Short News

ಭೂಗತ ಪಾತಕಿ ದಾವೂದ್ ನ ಮಸುಲ್ಲಾ ಬಿಲ್ಡಿಂಗ್ 3.5 ಕೋಟಿ ರು.ಗೆ ಹರಾಜು!

ಭೂಗತ ಪಾತಕಿ ದಾವೂದ್ ನ ಮಸುಲ್ಲಾ ಬಿಲ್ಡಿಂಗ್ 3.5 ಕೋಟಿ ರು.ಗೆ ಹರಾಜು!

ದಕ್ಷಿಣ ಮುಂಬಯಿನ ಪಾಕ್ಮೋಡಿಯಾ ಸ್ಟ್ರೀಟ್ ನಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಮಸುಲ್ಲಾ ಬಿಲ್ಡಿಂಗ್ ಸುಮಾರು 3.5 ಕೋಟಿ ರು ಗೆ ಮಾರಾಟವಾಗಿದೆ. ಸೈಫೀ ಬುರ್ಹಾನಿ ಅಪ್ ಲಿಪ್ ಮೆಂಟ್ ಟ್ರಸ್ಟ್ ಈ ಕಟ್ಟಡವನ್ನು ತನ್ನದಾಗಿಸಿಕೊಂಡಿದೆ. ಮಾಧ್ಯಮಗಳ ಪ್ರಕಾರ ಬಾರದ್ವಾಜ್ 1.91ಕೋಟಿ ರು ನಿಗದಿ ಪಡಿಸಿದ್ದರು. ಸಾರ್ವಜನಿಕ ಹರಾಜಿನಲ್ಲಿ ಅವರು ಭಾಗವಹಿಸಿರಲಿಲ್ಲ, ಸೀಲಡ್ ಟೆಂಡರ್ ಪ್ರಕ್ರಿಯೆ ನಡೆಯಿತು. ಇಂದಿರಾ ತಿವಾರಿ ಫೈನಲ್ ಅವರಿಗೆ ಸೇರಿದ ಟ್ರಸ್ಟ್ ಗೆ ಅಂತಿಮವಾಗಿ ಮಾರಾಟವಾಗಿದೆ. ಸ್ಮಗ್ಲಿಂಗ್, ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ನಿಗ್ರಹ ಕಾಯ್ದೆಯಡಿ ಈ ಆಸ್ತಿಯನ್ನು ಹರಾಜು ಹಾಕಲಾಗಿತ್ತು.
ಧ್ವಜಾರೋಹಣದ ವೇಳೆ ಅಮಿತ್ ಶಾ ಕೈಯಿಂದ ಬಿದ್ದ ತಿರಂಗ ಧ್ವಜ, ದೇಶದಾದ್ಯಂತ ವ್ಯಾಪಕ ಟೀಕೆ

