Short News

ಮೇಜರ್ ಲೀಟುಲ್  ದೋಷಿ ಎಂದು ಸಾಬೀತು, ಶಿಸ್ತು ಕ್ರಮಕ್ಕೆ ಸೇನೆ ಆದೇಶ

ಮೇಜರ್ ಲೀಟುಲ್ ದೋಷಿ ಎಂದು ಸಾಬೀತು, ಶಿಸ್ತು ಕ್ರಮಕ್ಕೆ ಸೇನೆ ಆದೇಶ

ಶ್ರೀನಗರ ಹೋಟೆಲ್ ಕೇಸ್ ಸಂಬಂಧ ಮೇಜರ್ ಲೀಟುಲ್ ಗೊಗೋಯ್ ದೋಷಿ ಎಂದು ರುಜುವಾತದ ಹಿನ್ನೆಲೆಯಲ್ಲಿ ಸೇನಾ ಕೋರ್ಟ್ ಅರೆಸ್ಟ್ ಮಾಡಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದೆ. ಮಾರ್ಚ್ 23ರಂದು ಶ್ರೀನಗರ ಹೋಟೆಲ್ ಕೋಣೆಯೊಂದರಲ್ಲಿ ಲೀಟುಲ್ ಗೊಗೋಯ್ ಮಹಿಳೆಯ ಜೊತೆ ಸಿಕ್ಕಿಬಿದ್ದಾಗ ಬಂಧಿಸಲಾಗಿತ್ತು. ಸ್ಥಳೀಯ ಮಹಿಳೆಯೊಂದಿಗೆ ಮೇಜರ್ ಸಂಬಂಧ ಇಟ್ಟುಕೊಂಡಿದ್ದ, ಇದು ಸೇನಾ ನೀತಿ ನಿಯಮಗಳಿಗೆ ವಿರುದ್ಧವಾಗಿತ್ತು. ಹೀಗಾಗಿ ಆರೋಪ ಸಾಬೀತಾಗಿದೆ. ಕಳೆದ ವರ್ಷ ಏಪ್ರಿಲ್‌ ನಲ್ಲಿ ಕಾಶ್ಮೀರಿ ವ್ಯಕ್ತಿಯೊಬ್ಬನನ್ನು ಮಾನವ ಗುರಾಣಿಯನ್ನಾಗಿ ಬಳಸಿಕೊಂಡಿದ್ದ ಪ್ರಕರಣದಲ್ಲೂ ಲೀಟುಲ್ ಸುದ್ದಿಯಾಗಿದ್ದರು.
ನಿಮ್ಮ ಮೈ ಮೇಲೆ  ಹಲ್ಲಿ ಬಿದ್ದರೆ ಅಪಶಕುನವೇ? ಅದೃಷ್ಟವೇ?

ನಿಮ್ಮ ಮೈ ಮೇಲೆ ಹಲ್ಲಿ ಬಿದ್ದರೆ ಅಪಶಕುನವೇ? ಅದೃಷ್ಟವೇ?

ಹಿಂದೂ ಪುರಾಣಗಳಲ್ಲಿ ವಿವಿಧ ಪ್ರಾಣಿಗಳಿಗೆ ವಿವಿಧ ಪಾತ್ರಗಳನ್ನು ನೀಡಲಾಗಿದೆ. ಆದರೆ ಅತಿ ನಿಕೃಷ್ಟವಾಗಿ ಕಂಡುಬಂದ ಜೀವಿಯೆಂದರೆ ಹಲ್ಲಿ. ಪುರಾಣದ ಪ್ರಕಾರ ಅಮೃತಮಂಥನದ ಸಮಯದಲ್ಲಿ ಅಮೃತವನ್ನು ಕುಡಿದ ಸ್ವರ್ಣಬಾಹು ಎಂಬ ರಾಕ್ಷಸನನ್ನು ಮೋಹಿನಿಯ ಅವತಾರದ ಮಹಾವಿಷ್ಣು ಸಂಹರಿಸಿದ್ದನಂತೆ. ರುಂಡವಿಲ್ಲದ ಮುಂಡಕ್ಕೆ ಕೇತು ಎಂದು ಕರೆಯಲಾಗುತ್ತದೆ ಹಾಗೂ ರುಂಡವನ್ನು ಒಂದು ಹಾವಿನ ದೇಹಕ್ಕೆ ಜೋಡಿಸಿ ರಾಹು ಎಂದು ಕರೆಯಲಾಗುತ್ತದೆ. ಸೂರ್ಯ ಮತ್ತು ಚಂದ್ರ ಗ್ರಹಣಗಳೆಂದರೆ ರಾಹು ಸೂರ್ಯ ಅಥವಾ ಚಂದ್ರನನ್ನು ನುಂಗುವುದೆಂದೂ ಸೂರ್ಯ ಅಥವಾ ಚಂದ್ರನ ಕೊರಳಿನಿಂದ ಹೊರಬಂದು ಗ್ರಹಣವನ್ನು ಅಂತ್ಯ ಗೊಳಿಸುವುದೆಂದೂ ಹೇಳಲಾಗಿದೆ.

