Short News

ಮುಂಬೈಗೆ ಅತಿ ಹತ್ತಿರದಲ್ಲಿರುವ ವಿಕೆಂಡ್ ಸ್ಪಾಟ್ ಲೋಣಾವಲಕ್ಕೆ ಒಮ್ಮೆ ಹೋಗಿ

ಮುಂಬೈಗೆ ಅತಿ ಹತ್ತಿರದಲ್ಲಿರುವ ವಿಕೆಂಡ್ ಸ್ಪಾಟ್ ಲೋಣಾವಲಕ್ಕೆ ಒಮ್ಮೆ ಹೋಗಿ

ಶಹರ ಮುಂಬೈ ಪ್ರವೇಶಕ್ಕೊಂದು ಸುಂದರ ಪ್ರವೇಶದ್ವಾರವಿದು. ಮಹಾರಾಷ್ಟ್ರದಲ್ಲಿರುವ ಲೋಣಾವಲ ಬೆಟ್ಟಗುಡ್ಡಗಳ ಜನಪ್ರಿಯ ಪಟ್ಟಣ. ಸಮುದ್ರಮಟ್ಟದಿಂದ ಸುಮಾರು 625ಮೀ ಎತ್ತರದಲ್ಲಿದೆ. ಲೋಣಾವಲದ ಸಮೀಪದಿಂದಲೇ ಸಹ್ಯಾದ್ರಿ ಪರ್ವತವೆಂಬ ಕಡಿದಾದ ಭಯಂಕರ ಪರ್ವತಶ್ರೇಣಿಯ ಆರಂಭ. ಇಲ್ಲಿಂದ ಕೇವಲ 38ಕಿ.ಮೀ ದೂರದಲ್ಲಿದೆ ಈ ಸಹ್ಯಾದ್ರಿ ಪರ್ವತಶ್ರೇಣಿ. ಲೋಣಾವಲವು ಪುಣೆಯಿಂದ ಸುಮಾರು 64ಕಿ.ಮೀ ದೂರದಲ್ಲಿದೆ ಮತ್ತು ಮುಂಬೈನಿಂದ 97ಕಿ.ಮೀ ದೂರದಲ್ಲಿದೆ. ಬಾಂಬೆಯ ಗವರ್ನರ್ ಆಗಿದ್ದ ಸರ್ ಎಲ್ಫಿನ್‌ಸ್ಟೋನ್‌ 1871ರಲ್ಲಿ ಲೋಣಾವಲವನ್ನು ಕಂಡುಹಿಡಿದರು. ಮುಂಬೈ ಮತ್ತು ಪುಣೆಗೆ ಸಂಪರ್ಕ ಕಲ್ಪಿಸುವ ರೈಲುಗಳಿಗೆ ಲೋಣಾವಲ ಪ್ರಮುಖ ನಿಲ್ದಾಣ.
ನಾಪತ್ತೆಯಾದ ವ್ಯಕ್ತಿ  ತಮಿಳುನಾಡಿನಲ್ಲಿ ಕೊಲೆಯಾಗಿ ಪತ್ತೆ: ಪತ್ನಿಯ ಕೈವಾಡವಿರುವ ಶಂಕೆ

ನಾಪತ್ತೆಯಾದ ವ್ಯಕ್ತಿ ತಮಿಳುನಾಡಿನಲ್ಲಿ ಕೊಲೆಯಾಗಿ ಪತ್ತೆ: ಪತ್ನಿಯ ಕೈವಾಡವಿರುವ ಶಂಕೆ

ಬಜ್ಪೆ ಠಾಣೆಯಲ್ಲಿ ಇತ್ತೀಚೆಗೆ ಗಂಜಿಮಠ ನಿವಾಸಿ ಮಹಮ್ಮದ್ ಸಮೀರ್ ಪತ್ನಿ ಫಿರ್ದೌಸ್ ಮತ್ತು ಮಗುವಿನ ಜೊತೆ ಬೆಂಗಳೂರಿಗೆ ತೆರಳಿದ್ದ ವೇಳೆ ನಾಪತ್ತೆ ಆಗಿದ್ದಾನೆಂದು ಸಮೀರ್ ಅವರ ತಂದೆ ಬಜ್ಪೆ ಠಾಣೆ ಯಲ್ಲಿ ದೂರು ನೀಡಿದ್ದರು.ಈ ಪ್ರಕರಣದ ಜಾಡು ಹಿಡಿದು ಹೋದ ಪೊಲೀಸರಿಗೆ ಸಮೀರ್ ತಮಿಳುನಾಡಿನ ಕೃಷ್ಣಗಿರಿ ಎಂಬಲ್ಲಿ ಕೊಲೆಯಾಗಿರುವುದು ಪತ್ತೆಯಾಗಿದೆ. ಇದೀಗ ಈ ಕೊಲೆಗೂ ಪತ್ನಿಗೂ ಏನಾದರೂ ಸಂಭವಿದೆಯಾ ಎಂದು ಪೊಲೀಸರಿಗೆ ಶಂಕೆ ವ್ಯಕ್ತವಾಗುತ್ತಿದೆ. ಯಾಕೆಂದರೆ ಬೆಂಗಳೂರಿಗೆ ತೆರಳಿದ್ದ ಪತ್ನಿ ಫಿರ್ದೌಸ್ ಸೆ.19ರಂದು ಕಾಪುವಿನ ತವರು ಮನೆಗೆ ಆಗಮಿಸಿದ್ದು,ಮರುದಿನ 3ತಿಂಗಳ ಮಗುವನ್ನು ಮನೆಯಲ್ಲಿ ಬಿಟ್ಟು ನಾಪತ್ತೆಯಾಗಿದ್ದಾಳೆ.
ನನ್ನನ್ನು ಹರಕೆಯ ಕುರಿಯನ್ನಾಗಿ ಮಾಡಲಾಯಿತು: ಮ್ಯಾಥ್ಯೂಸ್ ಆರೋಪ

