Short News

500 ದುಬಾರಿ ಕಾರುಗಳನ್ನು ಕದ್ದ ಕಳ್ಳ ಪೊಲೀಸ್ ತೆಕ್ಕೆಗೆ!

500 ದುಬಾರಿ ಕಾರುಗಳನ್ನು ಕದ್ದ ಕಳ್ಳ ಪೊಲೀಸ್ ತೆಕ್ಕೆಗೆ!

ಐದುನೂರಕ್ಕೂ ಹೆಚ್ಚು ದುಬಾರಿ ಕಾರುಗಳನ್ನು ಕದ್ದ ಭೂಪನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸಫ್ರುದ್ದಿನ್ ಎಂಬ 29 ವರ್ಷ ವಯಸ್ಸಿನ ಯುಕನಿಗೆ ಕಾರು ಕದಿಯುವುದೇ ಕೆಲಸ. ರಸ್ತೆಗಳಲ್ಲಿ ನಿಲ್ಲಿಸಿದ ಕಾರುಗಳನ್ನು ನಕಲಿ ಕೀ ಬಳಸಿ ಎಗರಿಸುತ್ತಿದ್ದ ಈತನಿಗೆ ಸಾಧಾರಣ ಕಾರುಗಳೆಲ್ಲ ಒಗ್ಗುತ್ತಿರಲಿಲ್ಲ! ಬಿಎಂ ಡಬ್ಲ್ಯು, ಆಡಿ, ಮರ್ಸಿಡೆಸ್ ಬೆಂಝ್ ನಂಥ ಐಷಾರಾಮಿ ಕಾರುಗಳೇ ಬೇಕಿತ್ತು! ಸಫ್ರುದ್ದಿನ್ ನೇತೃತ್ವದ ತಂಡ ಕೇವಲ ದೆಹಲಿ ಮಾತ್ರವಲ್ಲದೆ ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾರು ಕದಿಯುವ ಕೆಲಸ ಮಾಡುತ್ತಿತ್ತು.
ಕೇರಳದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸುತ್ತಿರುವ ಮೋದಿ

ಕೇರಳದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸುತ್ತಿರುವ ಮೋದಿ

ಮಳೆಹಾನಿ, ಭಾರೀ ಪ್ರವಾಹದಿಂದ ಕಂಗೆಟ್ಟಿರುವ ಕೇರಳಕ್ಕೆ ಶುಕ್ರವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಅವರು ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ. "ಕೇರಳದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಅಲ್ಲಿಗೆ ತೆರಳಿಯೇ ತಿಳಿದುಕೊಳ್ಳುವೆ" ಎಂದು ಮೋದಿ ಈ ಮುನ್ನ ಟ್ವೀಟ್ ಮಾಡಿದ್ದರು. ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ನಿರಂತರ ಮಳೆ ಬೀಳುತ್ತಿರುವುದರಿಂದ, ರಾಜ್ಯದ ಅನೇಕ ಭಾಗಗಳಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ಇಲ್ಲಿಯವರೆಗೆ 324 ಜನರು ಪ್ರವಾಹದಿಂದಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇರಳದ ಮುಖ್ಯಮಂತ್ರಿ ಕಚೇರಿ ಮಾಹಿತಿ ನೀಡಿದೆ.
ಹೆಚ್ಚುವರಿ ಸೇನಾಪಡೆ: ರಕ್ಷಣಾ ಸಚಿವೆ ನಿರ್ಮಲಾ ಜತೆ ಎಚ್ಡಿಕೆ ಚರ್ಚೆ

ಹೆಚ್ಚುವರಿ ಸೇನಾಪಡೆ: ರಕ್ಷಣಾ ಸಚಿವೆ ನಿರ್ಮಲಾ ಜತೆ ಎಚ್ಡಿಕೆ ಚರ್ಚೆ

ಕೊಡಗಿನಲ್ಲಿ ಮಹಾಮಳೆ ಮುಂದುವರೆದಿರುವ ಪರಿಣಾಮ ಅಲ್ಲಿರುವ ಸೇನಾಸಿಬ್ಬಂದಿಯಿಂದ ಪರಿಸ್ಥಿತಿ ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಮತ್ತಷ್ಟು ಸೇನಾ ಸಿಬ್ಬಂದಿಯನ್ನು ನಿಯೋಜನೆ ಮಾಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಲ್ಲಿ ಮನವಿ ಮಾಡಿದ್ದಾರೆ. ಈಗಾಗಲೇ 70 ಸೇನಾ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ವಾಯುಸೇನಾ ಅಧಿಕಾರಿಗಳಿಂದ ಸಾವಿರಕ್ಕೂ ಹೆಚ್ಚಿನ ಸೇನಾ ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿದೆ, ಇನ್ನೂ ಹೆಚ್ಚಿನ ರಕ್ಷಣಾ ಸಿಬ್ಬಂದಿಗಳನ್ನು ನಿಯೋಜನೆ ಮಾಡುವಂತೆ ಎಚ್ಡಿಕೆ ಪತ್ರ ಬರೆದಿದ್ದಾರೆ.
ಅಭಿಮಾನಿಗಳ ನಿದ್ದೆ ಕದ್ದ ಅನುಷ್ಕಾ ಕಿಲ್ಲರ್ ಲುಕ್‌ನಲ್ಲಿ!

ಅಭಿಮಾನಿಗಳ ನಿದ್ದೆ ಕದ್ದ ಅನುಷ್ಕಾ ಕಿಲ್ಲರ್ ಲುಕ್‌ನಲ್ಲಿ!

ಬಾಲಿವುಡ್‌ನಲ್ಲಿ ಸಾಧನೆಯತ್ತ ಮುನ್ನುಗ್ಗುತ್ತಿರುವ ನಟಿ ಅನುಷ್ಕಾ ತಮ್ಮ ನಟನೆಯಿಂದ ಮಾತ್ರವಲ್ಲದೆ ಫ್ಯಾಷನ್ ಪ್ರಿಯತೆಯಿಂದಲೂ ತಮ್ಮ ಅಭಿಮಾನಿಗಳ ಮನಗೆದ್ದವರು ವಿರಾಟ್ ಕೊಹ್ಲಿ ಕೈಹಿಡಿದ ಮೇಲಂತೂ ತಮ್ಮ ಇಮೇಜ್ ಅನ್ನು ಹಾಗೆಯೇ ಉಳಿಸಿಕೊಂಡು ಬಂದಿರುವ ಈ ಬೆಡಗಿ ತಮ್ಮದೇ ಹೆಸರನ್ನು ಬಾಲಿವುಡ್‌ನಲ್ಲಿ ಶಾಶ್ವತವಾಗಿಸಿದ್ದಾರೆ. ಅವರು ನಟಿಸಿದ ಯಾವುದೇ ಚಿತ್ರ ಕೂಡ ಅಭಿಮಾನಿಗಳಿಗೆ ರಸದೌತಣವನ್ನು ನೀಡಿದ್ದು ಫುಲ್ ಪೈಸಾ ವಸೂಲ್ ಮಾಡಿದೆ.
ಈಗ ಸದ್ಯದಲ್ಲಿ ನಟಿ ಸೂಯಿ ದಾಗ್ ಚಿತ್ರದಲ್ಲಿ ಬ್ಯುಸಿಯಾಗಿದ್ದು ಸಪ್ಟೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more