೆಯಲಿವೆ. "ಎಸ್ಸಿ ಎಸ್ಟಿ ಕಾಯ್ದೆಗೆ ಸಂಬಂಧಿಸಿದಂತೆ ನಮ್ಮ ಬೇಡಿಕೆಗಳು ಸದ್ಯಕ್ಕೆ ಈಡೇರಿದ್ದು, ಅದಕ್ಕಾಗಿ ಬಂದ್ ಅನ್ನು ಮುಂದೂಡಿದ್ದೇವೆ. ಆದರೆ ನಮ್ಮ ಮತ್ತಷ್ಟು ಬೇಡಿಕೆಗಳು ಈಡೇರಬೇಕಿದೆ. ಅದಕ್ಕಾಗಿ ಮತ್ತೆ ಬಂದ್ ಮಾಡುತ್ತೇವೆ. ಆದರೆ ಅದಕ್ಕೆ ದಿನ ನಿಗದಿಯಾಗಿಲ್ಲ" ಎಂದು ಅಖಿಲ ಭಾರತ ಅಂಬೇಡ್ಕರ್ ಮಹಾಸಭಾ ಹೇಳಿದೆ.
ಕ್ರಿಕೆಟ್ಟಿಗೆ ಗುಡ್ ಬೈ ಹೇಳಿದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್

ಕ್ರಿಕೆಟ್ಟಿಗೆ ಗುಡ್ ಬೈ ಹೇಳಿದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್

ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್ ಅವರು ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. 2015ರಲ್ಲೇ ಎಲ್ಲಾ ಬಗೆಯ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಗೆ ವಿದಾಯ ಹೇಳಿದ್ದ ಜಾನ್ಸನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಬಿಗ್ ಬ್ಯಾಷ್ ಲೀಗ್ ನಲ್ಲಿ ಪರ್ತ್ ಸ್ಕ್ರೋಚರ್ಸ್ ಪರ ಆಡುತ್ತಿದ್ದರು. 2013-14ರ ಆಷ್ಯಸ್ ಸರಣಿಯಲ್ಲಿ ಆಸ್ಟ್ರೇಲಿಯಾ 5-0ರಲ್ಲಿ ಗೆಲುವು ಸಾಧಿಸಲು ನೆರವಾಗಿದ್ದರು. ಆದರೆ, ನಂತರ ಗಾಯಗೊಂಡು , ಲಯ ಕಳೆದುಕೊಂಡು ತಂಡದಿಂದ ಹೊರಗುಳಿಯಬೇಕಾಯಿತು.
ತೆಂಗಿನ ಎಣ್ಣೆಯಿಂದ ಹಲ್ಲು ಉಜ್ಜಿದರೆ- ಹಲ್ಲುಗಳು ಇನ್ನಷ್ಟು ಬೆಳ್ಳಗೆ ಆಗುತ್ತೆ!

ತೆಂಗಿನ ಎಣ್ಣೆಯಿಂದ ಹಲ್ಲು ಉಜ್ಜಿದರೆ- ಹಲ್ಲುಗಳು ಇನ್ನಷ್ಟು ಬೆಳ್ಳಗೆ ಆಗುತ್ತೆ!

ಹಲವಾರು ಅಧ್ಯಯನಗಳು ತೆಂಗಿನ ಎಣ್ಣೆ ಟೂತ್ ಪೇಸ್ಟ್‌ಗೆ ಪರಿಣಾಮಕಾರಿಯಾದ ಬದಲಿ ಉತ್ಪನ್ನ ಎಂದು ಸಾಭೀತು ಮಾಡಿವೆ. ಹಾಗು ಇದರಲ್ಲಿ ಸ್ವಾಭಾವಿಕವಾದ ಆಂಟಿ-ಬ್ಯಾಕ್ಟೀರಿಯಾ ಗುಣಗಳು ಇದ್ದು, ಇದು ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ ಹಾಗು ಟಾಕ್ಸಿನ್‌ಗಳು ನಿವಾರಿಸುತ್ತದೆ. ತೆಂಗಿನ ಎಣ್ಣೆಯು ದಂತ ಸವಕಳಿಯನ್ನು ಇನ್ನಿತರ ಓರಲ್-ಕ್ಲೀನ್ಸಿಂಗ್ ಉತ್ಪನ್ನಗಳಿಗಿಂತ ಪರಿಣಾಮಕಾರಿಯಾಗಿ ತಡೆಯುತ್ತದೆ. ಒಂದು ಅಧ್ಯಯನದ ಪ್ರಕಾರ ತೆಂಗಿನ ಎಣ್ಣೆಯು ಪ್ಲಾಕ್ ಉತ್ಪತ್ತಿಯಾಗುವುದನ್ನು ಕಡಿಮೆ ಮಾಡುತ್ತದೆಯಂತೆ.
'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಬಗ್ಗೆ ಹೊಸ ಕಥೆ ಹೇಳಿದ ಸಾಧು ಕೋಕಿಲಾ

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಬಗ್ಗೆ ಹೊಸ ಕಥೆ ಹೇಳಿದ ಸಾಧು ಕೋಕಿಲಾ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ. 2014ರಲ್ಲಿ ತೆರೆಕಂಡ ಈ ಸಿನಿಮಾ ಸ್ಯಾಂಡಲ್ ವುಡ್ ಇತಿಹಾಸದಲ್ಲಿ ಬಹುದೊಡ್ಡ ಬ್ಲಾಕ್ ಬಸ್ಟರ್. ಈ ಚಿತ್ರದಲ್ಲಿ ಸಾಧುಕೋಕಿಲಾ ಅವರ ಪಾತ್ರವನ್ನ ಸೃಷ್ಟಿಸಿದ್ದೇ ರಾಕಿಂಗ್ ಸ್ಟಾರ್ ಯಶ್ ಅಂತೆ. ಈ ಪಾತ್ರವನ್ನ ಹುಟ್ಟುಹಾಕಿ, ಇದನ್ನ ಸಾಧುಕೋಕಿಲಾ ಅವರೇ ಮಾಡಬೇಕು ಎಂದು ಪಟ್ಟು ಹಿಡಿದು ಮಾಡಿಸಿದ್ದರಂತೆ. ಇದಿಷ್ಟು ಬರಿ ಪ್ರೋಮೋದಲ್ಲಿ ಹೇಳಿರುವುದು ಮಾತ್ರ. ಪೂರ್ತಿ ಎಪಿಸೋಡ್ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more