Short News

ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿ: ಸಿಎಂ

ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿ: ಸಿಎಂ

ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯಲ್ಲಿ ಹಿರಿಯ ಅಧಿಕಾರಿಗಳು ಇಂದು ವಿಧಾನಸೌಧಕ್ಕೆ ಭೇಟಿ ನೀಡಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದರು. ಟೊಯೋಟ ಕಿರ್ಲೋಸ್ಕರ್‌ ಸಂಸ್ಥೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡುವಂತೆ ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು, ಟೊಯೋಟ ಅಧಿಕಾರಿಗಳ ಬಳಿ ಮನವಿ ಮಾಡಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಕಿಟೋ ತಚಿಬಾನ ಹಾಗೂ ನಿರ್ದೇಶಕ ಮತ್ತು ಉಪಾಧ್ಯಕ್ಷ ಶೇಖರ್ ವಿಶ್ವನಾಥನ್ ಇನ್ನೂ ಹಲವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ವಾಹನಗಳ ಮೇಲಿನ ತೆರಿಗೆ ವೆಚ್ಚ ಶೇ. 43 ರಷ್ಟು ಹೆಚ್ಚಿಸಲಾಗಿದ್ದು, ಜಿ.ಎಸ್.ಟಿ ಕಡಿಮೆ ಮಾಡಿಸುವಂತೆ ಸಂಸ್ಥೆಯ ನಿರ್ದೇಶಕರು ಮನವಿ ಮಾಡಿದರು.
ಮಲಗುವ ಮುನ್ನ ನಿಮ್ಮ ಮುಖವನ್ನು ಹೇಗೆ ಸ್ವಚ್ಛಗೊಳಿಸಿದರೆ ಒಳ್ಳೆಯದು?

ಮಲಗುವ ಮುನ್ನ ನಿಮ್ಮ ಮುಖವನ್ನು ಹೇಗೆ ಸ್ವಚ್ಛಗೊಳಿಸಿದರೆ ಒಳ್ಳೆಯದು?

ದಿನವೂ ಮಲಗುವ ಮುನ್ನ ಮುಖವನ್ನು ಸ್ವಚ್ಛಗೊಳಿಸುವುದರಿಂದ ಚರ್ಮದ ಕಲ್ಮಶಗಳನ್ನು ತೆಗೆಯಬಹುದು. ಇದರಿಂದ ನಿಮ್ಮ ಚರ್ಮಕ್ಕೆ ಉಸಿರಾಡಲು ಸಹಾಯವಾಗುತ್ತದೆ. ಮುಖವನ್ನು ತೊಳೆದುಕೊಳ್ಳುವಾಗ ನಾವು ನಿಧಾನವಾಗಿ ಮುಖದ ಮಸಾಜ್ ಮಾಡಿಕೊಳ್ಳುತ್ತೇವೆ.ಅದರಿಂದ ರಕ್ತ ಸಂಚಾರ ಹೆಚ್ಚಾಗಿ ಮುಖದ ಹೊಳಪು ಹೆಚ್ಚುತ್ತದೆ. ಮುಖವನ್ನು ಸ್ವಚ್ಛಗೊಳಿಸುವುದರಿಂದ ಮೊಡವೆ ಮತ್ತು ಕಪ್ಪು ಕಲೆಗಳಿಂದ ದೂರವಿರಬಹುದು. ಮುಖವನ್ನು ಸ್ವಚ್ಛಗೊಳಿಸುವುದರಿಂದ ನೀವು ದಣಿದ್ದಿದರೂ ಸಹ ಮುಖ ಹೆಚ್ಚು ಸುಸ್ತಾದಂತೆ ಕಾಣುವುದಿಲ್ಲ. ಮುಖವನ್ನು ತೊಳೆದು ಸ್ವಚ್ಛಗೊಳಿಸಲು ನೀವು ಸಾಕಷ್ಟು ಸಮಯವನ್ನು ನೀಡಬೇಕು.

