Short News

ಮುಂಬೈ ದಾಳಿ ಬಗ್ಗೆ ಮೊದಲೇ ಗೊತ್ತಿತ್ತು ಎಂದ ವ್ಯಕ್ತಿಗೆ 5 ಸಾವಿರ ರೂ ದಂಡ ವಿಧಿಸಿದ ಹೈಕೋರ್ಟ್

ಮುಂಬೈ ದಾಳಿ ಬಗ್ಗೆ ಮೊದಲೇ ಗೊತ್ತಿತ್ತು ಎಂದ ವ್ಯಕ್ತಿಗೆ 5 ಸಾವಿರ ರೂ ದಂಡ ವಿಧಿಸಿದ ಹೈಕೋರ್ಟ್

ದೇಶವನ್ನೇ ತಲ್ಲಣಗೊಳಿಸಿದ್ದ ಮುಂಬೈ ಭಯೋತ್ಪಾದಕರ ದಾಳಿ ವಿಚಾರ ತನಗೇ ಮೊದಲೇ ಗೊತ್ತಿತ್ತು ತಾನು ಹೇಳಿದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಹೈಕೋರ್ಟ್‌ ಮೊರೆ ಹೋಗಿದ್ದ ಕಾಂಗ್ರೆಸ್‌ ಮುಖಂಡ ಹರಿಶ್ಚಂದ್ರಗೌಡಗೆ ಭಾರಿ ಮುಖಭಂಗ ಉಂಟಾಗಿದೆ. 2008ರಲ್ಲಿ ಮುಂಬೈನಲ್ಲಿ ತಾಜ್‌ ಹೋಟೆಲ್‌ ಮೇಲೆ ನಡೆದಿದ್ದ ಭಯೋತ್ಪಾದಕರ ದಾಳಿ ವಿಚಾರ ತನಗೆ ಮೊದಲೇ ತಿಳಿದಿತ್ತು, ಕುರಿತಂತೆ ಮಹಾರಾಷ್ಟ್ರ ಗೃಹ ಇಲಾಖೆಗೆ ಮೊದಲೇ ತಿಳಿಸಿದ್ದೆ, ಆದರೂ ಇದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲವಾದರು. ಇದರ ವಿರುದ್ಧ ತನಿಖೆ ವಿಧಿಸಬೇಕು ಎಂದು ಕೋರಿ ಹರಿಶ್ಚಂದ್ರಗೌಡ ಹೈಕೋರ್ಟ್‌ನಲ್ಲಿ ಪಿಎಎಲ್ ಸಲ್ಲಿಸಿದ್ದರು.
ಐಸಿಸ್ ಸೇರಿಕೊಂಡಿದ್ದ ಕೇರಳ ಮೂಲದ ವ್ಯಕ್ತಿ ಭಾರತಕ್ಕೆ ಗಡಿಪಾರು

ಐಸಿಸ್ ಸೇರಿಕೊಂಡಿದ್ದ ಕೇರಳ ಮೂಲದ ವ್ಯಕ್ತಿ ಭಾರತಕ್ಕೆ ಗಡಿಪಾರು

ಇಸ್ಲಾಮಿಕ್ ಸ್ಟೇಟ್ ಉಗ್ರರ ಸಂಘಟನೆ ಸೇರಿಕೊಂಡಿದ್ದ ಕೇರಳದ ನಿವಾಸಿಯನ್ನು ಅಫ್ಘಾನಿಸ್ತಾನದ ಕಾಬೂಲ್‌ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ. ಕೇರಳದ ವಯನಾಡಿನ ನಿವಾಸಿಯಾಗಿರುವ 26 ವರ್ಷದ ನಶೀದುಲ್ ಹಮ್ಜಾಫರ್‌ನನ್ನು ಅಫ್ಘಾನಿಸ್ತಾನದ ಭದ್ರತಾ ಸಂಸ್ಥೆಗಳು ಐಸಿಸ್ ಸೇರುವ ಸಲುವಾಗಿ ದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕೆ ಕಳೆದ ವರ್ಷ ಬಂಧಿಸಿದ್ದವು. ಕಾಸರಗೋಡು ಜಿಲ್ಲೆಯ 14 ಆರೋಪಿಗಳು ಭಾರತ ಮತ್ತು ತಾವು ಕೆಲಸ ಮಾಡುತ್ತಿದ್ದ ಮಧ್ಯಪ್ರಾಚ್ಯದಿಂದ 2016ರ ಮೇ ತಿಂಗಳಿನಿಂದ ಜುಲೈ ಆರಂಭದ ವಾರದಲ್ಲಿ ಅಫ್ಘಾನಿಸ್ತಾನಕ್ಕೆ ತೆರಳಿ ಐಸಿಸ್ ಸೇರಿಕೊಂಡಿದ್ದರು.
ಅಮೆರಿಕಕ್ಕೆ ತೆರಳುವವರಿಗೆ ವ್ಹಾವ್​ ಕಡೆಯಿಂದ ಭರ್ಜರಿ ಆಫರ್

