Short News

ಗಾಂಧಿ ಕುಟುಂಬದಲ್ಲಿ ಹುಟ್ಟಿದ್ದೇನೆ ಎಂಬ ವಿನಾಯ್ತಿ ಬೇಡ: ರಾಹುಲ್

ಗಾಂಧಿ ಕುಟುಂಬದಲ್ಲಿ ಹುಟ್ಟಿದ್ದೇನೆ ಎಂಬ ವಿನಾಯ್ತಿ ಬೇಡ: ರಾಹುಲ್

  "ಸಾಮರ್ಥ್ಯದ ಆಧಾರದಲ್ಲಿ ನಾನೇನು ಅಂತ ತೀರ್ಮಾನ ಮಾಡಿ" ಅನ್ನೋ ಮೂಲಕ ಟೀಕಾಕಾರರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಸವಾಲು ಹಾಕಿದ್ದಾರೆ. ಎಲ್ಲ ಕಡೆಯಿಂದಲೂ ನಿರಂತರವಾಗಿ ನನ್ನ ಮೇಲೆ ದಾಳಿ ಮಾಡುವ ಮೂಲಕ ರಾಜಕೀಯ ನಾಯಕನಾಗಿ ಬೆಳೆಯಲು ಆರೆಸ್ಸೆಸ್ 'ಸಹಾಯ' ಮಾಡಿದೆ ಎಂದು ಅವರು ಹೇಳಿದ್ದಾರೆ. ಗಾಂಧಿ ಕುಟುಂಬಕ್ಕೆ ಸೇರಿದವರು ಅನ್ನೋ ಕಾರಣಕ್ಕೆ ಕಾಂಗ್ರೆಸ್ ನಲ್ಲಿ ಸಿಕ್ಕ ಮನ್ನಣೆ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲನೆಯದಾಗಿ ಪ್ರಧಾನಿಯಾಗಿದ್ದ ನನ್ನ ತಂದೆ (ರಾಜೀವ್ ಗಾಂಧಿ) ನಿಧನರಾದ ಮೇಲೆ ನಮ್ಮ ಕುಟುಂಬದಿಂದ ಸರಕಾರದಲ್ಲಿ ಯಾವುದೇ ಅಧಿಕಾರದಲ್ಲಿ ಇಲ್ಲ ಎಂದಿದ್ದಾರೆ.
ಸಿಎಂ ಟ್ವೀಟ್ ಗೆ ಪ್ರತಿಕ್ರಿಯೆ: ಬಿಬಿಎಂಪಿಗೆ ಛೀ ಥೂ ಎಂದು ಉಗಿದ ಜನತೆ

ಸಿಎಂ ಟ್ವೀಟ್ ಗೆ ಪ್ರತಿಕ್ರಿಯೆ: ಬಿಬಿಎಂಪಿಗೆ ಛೀ ಥೂ ಎಂದು ಉಗಿದ ಜನತೆ

ಬೆಂಗಳೂರಲ್ಲಿ ಸಂಜೆ ಮಳೆಯ ಆರ್ಭಟಕ್ಕೆ ಮತ್ತೊಮ್ಮೆ ಮಹಾನಗರ ಬೆಚ್ಚಿದೆ. ಮಳೆ ಬಗ್ಗೆ ಜಾಗೃತೆಯಿಂದಿರಿ, ಬಿಬಿಎಂಪಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ. ಆದರೆ, ಸಾರ್ವಜನಿಕರು ಇದಕ್ಕೆ ಉತ್ತರವಾಗಿ ಬಿಬಿಎಂಪಿ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನ ತಗ್ಗು ಪ್ರದೇಶಗಳು ಸೇರಿದಂತೆ ಹಲವೆಡೆ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಬೆಳಗ್ಗೆ ಬಿಸಿಲು, ಮಧ್ಯಾಹ್ನಕ್ಕೆ ಮೋಡ ಕವಿದ ವಾತಾವರಣ, ಸಂಜೆ ತುಂತುರು, ರಾತ್ರಿಯಾದರೆ ಭೋರ್ಗರೆಯುವ ಮಳೆ ಅಬ್ಬರದ ನಡುವೆ ಬಿಬಿಎಂಪಿ ಸುಖ ನಿದ್ದೆಯಲ್ಲಿದೆ ಎಂದು ಬೆಂಗಳೂರಿಗರು ಕೆಂಡಕಾರಿದ್ದಾರೆ.
ಯುಜಿಸಿ, ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ 2018 ರ ರಿಜಿಸ್ಟ್ರೇಶನ್ ಪ್ರಕ್ರಿಯೆ ಸೆಪ್ಟಂಬರ್ 30 ರಂದು ಕೊನೆಗೊಳ್ಳಲಿದೆ