ಷೇರು ಪೇಟೆಯಲ್ಲಿ ಕೊಚ್ಚಿಹೋಯಿತು ಹೂಡಿಕೆದಾರರ 2.72 ಲಕ್ಷ ಕೋಟಿ ರುಪಾಯಿ

ಷೇರು ಪೇಟೆಯಲ್ಲಿ ಕೊಚ್ಚಿಹೋಯಿತು ಹೂಡಿಕೆದಾರರ 2.72 ಲಕ್ಷ ಕೋಟಿ ರುಪಾಯಿ

ಸೋಮವಾರ ಹಾಗೂ ಮಂಗಳವಾರ ಎರಡೇ ದಿನದಲ್ಲಿ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು 2.72ಲಕ್ಷ ಕೋಟಿ ರುಪಾಯಿಯನ್ನು ಕಳೆದುಕೊಂಡಿದ್ದಾರೆ. ಎರಡು ದಿನಗಳಲ್ಲೇ ಸೆನ್ಸೆಕ್ಸ್ ಸೂಚ್ಯಂಕವು 800 ಅಂಶಗಳಷ್ಟು ಕುಸಿತ ಕಂಡಿದೆ. ಮಂಗಳವಾರ ಸೆನ್ಸೆಕ್ಸ್ 295 ಅಂಶಗಳಷ್ಟು ಕುಸಿದು, ದಿನಾಂತ್ಯಕ್ಕೆ 37,290.67 ಅಂಶಕ್ಕೆ ತಲುಪಿತು. ಜಾಗತಿಕ ಮಟ್ಟದಲ್ಲಿ ನಡೆದಿರುವ (ಅಮೆರಿಕ ಹಾಗೂ ಚೀನಾ ಮಧ್ಯೆ) ವ್ಯಾಪಾರದ ಕದನ, ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆಯಿಂದ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಸೋಮವಾರದಂದು ಸಹ ರುಪಾಯಿ ಮೌಲ್ಯ ಕುಸಿತ ಹಾಗೂ ಇತರ ಅಂಶಗಳ ಪ್ರಭಾವದಿಂದಾಗಿ ಸೆನ್ಸೆಕ್ಸ್ 505 ಅಂಶಗಳಷ್ಟು ಇಳಿಕೆ ಕಂಡಿತ್ತು.
ಇಂದಿನ (ಸೆ.29) ದ್ವಾದಶ ರಾಶಿಗಳ ನಿತ್ಯ ಭವಿಷ್ಯ

ಇಂದಿನ (ಸೆ.29) ದ್ವಾದಶ ರಾಶಿಗಳ ನಿತ್ಯ ಭವಿಷ್ಯ

ಮೇಷ : ಅಂದುಕೊಂಡಂತೆ ನಡೆಯುವುದಿಲ್ಲ, ಮಾತಿನಲ್ಲಿ ಹಿಡಿತವಿರಲಿ. ವೃಷಭ : ಆರ್ಥಿಕ ಸಂಕಷ್ಟ ದೂರಾಗಲಿದ್ದು, ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ಮಿಥುನ: ಆತುರಪಟ್ಟು ಅವಕಾಶ ವಂಚಿತರಾಗದಿರಿ. ಕಟಕ : ಕೆಲಸಗಳು ಸುಗಮವಾಗಿ ಆಗುವುದು. ಸಿಂಹ: ನಿಮ್ಮ ಒರಟು ಸ್ವಭಾವದಿಂದ ಆತ್ಮೀಯರಿಂದ ದೂರಾಗುವಿರಿ. ಕನ್ಯಾ: ಬಾಳಸಂಗಾತಿಯ ಬುದ್ಧಿಮತ್ತೆಯಿಂದ ಸಮಸ್ಯೆ ಗಳಿಗೆ ಪರಿಹಾರ. ತುಲಾ: ವಾಕ್ಚತುರ್ಯದಿಂದ ಕಾರ್ಯಸಿದ್ಧಿ, ವಿರೋಧಿಗಳಿಂದ ಹೊಗಳಿಕೆ. ವೃಶ್ಚಿಕ : ನೂತನ ಬಂಡವಾಳ ಹೂಡಿಕೆಗೆ ಯೋಜನೆ. ಧನುಸ್ಸು: ಬೇಡದ ವಿಚಾರಗಳಿಂದ ಮನಸ್ಸಿಗೆ ನೋವು, ತಾಳ್ಮೆ ವಹಿಸಿದರೆ ಒಳಿತು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more