Short News

10 ದಿನದೊಳಗೆ ಸ್ವಿಸ್ ನ ಎಚ್ ಎಸ್ ಬಿಸಿ ಖಾತೆ ಮಾಹಿತಿ ಭಾರತಕ್ಕೆ

10 ದಿನದೊಳಗೆ ಸ್ವಿಸ್ ನ ಎಚ್ ಎಸ್ ಬಿಸಿ ಖಾತೆ ಮಾಹಿತಿ ಭಾರತಕ್ಕೆ

ಸ್ವಿಟ್ಜರ್ ಲೆಂಡ್ ನ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ತನ್ನ ನಾಗರಿಕರ ಎಚ್ ಎಸ್ ಬಿಸಿ ಬ್ಯಾಂಕ್ ಖಾತೆಯ ದತ್ತಾಂಶಗಳನ್ನು ಭಾರತ ಸರಕಾರದ ಜತೆ ಹಂಚಿಕೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಉತ್ತರ ನೀಡಿದ ಅವರು, ಕಪ್ಪು ಹಣದ ವಾಪಸಿಗೆ ಗಂಭೀರ ಪ್ರಯತ್ನಗಳು ಮಾಡುತ್ತಿದ್ದೇವೆ. ಎಷ್ಟು ಮೊತ್ತ ಎಂಬ ಬಗ್ಗೆ ಅಧಿಕೃತ ಅಂದಾಜಿಲ್ಲ ಎಂದರು. ಲೆಕ್ಕಕ್ಕೆ ನೀಡದೆ ಎಚ್ ಎಸ್ ಬಿಸಿ ಖಾತೆಯಲ್ಲಿ ಇಟ್ಟಿರುವ 8,448 ಕೋಟಿ ರುಪಾಯಿಗೆ 5,447 ಕೋಟಿ ತೆರಿಗೆಗೆ ಬೇಡಿಕೆ ಬಂದಿದೆ ಎಂದರು.
ಸುದೀಪ್ ಮುಂದೆ ದಿವಾಕರ್ ಘರ್ಜನೆ: ಏನಿದು ಟ್ವಿಸ್ಟ್.!

ಸುದೀಪ್ ಮುಂದೆ ದಿವಾಕರ್ ಘರ್ಜನೆ: ಏನಿದು ಟ್ವಿಸ್ಟ್.!

'ಬಿಗ್ ಬಾಸ್' ಖ್ಯಾತಿಯ ದಿವಾಕರ್ 'ರೇಸ್' ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಮಿಂಚುತ್ತಿದ್ದು, ಈಗಾಗಲೇ ಮೇಕಿಂಗ್ ನಿಂದ ಈ ಸಿನಿಮಾ ಹೆಚ್ಚು ಗಮನ ಸೆಳೆಯುತ್ತಿದೆ. ಇದೀಗ, ದಿವಾಕರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದೆ ಬಿಗ್ ಬಾಸ್ ದಿವಾಕರ್ ಘರ್ಜಿಸಿದ್ದಾರೆ. ಥೇಟ್ ಸುದೀಪ್ ಅವರಂತೆ, ಅವರದ್ದೇ ಸ್ಟೈಲ್ ನಲ್ಲಿ ಎಂಟ್ರಿ ಕೊಟ್ಟಿರುವ ದಿವಾಕರ್ ಕುತೂಹಲ ಮೂಡಿಸಿದ್ದಾರೆ. ಸುದೀಪ್ ಎದುರಲ್ಲಿ ಅಂದ್ರೆ, ನೇರವಾಗಿ ಅಲ್ಲ. ಕಿಚ್ಚನ ಪೋಸ್ಟರ್ ಮುಂದೆ ದಿವಾಕರ್ ಮಿಂಚಿದ್ದಾರೆ. 'ರೇಸ್' ಚಿತ್ರದ ಫೈಟ್ ವೊಂದರಲ್ಲಿ ಸುದೀಪ್ ಪೋಸ್ಟರ್, ಕಟೌಟ್ ಗಳನ್ನ ಬಳಸಿಕೊಂಡು ಅವರದ್ದೇ ಸ್ಟೈಲ್ ನಲ್ಲಿ ಫೈಟ್ ಮಾಡಿದ್ದಾರಂತೆ.
ಮಹದಾಯಿ ತೀರ್ಪು: ಗೋವಾದಿಂದಲೂ ಮೇಲ್ಮನವಿ ಸಾಧ್ಯತೆ