ಯುಜಿಸಿ, ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ 2018 ರ ರಿಜಿಸ್ಟ್ರೇಶನ್ ಪ್ರಕ್ರಿಯೆ ಸೆಪ್ಟಂಬರ್ 30 ರಂದು ಕೊನೆಗೊಳ್ಳಲಿದೆ

ಯುಜಿಸಿ, ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ 2018 ರ ರಿಜಿಸ್ಟ್ರೇಶನ್ ಪ್ರಕ್ರಿಯೆ ಇದೇ ಸೆಪ್ಟಂಬರ್ 30 ರಂದು ಕೊನೆಗೊಳ್ಳಲಿದೆ. ನವಂಬರ್ 19ರಂದು ಈ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಲಭ್ಯವಾಗಲಿದ್ದು, ಜನವರಿ 10, 2018 ರಂದು ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಡಿಸಂಬರ್ 9 ರಿಂದ 23, 2018 ರವರೆಗೆ ಈ ಪರೀಕ್ಷೆ ನಡೆಯಲಿದ್ದು, 84 ಸಬ್‌ಜೆಕ್ಟ್ ನಲ್ಲಿ ಒಟ್ಟು 91 ಪರೀಕ್ಷೆ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದೆ. ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಜ್ಯೂನಿಯರ್ ರಿಸರ್ಚ್ ಫೆಲೋಶಿಪ್ ಎರಡು ಪೋಸ್ಟ್ ಗೆ ನಡೆಸುವ ಪರೀಕ್ಷೆ ಇದಾಗಿದೆ. ಅಭ್ಯರ್ಥಿಗಳು ಅಕ್ಟೋಬರ್ 1 ರೊಳಗೆ ಅರ್ಜೀ ಶುಲ್ಕ ಪಾವತಿಸಬಹುದಾಗಿದೆ.
ಅಚ್ಚರಿ ಜಗತ್ತು: ಬೀಚ್‌ನಲ್ಲಿ ನಗ್ನವಾಗಿಯೇ ಮದುವೆಯಾದ ಜೋಡಿ!

ಅಚ್ಚರಿ ಜಗತ್ತು: ಬೀಚ್‌ನಲ್ಲಿ ನಗ್ನವಾಗಿಯೇ ಮದುವೆಯಾದ ಜೋಡಿ!

ಇಟಲಿಯ ದ್ವೀಪವಾಗಿರುವಂತಹ ಸರ್ಡಾನಿಯಾದಲ್ಲಿ ಈ ಮದುವೆ ಕಾರ್ಯಕ್ರಮವು ನಡೆಯಿತು. ನಗ್ನವಾಗಿಯೇ ಈ ಜೋಡಿ ತಮ್ಮನ್ನು ಪತಿ ಹಾಗೂ ಪತ್ನಿಯೆಂದು ಸ್ವೀಕರಿಸಿಕೊಂಡಿತು. ಮದುಮಗಳು ಕೇವಲ ಫ್ಲೋವಿಂಗ್ ವೇಲ್ ಮತ್ತು ಮದುಮಗನು ಡ್ಯಾಪರ್ ಬೋ ಟೈ ಮಾತ್ರ ಧರಿಸಿದ್ದ. ಈ ಸುಂದರ ಜೋಡಿಯು ತಮ್ಮ ಸಾಂಪ್ರದಾಯಿಕ ಉಡುಗೆಯನ್ನು ಕಡೆಗಣಿಸಿತ್ತು. ಇದು ತುಂಬಾ ನಿಕಟವಾದ ಕಾರ್ಯಕ್ರಮವಾಗಿತ್ತು. ಕೇವಲ ಇಬ್ಬರು ಸ್ನೇಹಿತರನ್ನು ಮಾತ್ರ ಇದಕ್ಕೆ ಆಹ್ವಾನಿಸಲಾಗಿತ್ತು. ಅವರು ಕೂಡ ನಗ್ನರಾಗಿದ್ದರು. ನಗ್ನತೆ ಬಗ್ಗೆ ಕುಟುಂಬದವರು ಮತ್ತು ಸ್ನೇಹಿತರು ಹೆಚ್ಚು ಆರಾಮವಾಗಿರದ ಕಾರಣ ಮದುವೆ ಬಂದಿರಲಿಲ್ಲ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more