Short News

ನಗೆಪಾಟಲಿಗೀಡಾದ ಕೇಂದ್ರ ಸಚಿವರ ಕೇರಳ ಪ್ರವಾಹದ ಟ್ವೀಟ್

ನಗೆಪಾಟಲಿಗೀಡಾದ ಕೇಂದ್ರ ಸಚಿವರ ಕೇರಳ ಪ್ರವಾಹದ ಟ್ವೀಟ್

ಕೇಂದ್ರ ಸಚಿವ ಕೆ ಅಲ್ಫೋನ್ಸ್ ಅವರು ಕೇರಳ ಪ್ರವಾಹದ ಬಗ್ಗೆ ನಿರಂತರವಾಗಿ ಮಾಹಿತಿ ನೀಡುತ್ತಾ ಬಂದಿದ್ದಾರೆ. ಆದರೆ, ಇತ್ತೀಚಿನ ಅವರ ಟ್ವೀಟೊಂದು ನಗೆಪಾಟಲಿಗೀಡಾಗಿದೆ. ಕೇರಳದ ಪ್ರವಾಹ ಪೀಡಿತರು ಇರುವ ಪುನರ್ವಸತಿ ಕೇಂದ್ರದಲ್ಲಿ ಮಲಗಿ ನಿದ್ದೆ ಮಾಡುವ ಚಿತ್ರ ವೈರಲ್ ಆಗುತ್ತಿದೆ. 'ನಾನು ಚಂಗನಚ್ಚೇರಿಯ ಪುನರ್ವಸತಿ ಕೇಂದ್ರದಲ್ಲಿ ನಿನ್ನೆ ರಾತ್ರಿ ನಿದ್ದೆ ಮಾಡಿದೆ. ಅನೇಕರಿಗೆ ನಾಳೆಯ ಬಗ್ಗೆ ಅನಿಶ್ಚಿತತೆಯಿರುತ್ತದೆ' ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು. ಜತೆಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಟ್ಯಾಗ್ ಮಾಡಿದ್ದರು.
ಇಲ್ಲಿ ಶವಗಳನ್ನು ಟ್ರಕ್ ನಲ್ಲಿ ಸಂಗ್ರಹಿಸಿಡಲಾಗುತ್ತದೆ!

ಇಲ್ಲಿ ಶವಗಳನ್ನು ಟ್ರಕ್ ನಲ್ಲಿ ಸಂಗ್ರಹಿಸಿಡಲಾಗುತ್ತದೆ!

ಪಶ್ಚಿಮ ಮೆಕ್ಸಿಕೋದ ಎರಡನೇ ಅತಿ ದೊಡ್ಡ ನಗರ ಜಲಿಸ್ಕೋದಲ್ಲಿ ಸ್ಮಶಾನಗಳೆಲ್ಲ ಪೂರ್ತಿಯಾಗಿದ್ದು, ಶವ ಸಂಸ್ಕಾರಕ್ಕೆ ಜಾಗವೇ ಇಲ್ಲ. ಹೀಗಾಗಿ ಕಳೆದ ಎರಡು ವರ್ಷಗಳಿಂದ ಜನರು ಇಲ್ಲಿ ರೆಫ್ರಿಜರೇಟ್ ಮಾಡಿದ ಟ್ರಕ್‌ಗಳಲ್ಲಿ ಶವಗಳನ್ನು ಶೇಖರಿಸಿಡುತ್ತಿದ್ದಾರೆ! ಜಲಿಸ್ಕೋ, ಡ್ರಗ್ ಗ್ಯಾಂಗ್‌ಗಳ ಹಿಂಸಾಚಾರಕ್ಕೆ ಕುಖ್ಯಾತಿಯಾಗಿದೆ. ಈ ವರ್ಷ ಈಗಾಗಲೇ 16,339 ಕೊಲೆಗಳು ನಡೆದಿವೆ. ಮೆಕ್ಸಿಕೋ ಜಗತ್ತಿನಲ್ಲೇ ಅತಿ ಹೆಚ್ಚು ಕೊಲೆ ನಡೆಯುವ ರಾಷ್ಟ್ರಗಳ ಪಟ್ಟಿಯಲ್ಲಿ 20 ನೇ ಸ್ಥಾನದಲ್ಲಿದೆ. ಈ ಟ್ರಕ್‌ಗಳು ನಗರಾದ್ಯಂತ ಸಂಚರಿಸುತ್ತಿವೆ. ಆದರೆ ಕೆಟ್ಟ ವಾಸನೆ ಬರುತ್ತಿದೆ ಎಂದು ಇತ್ತೀಚೆಗೆ ಜನರು ದೂಷಿಸುತ್ತಿದ್ದಾರೆ.
ಬಾಳೆ ಎಲೆಯಲ್ಲಿ ಆಹಾರವಿಟ್ಟು ಕಾಗೆಗೆ ಉಣಬಡಿಸುವ 'ಪಿತೃ ಪಕ್ಷದ' ಮಹತ್ವ