ಅಫ್ಘನ್ ರಾಯಭಾರಿಯ ಅಚ್ಚರಿಯ ನಡೆ: ಅಧ್ಯಕ್ಷರ ಭೇಟಿ ದಿನ ರಾಜೀನಾಮೆ!

ಅಫ್ಘನ್ ರಾಯಭಾರಿಯ ಅಚ್ಚರಿಯ ನಡೆ: ಅಧ್ಯಕ್ಷರ ಭೇಟಿ ದಿನ ರಾಜೀನಾಮೆ!

ಭಾರತಕ್ಕೆ ಭೇಟಿ ನೀಡಿರುವ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘಾನಿ ಅವರಿಗೆ ಅಚ್ಚರಿಯ ಸ್ವಾಗತ ಸಿಕ್ಕಂತಾಗಿದೆ. ಸೆ.19ರಂದು ಭಾರತಕ್ಕೆ ಘಾನಿ ಆಗಮಿಸುತ್ತಿದ್ದಂತೆಯೇ ಅಫ್ಘಾನಿಸ್ತಾನದ ಭಾರತೀಯ ರಾಯಭಾರಿ ಡಾ.ಶೈದಾ ಮೊಹಮ್ಮದ್ ಅಬ್ದಾಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಆದರೆ ತಮ್ಮ ರಾಜೀನಾಮೆಗೆ ನಿಖರ ಕಾರಣಗಳನ್ನು ಅವರು ಎಲ್ಲಿಯೂ ತಿಳಿಸಿಲ್ಲ. "ಭಾರತ ನನಗೆ ಕೇವಲ ಕೌಟುಂಬಿಕ ವಾತಾವರಣವನ್ನು ನೀಡಿಲ್ಲ,ನನಗೆ ಜ್ಞಾನದ ಗಣಿಯನ್ನೇ ನೀಡಿದೆ ಜೊತೆಗೆ ನನ್ನ 2ದಶಕಗಳ ರಾಜಕೀಯ ಬದುಕಿಗೆ ಸಾಕಷ್ಟು ಅನುಭವಗಳನ್ನೂ ನೀಡಿದೆ" ಎಂದು ಟ್ವೀಟ್ ಮಾಡಿರುವ ಅಬ್ದಾಲಿ ತಮ್ಮ ರಾಜೀನಾಮೆಯನ್ನೂ ತಿಳಿಸಿದ್ದಾರೆ.
ಮಟ ಮಟ ಮಧ್ಯಾಹ್ನ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಓಡಾಡಿದ ಪೊಲೀಸಪ್ಪ

ಮಟ ಮಟ ಮಧ್ಯಾಹ್ನ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಓಡಾಡಿದ ಪೊಲೀಸಪ್ಪ

ಸಮವಸ್ತ್ರ ಧರಿಸಿ ಡ್ಯೂಟಿಯಲ್ಲಿರುವಾಗಲೇ ಪೊಲೀಸ್ ಸಿಬ್ಬಂದಿಯೊಬ್ಬರು ಮಟಮಟ ಮಧ್ಯಾಹ್ನ ಕಂಠಪೂರ್ತಿ ಕುಡಿದು ತೂರಾಡಿದ ಘಟನೆ ಮಂಗಳೂರಿನಲ್ಲಿ ಬುಧವಾರ (ಸೆ.19) ನಡೆದಿದೆ. ಕರ್ತವ್ಯದಲ್ಲಿದ್ದಾಗಲೇ ಪೊಲೀಸಪ್ಪ ಕುಡಿದ ಮತ್ತಿನಲ್ಲಿ ತೂರಾಡುತ್ತಿದ್ದಾಗ ಸಾರ್ವಜನಿಕರು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ರಸ್ತೆಯಲ್ಲೆಲ್ಲಾ ತೂರಾಡಿದ ಪೊಲೀಸ್ ಸಿಬ್ಬಂದಿ ಯನ್ನು ಅಶೋಕ್ ಗೌಡ ಎಂದು ಗುರುತಿಸಲಾಗಿದೆ. ಇವರು ಮಂಗಳೂರು ಪಶ್ಚಿಮ ಸಂಚಾರಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more