ಮಹದಾಯಿ ತೀರ್ಪು: ಗೋವಾದಿಂದಲೂ ಮೇಲ್ಮನವಿ ಸಾಧ್ಯತೆ

ಮೊನ್ನೆಯಷ್ಟೆ ಪ್ರಕಟವಾಗಿದ್ದ ಮಹದಾಯಿ ಕುರಿತ ನ್ಯಾಯಾಧಿಕರಣದ ಐತೀರ್ಪಿನ ಬಗ್ಗೆ ಆರಂಭದಲ್ಲಿ ತೃಪ್ತಿ ವ್ಯಕ್ತಪಡಿಸಿದ್ದ ಗೋವಾ ಸರ್ಕಾರ ಈಗ ಅತೃಪ್ತಿ ವ್ಯಕ್ತಪಡಿಸುತ್ತಿದೆ. ಮಹದಾಯಿ ನ್ಯಾಯಾಧಿಕರಣ ತೀರ್ಪಿನ ಪ್ರಕಾರ ಗೋವಾಕ್ಕೆ 24 ಟಿಎಂಸಿ ಅಡಿ ನೀರು ದೊರೆಯಲಿದೆ. ಕರ್ನಾಟಕದ ಪಾಲಿಗೆ 13.42 ಟಿಎಂಸಿ ಅಡಿ ನೀರು ದೊರಕಿದ್ದರೆ ಮಹರಾಷ್ಟ್ರ ಪಾಲಿಗೆ 1.30 ಟಿಎಂಸಿ ಅಡಿ ನೀರು ದೊರೆತಿದೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ನ್ಯಾಯಾಧಿಕರಣ ತೀರ್ಪಿನ ಬಗ್ಗೆ ವಿರೋಧ ವ್ಯಕ್ತಪಡಿಸಿ ಸರ್ಕಾರದ ಮೇಲೆ ಒತ್ತಡ ಹಾಕಿರುವ ಕಾರಣ ಗೋವಾ ಸರ್ಕಾರವು ನ್ಯಾಯಾಧಿಕರಣ ತೀರ್ಪು ಪ್ರಶ್ನಿಸಿ ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದೆ.
ಡಿ.ಕೆ.ಶಿವಕುಮಾರ್ ವಿರುದ್ಧದ ಐಟಿ ತನಿಖೆಗೆ ಇದ್ದ ತಡೆ ತೆರವು

ಡಿ.ಕೆ.ಶಿವಕುಮಾರ್ ವಿರುದ್ಧದ ಐಟಿ ತನಿಖೆಗೆ ಇದ್ದ ತಡೆ ತೆರವು

ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧದ ತನಿಖೆಗೆ ಇದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಚಿವರ ವಿರುದ್ಧ ತನಿಖೆ ನಡೆಸುತ್ತಿದೆ. ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ಪೀಠ ಗುರುವಾರ ತನಿಖೆಗೆ ಇದ್ದ ತಡೆಯಾಜ್ಞೆಯನ್ನು ತೆರವು ಮಾಡಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿಯಲ್ಲಿ ವಶಪಡಿಸಿಕೊಂಡ 8.60 ಕೋಟಿ ಲೆಕ್ಕ ಕೊಡದ ಹಣಕ್ಕೆ ಸಂಬಂಧಿಸಂತೆ ಸಚಿವರ ವಿರುದ್ಧ ತನಿಖೆ ಮಾಡುತ್ತಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more