Short News

ಜಯಲಲಿತಾ 'ಥ್ಯಾಂಕ್ಸ್' ಹೇಳಿ, ಕೈಬೀಸಿದ್ದರು: ಏಮ್ಸ್

ಜಯಲಲಿತಾ 'ಥ್ಯಾಂಕ್ಸ್' ಹೇಳಿ, ಕೈಬೀಸಿದ್ದರು: ಏಮ್ಸ್

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಆರೋಗ್ಯ ತಪಾಸಣೆ, ಸಾವಿನ ಗುರಿತಾದ ತನಿಖೆ ನಡೆಸಿರುವ ಆಯೋಗವು ತನ್ನ ವರದಿಯನ್ನು ನೀಡಿದೆ. 2016ರಲ್ಲಿ 9 ಬಾರಿ ಏಮ್ಸ್ ನ ಮೂರು ತಜ್ಞ ವೈದ್ಯರ ತಂಡವು, ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿತ್ತು. ಈ ವೇಳೆಯಲ್ಲಿ ಜಯಲಲಿತಾ ಅವರು ಪ್ರತಿಕ್ರಿಯಿಸುವ ಸ್ಥಿತಿಯಲ್ಲಿದ್ದರು ಎಂದಿದ್ದಾರೆ. ಜಯಲಲಿತಾ ಅವರ ಸಾವಿನ ಕುರಿತಾದ ಊಹಾಪೋಹಗಳ ಬಗ್ಗೆ ತನಿಖೆ ನಡೆಸಿರುವ ಜಸ್ಟೀಸ್ ಅರ್ಮುಗಸ್ವಾಮಿ ಆಯೋಗವು ತನ್ನ ವರದಿಯನ್ನು ನೀಡಿದೆ. ಡಿಸೆಂಬರ್ 03,2016ರಂದು ಜಯಲಲಿತಾ ಅವರ ಬಳಿ ಸುಮಾರು 20 ನಿಮಿಷಗಳ ಕುಳಿತ್ತಿದ್ದೆವು. ಈ ಸಂದರ್ಭದಲ್ಲಿ ಅವರು ನಮಗೆ ಥ್ಯಾಂಕ್ಸ್ ಹೇಳಿ, ಕೈ ಬೀಸಿದರು.
ಜನಸೇವೆಗೆ ಸಚಿವಗಿರಿ ಅನಿವಾರ್ಯ ಅಲ್ಲ: ಸತೀಶ್ ಜಾರಕಿಹೊಳಿ

ಜನಸೇವೆಗೆ ಸಚಿವಗಿರಿ ಅನಿವಾರ್ಯ ಅಲ್ಲ: ಸತೀಶ್ ಜಾರಕಿಹೊಳಿ

ಕಳೆದ 15 ದಿನಗಳಿಂದ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಂಡೆದಿದ್ದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸಂಪೂರ್ಣ ತಣ್ಣಗಾಗಿದ್ದು ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಹೇಳುವ ಮೂಲಕ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಸಚಿವರಾದವರು ಮಾತ್ರ ಕೆಲಸ ಮಾಡಬೇಕೆಂದೇನೂ ಇಲ್ಲ, ಪಕ್ಷಕ್ಕಾಗಿ ಶಾಸಕರಾಗಿಯೂ ಕೆಲಸ ಮಾಡಬಹುದು. ಹಿಂದೆ ಮಂತ್ರಿಗಿರಿ ಹುದ್ದೆಯಿಂದ ನನ್ನನ್ನು ಕೈಬಿಟ್ಟ ಮೇಲೆ ಮೂರೇ ತಿಂಗಳಲ್ಲಿ ಮತ್ತೆ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ಎಂದಿದ್ದಾರೆ.
ಸಮ್ಮಿಶ್ರ ಸರ್ಕಾರ ಬೀಳಿಸಲ್ಲ, ಬಿದ್ರೆ ಸುಮ್ನೆ ಕೂರಲ್ಲ-ಸರ್ಕಾರ ರಚಿಸುತ್ತೇವೆ

