Short News

ಕೇರಳದಲ್ಲಿ ವರುಣನ ರುದ್ರನರ್ತನ: ಮೃತರ ಸಂಖ್ಯೆ 29 ಕ್ಕೇರಿಕೆ

ಕೇರಳದಲ್ಲಿ ವರುಣನ ರುದ್ರನರ್ತನ: ಮೃತರ ಸಂಖ್ಯೆ 29 ಕ್ಕೇರಿಕೆ

ಕೇಳದಲ್ಲಿ ಕಳೆದ ಕೆಲವು ದಿನಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಮೃತರಾದವರ ಸಂಖ್ಯೆ 29ಕ್ಕೇರಿದೆ. ಇಲ್ಲಿನ ಪ್ರಸಿದ್ಧ ಇಡುಕ್ಕಿ ಜಲಾಶಯದ ಭರ್ತಿಯಾಗಿದ್ದರಿಂದ(ಗರಿಷ್ಠ 2403ಅಡಿ- ಸದ್ಯದ ಮಟ್ಟ 2401ಅಡಿ) ಎಲ್ಲಾ ಐದು ಶಟರ್ ಗಳನ್ನು ತೆರೆಯಲಾಗಿದ್ದು ನದಿ ಪಾತ್ರದ ಜನರಿಗೆ ಸುರಕ್ಷಿತ ತಾಣಗಳಿಗೆ ತೆರಳಲು ಸೂಚಿಸಲಾಗಿದೆ. ಕೇರಳ ಪ್ರಸಿದ್ಧ ಪ್ರವಾಸೀ ತಾಣವಾಗಿರುವದರಿಂದ ಇಲ್ಲಿಗೆ ಬಂದ ಪ್ರವಾಸಿಗರ ಸ್ಥಿತಿಯೂ ಅತಂತ್ರವಾಗಿದೆ. ಮುನ್ನಾರ್ ನ ರೆಸಾರ್ಟ್ ವೊಂದರಲ್ಲಿ ಸಿಲುಕಿಕೊಂಡ 60 ಕ್ಕೂ ಹೆಚ್ಚು ಜನರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಇವರಲ್ಲಿ ಇಪ್ಪತ್ತು ವಿದೇಶಿ ಪ್ರವಾಸಿಗರಿಂದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
'ರಂಗಶಂಕರ'ದಲ್ಲಿ ಕಾಫಿ ಕುಡಿಯುತ್ತಿದ್ದ ಹುಡುಗಿ ಅದೇ ದಿನ ನಟಿಯಾಗಿ ಬಿಟ್ಟಳು

'ರಂಗಶಂಕರ'ದಲ್ಲಿ ಕಾಫಿ ಕುಡಿಯುತ್ತಿದ್ದ ಹುಡುಗಿ ಅದೇ ದಿನ ನಟಿಯಾಗಿ ಬಿಟ್ಟಳು

ಕನ್ನಡದ ನಟಿ ನಿಖಿಲಾ ಸುಮನ್‌ಗೆ ಇದ್ದಕ್ಕಿದ್ದ ಹಾಗೆ ಒಂದು ಅವಕಾಶ ಸಿಕ್ಕಿತು. 'ಶ್ರೀನಿವಾಸ ಕಲ್ಯಾಣ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದ ನಟಿ ನಿಖಿಲಾ ಸುಮನ್ ಸದ್ಯ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದಾರೆ. 'ಶನಿ' ಧಾರಾವಾಹಿ ಮೂಲಕ ನಿಖಿಲಾ ಮನೆ ಮಾತಾಗಿದ್ದಾರೆ. ತಮ್ಮ ಮೊದಲ ಸಿನಿಮಾದ ಬಗ್ಗೆ ಮಾತನಾಡಿರುವ ಅವರು ಒಮ್ಮೆ ನಾನು ರಂಗಶಂಕರದಲ್ಲಿ ಕಾಫಿ ಕುಡಿಯುತ್ತ ಇದ್ದೆ. ಶಂಕರ್ ಗಣೇಶ್ ಅಂತ ನನ್ನ ಫ್ರೆಂಡ್ ಬಂದು ಇದ್ದಕ್ಕಿದ್ದ ಹಾಗೆ ಒಂದು ಸ್ಟೂಡಿಯೊಗೆ ಕರೆದುಕೊಂಡು ಹೋದರು. ಅಲ್ಲಿಯೇ 'ಶ್ರೀನಿವಾಸ ಕಲ್ಯಾಣ' ಚಿತ್ರದ ಆಡಿಷನ್ ಕೊಟ್ಟೆ ಎಂದು ಹೀಗೆ ಚಿತ್ರರಂಗಕ್ಕೆ ಬಂದೆ ಎಂದು ತಾವು ಆಯ್ಕೆ ಆದ ಕಥೆಯನ್ನು ಹೇಳಿದ್ದಾರೆ.
ಕ್ರಿಕೆಟ್ಟಿಗೆ ಗುಡ್ ಬೈ ಹೇಳಿದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್