ಧ್ವಜಾರೋಹಣದ ವೇಳೆ ಅಮಿತ್ ಶಾ ಕೈಯಿಂದ ಬಿದ್ದ ತಿರಂಗ ಧ್ವಜ, ದೇಶದಾದ್ಯಂತ ವ್ಯಾಪಕ ಟೀಕೆ

72ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷರು ಧ್ವಜಾರೋಹಣ ಮಾಡುವ ವೇಳೆ, ರಾಷ್ಟ್ರಧ್ವಜ ನೆಲಕ್ಕೆ ಬಿದ್ದ ಘಟನೆ ನಡೆದಿದೆ. ಪಕ್ಷದ ಮುಖ್ಯ ಕಛೇರಿಯಲ್ಲಿ ರಾಷ್ಟ್ರಧ್ವಜ ಹಾರಿಸುವ ಸಮಯದಲ್ಲಿ ಅಮಿತ್ ಶಾ ಧ್ವಜದ ದಾರವನ್ನು ತೆರೆಯುವ ವೇಳೆ, ದಾರ ಕೈಯಿಂದ ಜಾರಿದೆ, ಧ್ವಜ ಜಾರಿ ನೆಲಕ್ಕೆ ಬಿದ್ದಿದೆ. ಧ್ವಜ ನೆಲ್ಲಕ್ಕೆ ಬಿದ್ದ ಕೂಡಲೇ ಎಚ್ಚೆತ್ತಕೊಂಡ ಅಮಿತ್ ಶಾ ಮತ್ತೆ ದಾರವನ್ನು ಮೇಲೆಳೆದು ಧ್ವಜಾರೋಹಣ ನಡೆಸಿ, ಧ್ವಜಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ. ದೇಶದ ಧ್ವಜವನ್ನು ಸಂಬಾಳಿಸಲಾಗದ ವ್ಯಕ್ತಿ, ದೇಶವನ್ನು ಇನ್ನೇಗೆ ಸಂಬಾಳಿಸಿಯಾರು ಎಂದು ಕಾಂಗ್ರೆಸ್ ಟ್ವೀಟ್ ಮೂಲಕ, ಬಿಜೆಪಿಯ ಕಾಲೆಳೆದಿದೆ.
ಭಾರಿ ಮಳೆ, ಪ್ರವಾಹ: ವಿವಿಧೆಡೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ರದ್ದು

ಭಾರಿ ಮಳೆ, ಪ್ರವಾಹ: ವಿವಿಧೆಡೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ರದ್ದು

ರಾಜ್ಯದ ಕರಾವಳಿ ಹಾಗೂ ನೆರೆಯ ಕೇರಳದಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ವಿವಿಧೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಕರ್ನಾಟಕ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಬಸ್ ಸಂಚಾರವನ್ನು ರದ್ದುಗೊಳಿಸಿದೆ. ಬೆಂಗಳೂರಿನಿಂದ ಮಂಗಳೂರು, ಸುಬ್ರಮಣ್ಯ, ಧರ್ಮಸ್ಥಳ ಮತ್ತು ಕುಂದಾಪುರಕ್ಕೆ ಸಂಚರಿಸುವ ಎಲ್ಲ ರಾಜಹಂಸ, ಐರಾವತ, ಸ್ಲೀಪರ್ ಬಸ್‌ಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ. ಕೇವಲ ಕರ್ನಾಟಕ ಸಾರಿಗೆಯ ವೇಗಧೂತ ಬಸ್‌ಗಳು ಮಾತ್ರ ಚಾರ್ಮಾಡಿ ಮಾರ್ಗವಾಗಿ ಮಂಗಳೂರಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಮಹೀಂದ್ರಾ ಕಾರುಗಳ ಮೇಲೆ  ಬೆಸ್ಟ್  ಆಫರ್

ಮಹೀಂದ್ರಾ ಕಾರುಗಳ ಮೇಲೆ ಬೆಸ್ಟ್ ಆಫರ್

ದೇಶಿಯ ಕಾರು ಉತ್ಪಾದನಾ ಸಂಸ್ಥೆಯಾದ ಟಾಟಾ ಮೋಟಾರ್ಸ್ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕಾಗಿ ಟಿಯಾಗೋ ಕಾರುಗಳ ಮೇಲೆ ರೂ.10 ಸಾವಿರ ಎಕ್ಸ್‌ಚೆಂಜ್ ಮತ್ತು ಮೊದಲ ವರ್ಷದ ಉಚಿತ ಕಾರು ವಿಮೆ ನೀಡಲಿದೆ. ಅದೇ ರೀತಿಯಾಗಿ ಟಿಗೋರ್ ಕಾರುಗಳ ಮೇಲೂ ಸಹ ರೂ.10 ಸಾವಿರ ಎಕ್ಸ್‌ಚೆಂಜ್ ಆಫರ್ ಮತ್ತು ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ, ಹೆಕ್ಸಾ ಕಾರುಗಳ ಮೇಲೆ ರೂ.5 ಸಾವಿರ ಡಿಸ್ಕೌಂಟ್ ಮತ್ತು ರೂ. 15 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡುತ್ತಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more