ಸಮ್ಮಿಶ್ರ ಸರ್ಕಾರ ಬೀಳಿಸಲ್ಲ, ಬಿದ್ರೆ ಸುಮ್ನೆ ಕೂರಲ್ಲ-ಸರ್ಕಾರ ರಚಿಸುತ್ತೇವೆ

ರಾಜ್ಯ ಸಮ್ಮಿಶ್ರ ಸರ್ಕಾರ ತಾನಾಗಿಯೇ ಬಿದ್ದರೆ ಮಾತ್ರ ಬಿಜೆಪಿ ಸರ್ಕಾರ ರಚನೆ ಮಾಡುತ್ತದೆ, ನಾವು ಯಾವುದೇ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿಲ್ಲ ಎಂದು ಬಿಜೆಪಿ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬೀದಿ ಬೀದಿಗಳಲ್ಲಿ ಕಚ್ಚಾಡಿಕೊಂಡು ಓಡಾಡುತ್ತಿದ್ದಾರೆ, ಕೆಲವರು ಗುಂಪು ಕಟ್ಟಿಕೊಂಡು ದೆಹಲಿಗೆ ಓಡಿ ಹೋಗಿದ್ದಾರೆ ಹೀಗಾಗಿ ನಾವು ಸರ್ಕಾರ ಬೀಳಿಸುವ ಅಗತ್ಯವಿಲ್ಲ ಅವರೇ ಕಚ್ಚಾಡಿಕೊಂಡು ಸರ್ಕಾರ ಕೆಡವಿದರೆ ಮಾತ್ರ ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಹೊಸ ಗ್ರಾಹಕರಿಗೆ ಏರ್‌ಟೆಲ್‌ ನೀಡಿದೆ ಬಂಪರ್..! ಜಿಯೋಗೆ ಬಿಗ್‌ ಶಾಕ್‌..!

ಹೊಸ ಗ್ರಾಹಕರಿಗೆ ಏರ್‌ಟೆಲ್‌ ನೀಡಿದೆ ಬಂಪರ್..! ಜಿಯೋಗೆ ಬಿಗ್‌ ಶಾಕ್‌..!

ಜಿಯೋ ಪ್ರಾಬಲ್ಯವನ್ನು ತಗ್ಗಿಸಲು ಏರ್‌ಟೆಲ್‌ ತನ್ನ ಹೊಸ ಗ್ರಾಹಕರಿಗೆ ಬಂಪರ್ ಆಫರ್‌ ಘೋಷಿಸಿದೆ. ಭಾರ್ತಿ ಏರ್‌ಟೆಲ್‌ ಕಂಪನಿ ಹೊಸ ಗ್ರಾಹಕರಿಗಾಗಿ 5 ಹೊಸ ಫಸ್ಟ್‌ ರಿಚಾರ್ಜ್‌ ಪ್ಲಾನ್‌ಗಳನ್ನು ಘೋಷಿಸಿದ್ದು, 178 ರೂ. ಗಳಿಂದ 559 ರೂ. ವರೆಗೆ ಲಭ್ಯವಿವೆ. ಎಲ್ಲಾ ಪ್ಲಾನ್‌ಗಳಲ್ಲೂ ಉಚಿತ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಯ ಅವಕಾಶವಿರುವುದು, ಗ್ರಾಹಕರನ್ನು ಸೆಳೆಯುತ್ತಿದೆ. ಆಗಿದ್ದರೆ, ಆ ಪ್ಲಾನ್‌ಗಳು ಯಾವುವು..? ವ್ಯಾಲಿಡಿಟಿ ಎಷ್ಟು..? ಆಫರ್‌ನಲ್ಲಿ ಏನೇನಿದೆ..? ಎಂಬುದನ್ನು ಮುಂದೆ ನೋಡಿ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more