Short News

ಹಾರಾಟಕ್ಕೆ ಅಣಿಯಾಗಿದೆ ಭಾರತದ ಮೊದಲ ಜೈವಿಕ ಇಂಧನ ವಿಮಾನ

ಹಾರಾಟಕ್ಕೆ ಅಣಿಯಾಗಿದೆ ಭಾರತದ ಮೊದಲ ಜೈವಿಕ ಇಂಧನ ವಿಮಾನ

ದೇಶದ ಮೊದಲ ಜೈವಿಕ ಇಂಧನ ಚಾಲಿತ ವಿಮಾನವು ಸೋಮವಾರ ಹಾರಾಟ ನಡೆಸುವ ನಿರೀಕ್ಷೆಯಿದೆ. ಈ ಪರ್ಯಾಯ ಇಂಧನವನ್ನು ಬಳಸಿದ ಸ್ಪೈಸ್‌ಜೆಟ್ ಕ್ಯೂ-400 ವಿಮಾನವು ಡೆಹರಾಡೂನ್‌ನಿಂದ ದೆಹಲಿಗೆ ಹಾರಾಟ ನಡೆಸಲಿದೆ. ಅಮೆರಿಕ ಮತ್ತು ಆಸ್ಟ್ರೇಲಿಯಾಗಳಂತಹ ಕೆಲವು ಮುಂದುವರಿದ ದೇಶಗಳು ಈಗಾಗಲೇ ಜೈವಿಕ ಇಂಧನ ಬಳಸಿದ ವಾಣಿಜ್ಯ ವಿಮಾನಗಳ ಹಾರಾಟಗಳ ಯಶಸ್ವಿ ಪ್ರಯೋಗ ನಡೆಸಿವೆ. ಇಂತಹ ಪ್ರಯತ್ನ ನಡೆಸುತ್ತಿರುವ ಅಭಿವೃದ್ಧಿಶೀಲ ದೇಶಗಳಲ್ಲಿ ಭಾರತವೂ ಒಂದಾಗಿದೆ. ಸ್ಪೈಸ್‌ ಜೆಟ್‌ನ ವಿಮಾನವು ಜೈವಿಕ ಇಂಧನ ಬಳಸಿ ಡೆಹರಾಡೂನ್ ನಗರದ ಮೇಲೆ ಹತ್ತು ನಿಮಿಷ ಹಾರಾಟದ ಪರೀಕ್ಷೆ ನಡೆಸಿ ನಿಲ್ದಾಣಕ್ಕೆ ಮರಳಲಿದೆ.
ಕೇಂದ್ರ ಸರ್ಕಾರಕ್ಕೆ ರಾಫೆಲ್ ಒಪ್ಪಂದದ ಕುರಿತು ಎಚ್ಚರಿಕೆ ನೀಡಿದ ಸ್ವಾಮಿ

ಕೇಂದ್ರ ಸರ್ಕಾರಕ್ಕೆ ರಾಫೆಲ್ ಒಪ್ಪಂದದ ಕುರಿತು ಎಚ್ಚರಿಕೆ ನೀಡಿದ ಸ್ವಾಮಿ

ಬಿಜೆಪಿ ಸಂಸದ ಸುಬ್ರಹ್ಮಣ್ಯಂ ಸ್ವಾಮಿ ಅವರು ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಫ್ರಾನ್ಸ್-ಭಾರತದ ನಡುವೆ ನಡೆದಿರುವ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ನ ಮಾಜಿ ಅಧ್ಯಕ್ಷ ಹೋಲಾಂಡ್ ನೀಡಿರುವ ಹೇಳಿಕೆಗಳು ಗಂಭೀರವಾಗಿದೆ ಎಂದಿದ್ದಾರೆ. ಟ್ವೀಟ್ ಮಾಡಿರುವ ಸ್ವಾಮಿ, ಇದನ್ನು ನಿಖರವಾಗಿ ವರದಿ ಮಾಡಿರುವುದೇ ಆದರೆ ಗಂಭೀರ ಸ್ವರೂಪದ ಹೇಳಿಕೆಗಳಿವು ಎಂದು ಹೇಳಿದ್ದಾರೆ. ಮೀಡಿಯಾಪಾರ್ಟ್ ಗೆ ಹೋಲಾಂಡ್ ನೀಡಿದ ಸಂದರ್ಶನದಲ್ಲಿ ಪಾಲುದಾರನಾಗಿ ರಿಲಯನ್ಸ್ ಅನ್ನು ಆಯ್ಕೆ ಮಾಡಿದವರು ಯಾರು? ಎಂಬ ಪ್ರಶ್ನೆಗೆ ಭಾರತ ಎಂದಿದ್ದಾರೆ.
ಬಿಜೆಪಿ ಕಿಂಗ್‌ಪಿನ್ ಆರೋಪ ಹೊತ್ತಿರುವ ಉದಯ್‌ಗೌಡ ಒಡೆತನದ ಕ್ಲಬ್ ಬಂದ್