ನನ್ನನ್ನು ಹರಕೆಯ ಕುರಿಯನ್ನಾಗಿ ಮಾಡಲಾಯಿತು: ಮ್ಯಾಥ್ಯೂಸ್ ಆರೋಪ

ಏಷ್ಯಾ ಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಂತಹ ದುರ್ಬಲ ತಂಡಗಳ ವಿರುದ್ಧ ದಯನೀಯ ಸೋಲು ಕಂಡು ಲೀಗ್ ಹಂತದಲ್ಲಿಯೇ ಹೊರಬಿದ್ದ ಕಾರಣಕ್ಕೆ ಶ್ರೀಲಂಕಾ ತಂಡದ ನಾಯಕ ಏಂಜೆಲೊ ಮ್ಯಾಥ್ಯೂಸ್ ಅವರ ತಲೆದಂಡ ನೀಡಲಾಗಿದೆ. ಮ್ಯಾಥ್ಯೂಸ್ ರನ್ನು ವಜಾಗೊಳಿಸಿ ದಿನೇಶ್ ಚಂಡಿಮಾಲ್ ಅವರಿಗೆ ಏಕದಿನ ಕ್ರಿಕೆಟ್‌ನ ನಾಯಕತ್ವವನ್ನೂ ನೀಡಿದೆ. 2019ರ ವಿಶ್ವಕಪ್ ಕ್ರಿಕೆಟ್‌ಗೆ ಕೆಲವೇ ಪಂದ್ಯಗಳು ಬಾಕಿ ಇರುವಾಗಲೇ ತಂಡದ ನಾಯಕತ್ವದ ಜವಾಬ್ದಾರಿಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯತ್ತ ಹರಿಹಾಯ್ದಿರುವ ಮ್ಯಾಥ್ಯೂಸ್, ತಮ್ಮನ್ನು ಇಲ್ಲಿ ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ ಕರಾವಳಿ ಜನರಿಗೆ ಬಿಯರ್ ಕೊಡಲ್ಲ ಅಂತಿದೆ ಅಬಕಾರಿ ಇಲಾಖೆ!

ಕರ್ನಾಟಕ ಕರಾವಳಿ ಜನರಿಗೆ ಬಿಯರ್ ಕೊಡಲ್ಲ ಅಂತಿದೆ ಅಬಕಾರಿ ಇಲಾಖೆ!

ಕರಾವಳಿ ಜನರಿಗೆ ಬಿಯರ್ ಕೊಡುವುದಿಲ್ಲ ದೇಸಿ ಮದ್ಯವನ್ನೇ ಮಾರಾಟ ಮಾಡಿ ಎಂದು ಅಬಕಾರಿ ಇಲಾಖೆ ಹೇಳಿದೆ. ದಕ್ಷಿಣ ಕನ್ನಡ,ಉಡುಪಿ ಸೇರಿದಂತೆ ಕರಾವಳಿಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳೇ ಬಿಯರ್‌ ನ ಅಭಾವ ಸೃಷ್ಟಿಸಿ, ದುಬಾರಿ ಬೆಲೆಯ ಮದ್ಯ ಸೇವನೆಗೆ ಪ್ರಚೋದಿಸುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬಂದಿದೆ. ಹೆಚ್ಚಿನ ಅಬಕಾರಿ ಆದಾಯಗಳಿಸುವ ಉದ್ದೇಶದಿಂದ ದೇಶಿ ಮದ್ಯ ಮಾರಾಟಕ್ಕೆ ಸರ್ಕಾರವೇ ಟಾರ್ಗೆಟ ನಿಗದಿ ಮಾಡುವ ಮೂಲಕ ಕರಾವಳಿಯಲ್ಲಿ ಬಿಯರ್ ಗೆ ಬರ ಸೃಷ್ಟಿಯಾಗಿದೆ.100ಬಾಕ್ಸ್ ಮದ್ಯವನ್ನು ಖರೀದಿ ಮಾಡಿದರೆ 40ರಿಂದ 50ಬಾಕ್ಸ್ ಬಿಯರ್ ನೀಡುತ್ತಿದ್ದಾರೆ, ಮದ್ಯದ ದರ ಹೆಚ್ಚಳದಿಂದ ಜನರು ಬಿಯರ್‌ನ್ನೇ ಇಷ್ಟಪಡುತ್ತಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more