Short News

ಗೇಲ್ ಇಂಡಿಯಾ ಲಿಮಿಟೆಡ್ ನೇಮಕಾತಿ... ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

ಗೇಲ್ ಇಂಡಿಯಾ ಲಿಮಿಟೆಡ್ ನೇಮಕಾತಿ... ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

ಗೇಲ್ ಇಂಡಿಯಾ ಲಿಮಿಟೆಡ್ ಮ್ಯಾನೇಜರ್ ಫಾರ್ ಮಾರ್ಕೇಟಿಂಗ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 9, 2018 ಕೊನೆಯ ದಿನಾಂಕ. ವಿದ್ಯಾರ್ಹತೆ ಸಿಎ ಓದಿರಬೇಕು. ಅರ್ಜಿ ಸಲ್ಲಿಸಲು https://careers.gail.co.in/sap/bc/webdynpro/sap/ywerec_005_home_page/# ಈ ಲಿಂಕ್ ಕ್ಲಿಕ್ ಮಾಡಿ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ. ಸೆ.7ರಂದು ನಡೆಯುವ ಸಂದರ್ಶನದಲ್ಲಿ ಅರ್ಜಿ ಹಾಗೂ ಇನ್ನಿತ್ತರ ದಾಖಲೆಗಳ ಜತೆ ನೇರವಾಗಿ ಭಾಗವಹಿಸಿ. ಸಂದರ್ಶನ ನಡೆಯುವ ಸ್ಥಳ GAIL(India)Limited GAIL Bhawan Plot No 73, Road no. 3, Sector - 15 CBD Belapur, Navi Mumbai - 400614 Maharashtra.
ಇಂದಿನ (ಸೆ.26) ದ್ವಾದಶ ರಾಶಿಗಳ ನಿತ್ಯ ಭವಿಷ್ಯ

ಇಂದಿನ (ಸೆ.26) ದ್ವಾದಶ ರಾಶಿಗಳ ನಿತ್ಯ ಭವಿಷ್ಯ

ಮೇಷ : ಖರ್ಚು-ವೆಚ್ಚಗಳು ಅಧಿಕವಾಗುವುದು. ವೃಷಭ : ಭೂ ಖರೀದಿ, ಮನೆ ನಿರ್ಮಾಣದಂತಹ ಕಾರ್ಯಗಳಿಗೆ ಸಕಾಲ.. ಮಿಥುನ: ಚಿಂತಿತ ಕಾರ್ಯಗಳಿಗೆ ಹಿರಿಯರ ಸಲಹೆ ಉಪಯುಕ್ತ. ಕಟಕ: ರಾಜಕೀಯ ವರ್ಗದವರಿಗೆ ಮುನ್ನಡೆ, ಆರೋಗ್ಯದಲ್ಲಿ ಸುಧಾರಣೆ. ಸಿಂಹ: ಸಾಂಸಾರಿಕ ನೆಮ್ಮದಿ ಇದ್ದರೂ ಕಿರಿಕಿರಿ ತಪ್ಪದು. ಕನ್ಯಾ: ದಾಂಪತ್ಯ ಯೋಗ ಅವಿವಾಹಿತರಿಗೆ ಅಚ್ಚರಿ ತಂದೀತು. ತುಲಾ: ಆದಾಯ ವರ್ಧನೆಗೆ ಹಲವಾರು ಅವಕಾಶಗಳು ದೊರಕಲಿವೆ. ವೃಶ್ಚಿಕ : ಸ್ವಾಭಿಮಾನ ಬದಿಗೊತ್ತಿ ಕಾರ್ಯಕ್ಕಿಳಿಯಿರಿ, ಆದಾಯದಲ್ಲಿ ತುಸು ಚೇತರಿಕೆ ಪಡೆಯಲಿದೆ.
ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಇರುವರೆಗೂ ದರ್ಶನ್​​​ ಗೆ ಏನೂ ಆಗಲ್ಲ: ನಟ ಶಿವಣ್ಣ

ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಇರುವರೆಗೂ ದರ್ಶನ್​​​ ಗೆ ಏನೂ ಆಗಲ್ಲ: ನಟ ಶಿವಣ್ಣ

ಕಾರು ಅಪಘಾತಕ್ಕೀಡಾಗಿ, ಮೈಸೂರಿನಲ್ಲಿ ಆಸ್ಪತ್ರೆ ಸೇರಿರುವ ನಟ ದರ್ಶನ್ ಅವರ ಆರೋಗ್ಯ ವಿಚಾರಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನಿಂದ ಆಗಮಿಸಿದ ನಟ ಶಿವಣ್ಣ ಆಸ್ಪತ್ರೆಯಲ್ಲಿ ದರ್ಶನ್ ಅವರನ್ನ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ನಾನು ದರ್ಶನ್ ಜತೆ ಮಾತಾಡಿದ್ದೇನೆ, ಆರೋಗ್ಯವಾಗಿದ್ದಾರೆ. ಯಾರೂ ಅತಂಕಪಡುವ ಅವಶ್ಯಕತೆಯಿಲ್ಲ.ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಇರುವರೆಗೂ ದರ್ಶನ್​​​ಗೆ ಏನೂ ಆಗುವುದಿಲ್ಲ ಎಂದರು. ಹಿರಿಯ ನಟ ದೇವರಾಜ್ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಮೊಬೈಲ್ ಮೂಲಕ ಅವರ ಜೊತೆ ಮಾತನಾಡಿದ್ದೇನೆ ಎಂದರು.
8 KAS ಅಧಿಕಾರಿಗಳ ವರ್ಗಾವಣೆ, ಎಸ್‌ಐ ಗಳ ವರ್ಗಾವಣೆಗೆ ತಡೆ

8 KAS ಅಧಿಕಾರಿಗಳ ವರ್ಗಾವಣೆ, ಎಸ್‌ಐ ಗಳ ವರ್ಗಾವಣೆಗೆ ತಡೆ

ಮೈತ್ರಿ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಇನ್ನೂ ಮುಗಿದಂತಿಲ್ಲ. ಇಂದು ರಾಜ್ಯ ಸರ್ಕಾರವು 8 ಕೆಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ಜೊತೆಗೆ, 141 ಸಬ್‌ ಇನ್ಸ್ಪೆಕ್ಟರ್‌ಗಳ ವರ್ಗಾವಣೆಯನ್ನೂ ತಡೆ ಹಿಡಿದಿದೆ. ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ತಕ್ಷಣದಿಂದಲೇ ಜಾರಿಗೆ ಬರಲಿದೆ. ಆದರೆ ನಿನ್ನೆಯಷ್ಟೆ ಹೊರಡಿಸಿದ್ದ 141 ಸಬ್‌ ಇನ್ಸ್ಪೆಕ್ಟರ್‌ಗಳ ವರ್ಗಾವಣೆ ಆದೇಶವನ್ನು ತಡೆ ಹಿಡಿಯಲಾಗಿದೆ. ಮೈತ್ರಿ ಸರ್ಕಾರದ ಕೆಲವು ಶಾಸಕರು ಎಸ್‌ಐ ವರ್ಗಾವಣೆಗೆ ವಿರೋಧ ಪಡಿಸಿದರು ಎಂಬ ಕಾರಣಕ್ಕೆ ವರ್ಗಾವಣೆಯನ್ನು ತಡೆಹಿಡಿಯಲಾಗಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more