Short News

ದೆಹಲಿಯ ರಾಮಲೀಲಾ ಮೈದಾನಕ್ಕೆ ಅಟಲ್ ಜೀ ಹೆಸರು?

ದೆಹಲಿಯ ರಾಮಲೀಲಾ ಮೈದಾನಕ್ಕೆ ಅಟಲ್ ಜೀ ಹೆಸರು?

ದೆಹಲಿಯ ಪ್ರಸಿದ್ಧ ರಾಮಲೀಲಾ ಮೈದಾನಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಈ ಪ್ರಸ್ತಾವನ್ನು ದೆಹಲಿ ಸರ್ಕಾರದ ಮುಂದಿಟ್ಟಿದೆ. ದೆಹಲಿಯ ಪ್ರಸಿದ್ಧ ಸ್ಥಳಗಳಲ್ಲಿ ರಾಮಲೀಲಾ ಮೈದಾನವೂ ಒಂದು. ಆದ್ದರಿಂದ ಈ ಮೈದಾನಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನಿಟ್ಟು ಅವರಿಗೆ ಗೌರವ ಸೂಚಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಆಗಸ್ಟ್ 16 ರಂದು ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾಗಿದ್ದರು. 93 ವರ್ಷದ ವಾಜಪೇಯಿ ಅವರು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಇರುವರೆಗೂ ದರ್ಶನ್​​​ ಗೆ ಏನೂ ಆಗಲ್ಲ: ನಟ ಶಿವಣ್ಣ

ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಇರುವರೆಗೂ ದರ್ಶನ್​​​ ಗೆ ಏನೂ ಆಗಲ್ಲ: ನಟ ಶಿವಣ್ಣ

ಕಾರು ಅಪಘಾತಕ್ಕೀಡಾಗಿ, ಮೈಸೂರಿನಲ್ಲಿ ಆಸ್ಪತ್ರೆ ಸೇರಿರುವ ನಟ ದರ್ಶನ್ ಅವರ ಆರೋಗ್ಯ ವಿಚಾರಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನಿಂದ ಆಗಮಿಸಿದ ನಟ ಶಿವಣ್ಣ ಆಸ್ಪತ್ರೆಯಲ್ಲಿ ದರ್ಶನ್ ಅವರನ್ನ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ನಾನು ದರ್ಶನ್ ಜತೆ ಮಾತಾಡಿದ್ದೇನೆ, ಆರೋಗ್ಯವಾಗಿದ್ದಾರೆ. ಯಾರೂ ಅತಂಕಪಡುವ ಅವಶ್ಯಕತೆಯಿಲ್ಲ.ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಇರುವರೆಗೂ ದರ್ಶನ್​​​ಗೆ ಏನೂ ಆಗುವುದಿಲ್ಲ ಎಂದರು. ಹಿರಿಯ ನಟ ದೇವರಾಜ್ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಮೊಬೈಲ್ ಮೂಲಕ ಅವರ ಜೊತೆ ಮಾತನಾಡಿದ್ದೇನೆ ಎಂದರು.
8 KAS ಅಧಿಕಾರಿಗಳ ವರ್ಗಾವಣೆ, ಎಸ್‌ಐ ಗಳ ವರ್ಗಾವಣೆಗೆ ತಡೆ

8 KAS ಅಧಿಕಾರಿಗಳ ವರ್ಗಾವಣೆ, ಎಸ್‌ಐ ಗಳ ವರ್ಗಾವಣೆಗೆ ತಡೆ

ಮೈತ್ರಿ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಇನ್ನೂ ಮುಗಿದಂತಿಲ್ಲ. ಇಂದು ರಾಜ್ಯ ಸರ್ಕಾರವು 8 ಕೆಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ಜೊತೆಗೆ, 141 ಸಬ್‌ ಇನ್ಸ್ಪೆಕ್ಟರ್‌ಗಳ ವರ್ಗಾವಣೆಯನ್ನೂ ತಡೆ ಹಿಡಿದಿದೆ. ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ತಕ್ಷಣದಿಂದಲೇ ಜಾರಿಗೆ ಬರಲಿದೆ. ಆದರೆ ನಿನ್ನೆಯಷ್ಟೆ ಹೊರಡಿಸಿದ್ದ 141 ಸಬ್‌ ಇನ್ಸ್ಪೆಕ್ಟರ್‌ಗಳ ವರ್ಗಾವಣೆ ಆದೇಶವನ್ನು ತಡೆ ಹಿಡಿಯಲಾಗಿದೆ. ಮೈತ್ರಿ ಸರ್ಕಾರದ ಕೆಲವು ಶಾಸಕರು ಎಸ್‌ಐ ವರ್ಗಾವಣೆಗೆ ವಿರೋಧ ಪಡಿಸಿದರು ಎಂಬ ಕಾರಣಕ್ಕೆ ವರ್ಗಾವಣೆಯನ್ನು ತಡೆಹಿಡಿಯಲಾಗಿದೆ.
10 ನಿಮಿಷ ಸೊಂಟ ಬಳುಕಿಸಿದ್ದಕ್ಕೆ ರಶ್ಮಿಕಾ ಮಂದಣ್ಣ  ಮಂದಣ್ಣ ಪಡೆದ ಸಂಭಾವನೆ ಎಷ್ಟು ಗೊತ್ತಾ?

10 ನಿಮಿಷ ಸೊಂಟ ಬಳುಕಿಸಿದ್ದಕ್ಕೆ ರಶ್ಮಿಕಾ ಮಂದಣ್ಣ ಮಂದಣ್ಣ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಟಾಲಿವುಡ್​ ನಲ್ಲಿ ಬಹುಬೇಡಿಕೆಯ ನಟಿಯಾಗಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಈಗ ಮುಟ್ಟಿದ್ದೆಲ್ಲ ಚಿನ್ನ. 'ಗೀತ ಗೋವಿಂದಂ' ನಂತರ ಬೇಡಿಕೆ ಹೆಚ್ಚಿಸಿಕೊಂಡಿರುವ ರಶ್ಮಿಕಾ ಚಿತ್ರರಂಗದಲ್ಲಿ ತಮ್ಮ ಡಿಮ್ಯಾಂಡ್​​ ಹೆಚ್ಚಾಗುತ್ತಿದ್ದಂತೆ ಸಂಭಾವನೆಯನ್ನೂ ದುಪ್ಪಟ್ಟು ಮಾಡಿಕೊಂಡಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಕೇವಲ 10 ನಿಮಿಷದ ನೃತ್ಯ ಪ್ರದರ್ಶನಕ್ಕೆ ಬರೋಬ್ಬರಿ 10 ಲಕ್ಷ ರೂ. ಸಂಭಾವನೆ ಪಡೆದು ದಿಗಿಲು ಮೂಡಿಸಿದ್ದಾರೆ. 10 ನಿಮಿಷದ ಪರ್ಫಾರ್ಮೆನ್ಸ್​ ಗೆ ಇಷ್ಟೊಂದು ಸಂಭಾವನೆ ಪಡೆಯುವ ಮೂಲಕ ತೆಲುಗು ಚಿತ್ರರಂಗದಲ್ಲಿ ಇವರಿಗಿರುವ ಬೇಡಿಕೆಯನ್ನು ಭದ್ರಪಡಿಸಿಕೊಂಡಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more