ಕ್ರಿಕೆಟ್ಟಿಗೆ ಗುಡ್ ಬೈ ಹೇಳಿದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್

ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್ ಅವರು ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. 2015ರಲ್ಲೇ ಎಲ್ಲಾ ಬಗೆಯ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಗೆ ವಿದಾಯ ಹೇಳಿದ್ದ ಜಾನ್ಸನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಬಿಗ್ ಬ್ಯಾಷ್ ಲೀಗ್ ನಲ್ಲಿ ಪರ್ತ್ ಸ್ಕ್ರೋಚರ್ಸ್ ಪರ ಆಡುತ್ತಿದ್ದರು. 2013-14ರ ಆಷ್ಯಸ್ ಸರಣಿಯಲ್ಲಿ ಆಸ್ಟ್ರೇಲಿಯಾ 5-0ರಲ್ಲಿ ಗೆಲುವು ಸಾಧಿಸಲು ನೆರವಾಗಿದ್ದರು. ಆದರೆ, ನಂತರ ಗಾಯಗೊಂಡು , ಲಯ ಕಳೆದುಕೊಂಡು ತಂಡದಿಂದ ಹೊರಗುಳಿಯಬೇಕಾಯಿತು.
ತೆಂಗಿನ ಎಣ್ಣೆಯಿಂದ ಹಲ್ಲು ಉಜ್ಜಿದರೆ- ಹಲ್ಲುಗಳು ಇನ್ನಷ್ಟು ಬೆಳ್ಳಗೆ ಆಗುತ್ತೆ!

ತೆಂಗಿನ ಎಣ್ಣೆಯಿಂದ ಹಲ್ಲು ಉಜ್ಜಿದರೆ- ಹಲ್ಲುಗಳು ಇನ್ನಷ್ಟು ಬೆಳ್ಳಗೆ ಆಗುತ್ತೆ!

ಹಲವಾರು ಅಧ್ಯಯನಗಳು ತೆಂಗಿನ ಎಣ್ಣೆ ಟೂತ್ ಪೇಸ್ಟ್‌ಗೆ ಪರಿಣಾಮಕಾರಿಯಾದ ಬದಲಿ ಉತ್ಪನ್ನ ಎಂದು ಸಾಭೀತು ಮಾಡಿವೆ. ಹಾಗು ಇದರಲ್ಲಿ ಸ್ವಾಭಾವಿಕವಾದ ಆಂಟಿ-ಬ್ಯಾಕ್ಟೀರಿಯಾ ಗುಣಗಳು ಇದ್ದು, ಇದು ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ ಹಾಗು ಟಾಕ್ಸಿನ್‌ಗಳು ನಿವಾರಿಸುತ್ತದೆ. ತೆಂಗಿನ ಎಣ್ಣೆಯು ದಂತ ಸವಕಳಿಯನ್ನು ಇನ್ನಿತರ ಓರಲ್-ಕ್ಲೀನ್ಸಿಂಗ್ ಉತ್ಪನ್ನಗಳಿಗಿಂತ ಪರಿಣಾಮಕಾರಿಯಾಗಿ ತಡೆಯುತ್ತದೆ. ಒಂದು ಅಧ್ಯಯನದ ಪ್ರಕಾರ ತೆಂಗಿನ ಎಣ್ಣೆಯು ಪ್ಲಾಕ್ ಉತ್ಪತ್ತಿಯಾಗುವುದನ್ನು ಕಡಿಮೆ ಮಾಡುತ್ತದೆಯಂತೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more