ಬಿಜೆಪಿ ಕಿಂಗ್‌ಪಿನ್ ಆರೋಪ ಹೊತ್ತಿರುವ ಉದಯ್‌ಗೌಡ ಒಡೆತನದ ಕ್ಲಬ್ ಬಂದ್

ಬಿಜೆಪಿಯ ಕಿಂಗ್ ಪಿನ್ ಆರೋಪ ಹೊತ್ತಿರುವ ಉದಯ್‌ಗೌಡ ಅವರಿಗೆ ಸೇರಿದ ಕ್ಲಬ್ ಒಂದರ ಮೇಲೆ ಶುಕ್ರವಾರ ಪೊಲೀಸರು ದಾಳಿ ನಡೆಸಿದ್ದು, ಬಳಿಕ ಬೀಗ ಹಾಕಲಾಗಿದೆ. ಆಪರೇಷನ್ ಕಮಲದ ಕಿಂಗ್ ಪಿನ್ ಎಂಬ ಆರೋಪವನ್ನು ಹೊತ್ತಿರುವ ಉದಯ್‌ಗೌಡ ಕಾನೂನು ಬಾಹಿರವಾಗಿ ಕ್ಲಬ್ ನಡೆಸುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಕ್ಲಬ್ ಮುಚ್ಚಲಾಗಿದೆ. ನಗರದ ಎಂಜಿ ರಸ್ತೆಯಲ್ಲಿರುವ ಕ್ಲಬ್ ಮೇಲೆ ದಾಳಿ ಕೇಂದ್ರ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕಾನೂನು ಬಾಹಿರವಾಗಿ ಕ್ಲಬ್ ನಡೆಸುತ್ತಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕ್ಲಬ್ ಗೆ ಬೀಗ ಹಾಕಲಾಗಿದೆ.
ಭಾರತ-ಪಾಕ್ ಮಾತುಕತೆ ರದ್ದು, ಪಾಕ್ ತೀವ್ರ ಅಸಮಾಧಾನ

ಭಾರತ-ಪಾಕ್ ಮಾತುಕತೆ ರದ್ದು, ಪಾಕ್ ತೀವ್ರ ಅಸಮಾಧಾನ

ಭಾರತ-ಪಾಕ್ ವಿದೇಶಾಂಗ ಸಚಿವರ ದ್ವಿಪಕ್ಷೀಯ ಮಾತುಕತೆಯನ್ನು ಭಾರತ ರದ್ದುಗೊಳಿಸಿದ್ದು, ಈ ಕುರಿತು ಪ್ರತಿಕ್ರಯಿಸಿರುವ ಪಾಕಿಸ್ತಾನ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಾರತ ಮತ್ತೊಂದು ಅವಕಾಶವನ್ನು ಕೈಚೆಲ್ಲಿದೆ. ಮಾತುಕತೆ ರದ್ದುಗೊಳಿಸುವುದಕ್ಕೆ ಭಾರತ ನೀಡಿರುವ ಕಾರಣಗಳು ಸಮರ್ಪಕವಾಗಿಲ್ಲ. ಬಿಎಸ್ ಎಫ್ ಯೋಧರ ಹತ್ಯೆ ಹಿಂದೆ ನಮ್ಮ ಕೈವಾಡವೇನು ಇಲ್ಲ ಎಂದಿದೆ. ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪಾಕ್ ಬೆಂಬಲಿತ ಉಗ್ರರ ಸಮಸ್ಯೆ ಉಲ್ಬಣವಾಗುತ್ತಿದೆ. ಭಾರತೀಯ ಪೊಲೀಸರು ಮತ್ತು ಸೈನಿಕರನ್ನು ಉಗ್ರರು ಅಪಹರಿಸಿ ಹತ್ಯೆಗೈಯುತ್ತಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more