ಅಮೆರಿಕಕ್ಕೆ ತೆರಳುವವರಿಗೆ ವ್ಹಾವ್​ ಕಡೆಯಿಂದ ಭರ್ಜರಿ ಆಫರ್

ಐಸ್​​ಲ್ಯಾಂಡ್​ ವಿಮಾನಯಾನ ಸಂಸ್ಥೆ ವ್ಹಾವ್​​​... ವ್ಹಾವ್ಹಾ ಎನ್ನುವ ಆಫರ್​ ಬಿಡುಗಡೆ ಮಾಡಿದೆ. ಕೇವಲ 13499 ರೂ.ಗೆ ದೆಹಲಿಯಿಂದ ಅಮೆರಿಕಕ್ಕೆ ಸೇವೆ ಒದಗಿಸುವುದಾಗಿ ಹೇಳಿದೆ. ಅಮೆರಿಕ ಅಷ್ಟೇ ಅಲ್ಲ ಕೆನಡಾದ ವಿವಿಧ ಭಾಗಗಳಿಗೂ ಇಷ್ಟೇ ಹಣದಲ್ಲಿ ಸೇವೆ ಒದಗಿಸುವುದಾಗಿ ಘೋಷಿಸಿದೆ. ಈ ಆಫರ್​​ ಡಿಸೆಂಬರ್​ 2018 ರಿಂದ ಮಾರ್ಚ್​ 2019 ರ ಅವಧಿಯಲ್ಲಿ ಅಪ್ಲೈ ಆಗಲಿದೆ. ಇದೇ ಡಿಸೆಂಬರ್​ 7 ರಂದು ದೆಹಲಿಯಿಂದ ವಿಮಾನಯಾನ ಆರಂಭಿಸಲಾಗುವುದು ಎಂದು ವ್ಹಾವ್​ ವಿಮಾನಯಾನ ಸಂಸ್ಥೆ ಹೇಳಿದೆ. ವಾರದಲ್ಲಿ ಮೂರು ದಿನ ದೆಹಲಿಯಿಂದ ಅಮೆರಿಕಕ್ಕೆ ವಿಮಾನ ಹಾರಾಟ ನಡೆಸಲಿದೆಯಂತೆ.
ಪಾಕ್ ಆಟಗಾರನ ಅವತಾರ ಕಂಡು ಸಿಟ್ಟಾದ ಸುನಿಲ್ ಗವಾಸ್ಕರ್‌

ಪಾಕ್ ಆಟಗಾರನ ಅವತಾರ ಕಂಡು ಸಿಟ್ಟಾದ ಸುನಿಲ್ ಗವಾಸ್ಕರ್‌

ಹಿರಿಯ ಕ್ರಿಕೆಟ್‌ ಆಟಗಾರ, ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ ಅವರದ್ದು ಸದಾ ನೇರ ನುಡಿ, ಕ್ರಿಕೆಟ್ ವಿಷಯ ಬಂದರಂತೂ ಬಹು ನಿಷ್ಠುರವಾದಿ. ಅವರ ನಿಷ್ಠುರವಾದಿತನಕ್ಕೆ ನಿನ್ನೆಯೊಂದು ಘಟನೆ ಸಾಕ್ಷಿಯಾಗಿದೆ. ಪಾಕಿಸ್ತಾನದ ಆಟಗಾರ ಫಕ್ಹಾರ್ ಜಮಾನ್ ತಮ್ಮ ಟೋಪಿಯನ್ನು ಹಿಂದೆ ತಿರುಗಿಸಿ ಸ್ಟೈಲ್‌ ಆಗಿ Rapperನಂತೆ ತೊಟ್ಟುಕೊಂಡು ಬೌಲಿಂಗ್ ಮಾಡುತ್ತಿದ್ದರು. ಇದು ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿದ್ದ ಸುನಿಲ್ ಗವಾಸ್ಕರ್ ಅವರನ್ನು ಕೆರಳಿಸಿತು. 'ಆತ ತೊಟ್ಟಿರುವುದು ರಾಷ್ಟ್ರದ ಚಿಹ್ನೆ ಇರುವ ಟೋಪಿ ಎಂದು ಹೇಳಿ' ನಾಯಕನಾದರೂ ಅವನಿಗೆ ಬುದ್ದಿ ಹೇಳಬೇಕು' ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more