ಬಾಳೆ ಎಲೆಯಲ್ಲಿ ಆಹಾರವಿಟ್ಟು ಕಾಗೆಗೆ ಉಣಬಡಿಸುವ 'ಪಿತೃ ಪಕ್ಷದ' ಮಹತ್ವ

ಶ್ರಾದ್ಧ ಅಥವಾ ಪಿತೃ ಪಕ್ಷದಲ್ಲಿ ತಿಥಿಯನ್ನು ಮಾಡುವುದು ನಮ್ಮ ಪೂರ್ವಿಕರಿಗೆ ಸಮಧಾನವನ್ನುಂಟು ಮಾಡುವ ಪ್ರಕ್ರಿಯೆಯಾಗಿದೆ. ಅವರು ಅತೃಪ್ತಿಯಿಂದ ಮರಣ ಹೊಂದಿದ್ದಲ್ಲಿ ಅವರ ಹೆಸರಿನಲ್ಲಿ ತಿಥಿಯನ್ನು ಮಾಡಿ ಇಷ್ಟದ ಖಾದ್ಯವನ್ನು ತಯಾರಿಸಿ ಅದನ್ನು ಬಾಳೆ ಎಲೆಯಲ್ಲಿಟ್ಟು ಕಾಗೆಗೆ ಉಣಬಡಿಸಲಾಗುತ್ತದೆ. ಕಾಗೆ ಬಂದು ಆಹಾರ ತಿಂದಲ್ಲಿ ಅವರಿಗೆ ನಾವು ಮಾಡಿರುವುದು ತೃಪ್ತಿಯಾಗಿದೆ ಎಂದಾಗಿದೆ. ಈ ಸಂದರ್ಭದಲ್ಲಿ ಪೂಜೆಯನ್ನು ಮಾಡಿ ಅವರ ಆತ್ಮಕ್ಕೆ ಶಾಂತಿಯನ್ನು ನೀಡುವ ಕಾರ್ಯವನ್ನು ಮಾಡಲಾಗುತ್ತದೆ. ಹಿಂದೂಗಳು ಪಿತೃ ಪಕ್ಷದಂದು ತಿಥಿ ಮಾಡುವುದು ಸರ್ವೇ ಸಾಮಾನ್ಯವಾಗಿದ್ದು

ಮೈದಾನದಲ್ಲೇ ಚೀರಾಡಿ ಕಣ್ಣೀರಿಟ್ಟ ಕ್ರಿಸ್ಟಿಯಾನೋ ರೊನಾಲ್ಡೋ!

ಮೈದಾನದಲ್ಲೇ ಚೀರಾಡಿ ಕಣ್ಣೀರಿಟ್ಟ ಕ್ರಿಸ್ಟಿಯಾನೋ ರೊನಾಲ್ಡೋ!

ವಿಶ್ವದ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಮೈದಾನದಲ್ಲಿ ಕಣ್ಣೀರಿಟ್ಟಿದ್ದು ಅಭಿಮಾನಿಳ ಕೋಪಕ್ಕೆ ಕಾರಣವಾಗಿದೆ. ಯುವೆಂಟುಸ್ ಪರ ಆಡಿದ ಚೊಚ್ಚಲ ಚಾಂಪಿಯನ್ಸ್ ಲೀಗ್ ಪಂದ್ಯದಲ್ಲೇ ರೊನಾಲ್ಡೋಗೆ ಆಘಾತ ಎದುರಾಗಿತ್ತು. ರೋನಾಲ್ಡೋ ಟ್ಯುರಿನ್ ನಲ್ಲಿ ನಡೆದ ಲಾ ಲೀಗಾ ತಂಡದ ವ್ಯಾಲೆನ್ಸಿಯಾ ವಿರುದ್ಧದ ಪಂದ್ಯದ 28ನೇ ನಿಮಿಷದಲ್ಲಿ ಎದುರಾಳಿ ಆಟಗಾರನನ್ನು ತಳ್ಳಿದ್ದರು. ಇದಕ್ಕೆ ರೆಫ್ರಿ ರೆಡ್ ಕಾರ್ಡ್ ನೀಡಿದ್ದು ಇದನ್ನು ನೋಡುತ್ತಿದ್ದಂತೆ ರೊನಾಲ್ಡೋ ಕಣ್ಣೀರಿಡುತ್ತಾ, ಗೋಳಾಡಿದರು. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more