Short News

ಮೇ 5 ರಂದು ನೀಟ್ ಪರೀಕ್ಷೆ ಸಾಧ್ಯತೆ!

ಮೇ 5 ರಂದು ನೀಟ್ ಪರೀಕ್ಷೆ ಸಾಧ್ಯತೆ!

ದಿ ಹೆಚ್‍ಆರ್‍ಡಿ ಮಿನಿಸ್ಟ್ರಿ ಇದೀಗ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಯನ್ನ ಪರಿಚಯಿಸುತ್ತಿದ್ದು, ನೀಟ್ ಹಾಗೂ ಜೆಇಇ ಪ್ರಮುಖ ಪರೀಕ್ಷೆಯನ್ನ ಇದು ಆಯೋಜಿಸುತ್ತದೆ. ಇದೀಗ ಎನ್‍ಟಿಎಯು ನೀಟ್ ಪರೀಕ್ಷೆಯನ್ನ ಮೇ 5, 2019ರಂದು ನಿಗಧಿಗೊಳಿಸಿದ್ದು, ನ.1 ರಿಂದ 30ರವರೆಗೆ ರಿಜಿಸ್ಟ್ರೇಶನ್ ಪ್ರಕ್ರಿಯೆ ನಡೆಯಲಿದೆ. ನೀಟ್ 2019 ಸಿಲೇಬಸ್ ಬದಲಾದುರ ಬಗ್ಗೆ ಯಾವುದೇ ಆಫೀಶಿಯಲ್ ನೋಟಿಸ್ ಇಲ್ಲ. ಇನ್ನು ನೀಟ್ ಪರೀಕ್ಷೆಯು 8 ಪ್ರಾಂತೀಯ ಭಾಷೆಗಳಲ್ಲಿ ನಡೆಯಲಿದೆ. ನೀಟ್ ಪರೀಕ್ಷೆಯನ್ನ ಮೆಡಿಕಲ್ ಮತ್ತು ಡೆಂಟಲ್ ಕಾಲೇಜುಗಳಲ್ಲಿ ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸಗಳಿಗೆ ನಡೆಸುವ ಪರೀಕ್ಷೆಯಾಗಿದೆ.
ನೆಗಳಗುಳಿಯಲ್ಲಿ ಕಲ್ಲಿನ ಲಾರಿಗಳಿಂದ ಹಾಳಾದ ರಸ್ತೆ: ರೊಚ್ಚಿಗೆದ್ದ ಗ್ರಾಮಸ್ಥರು

ನೆಗಳಗುಳಿಯಲ್ಲಿ ಕಲ್ಲಿನ ಲಾರಿಗಳಿಂದ ಹಾಳಾದ ರಸ್ತೆ: ರೊಚ್ಚಿಗೆದ್ದ ಗ್ರಾಮಸ್ಥರು

ಕಲ್ಲಿನ ಲಾರಿಗಳು ಓಡಾಡುವುದರಿಂದ ಮಂಗಳೂರಿನ ನೆಗಳಗುಳಿ ಗ್ರಾಮದಲ್ಲಿ ರಸ್ತೆ ಹಾಳಾಗಿದ್ದು ಸ್ಥಳೀಯರು ಪರಿತಪಿಸವಂತಾಗಿದೆ. ಈ ಸಂಬಂಧ ಲಾರಿಗ ಓಡಾಟ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ನೆಗಳಗುಳಿ ನಿವಾಸಿಗಳು ಅಳಿಕೆ ಗ್ರಾಮಪಂಚಾಯತ್ ಗೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಘನ ವಾಹನಗಳ ಸಂಚಾರದಿಂದ ನೆಗಳಗುಳಿ ರಸ್ತೆ ಹಾಳಾಗುತ್ತದ್ದು ,ದುರಸ್ತಿ ಬಳಿಕವೂ ಕಲ್ಲಿನ ಲಾರಿಗಳು ಓಡಾಟಕ್ಕೆ ಮುಂದಾಗಿರುವುದನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು. ಕೋಟೆತ್ತಡ್ಕದಲ್ಲಿರುವ ಅಳಿಕೆ ಗ್ರಾಮ ಪಂಚಾಯತಿ ನಿವೇಶನ ಸಮತಟ್ಟು ಮಾಡುವ ನೆಪದಲ್ಲಿ ಹಲವು ಲಾರಿಗಳು ನೆಗಳಗುಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದವು.
ಬಿಜೆಪಿ ಸರ್ಕಾರ ರಚನೆ ಮಾಡುವ ಹೊಣೆ ಯಡಿಯೂರಪ್ಪ ಹೆಗಲಿಗೆ

ಬಿಜೆಪಿ ಸರ್ಕಾರ ರಚನೆ ಮಾಡುವ ಹೊಣೆ ಯಡಿಯೂರಪ್ಪ ಹೆಗಲಿಗೆ

ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆ ಆಗಲಿದೆಯೇ?. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲಿದ್ದಾರೆಯೇ?. ಬಿಜೆಪಿ ಸರ್ಕಾರ ರಚನೆ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಶಾಸಕರು ಯಡಿಯೂರಪ್ಪ ಅವರಿಗೆ ನೀಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ವಿಶೇಷ ಸಭೆ ಬಳಿಕ ಬಿ.ಎಸ್.ಯಡಿಯೂರಪ್ಪ ಶಾಸಕರೊಂದಿಗೆ ರಹಸ್ಯ ಸಭೆ ನಡೆಸಿದರು. ಈ ಸಮಯದಲ್ಲಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ಕುರಿತು ಚರ್ಚೆಗಳು ನಡೆದಿವೆ. 'ಈಗ ಆಪರೇಷನ್ ಕಮಲಕ್ಕೆ ಕೈ ಹಾಕುವುದು ಬೇಡ, ಇದರ ಪರಿಣಾಮ ಲೋಕಸಭೆ ಚುನಾವಣೆಯ ಮೇಲೆ ಉಂಟಾಗಲಿದೆ' ಎಂದು ಕೆಲವು ಶಾಸಕರು ಅಭಿಪ್ರಾಯಪಟ್ಟರು.
ಲೋಕಸಭೆ ಚುನಾವಣೆ ತಯಾರಿ, ಬಿಜೆಪಿಯಿಂದ ಹಲವು ಕಾರ್ಯಕ್ರಮ

ಲೋಕಸಭೆ ಚುನಾವಣೆ ತಯಾರಿ, ಬಿಜೆಪಿಯಿಂದ ಹಲವು ಕಾರ್ಯಕ್ರಮ

2019ರ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕರ್ನಾಟಕ ಬಿಜೆಪಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ತಾಲೂಕು, ಜಿಲ್ಲಾ ಮಟ್ಟದ ಕಾರ್ಯಕ್ರಮದ ಮೂಲಕ ಜನರನ್ನು ತಲುಪಲಿದೆ. ಬೆಂಗಳೂರಿನಲ್ಲಿ ಬುಧವಾರ ನಡೆದ ಬಿಜೆಪಿ ವಿಶೇಷ ಸಭೆಯಲ್ಲಿ ಈ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗಿದೆ. ಸಭೆಯ ವಿವರಗಳನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರು ಮಾಧ್ಯಮಗಳಿಗೆ ನೀಡಿದ್ದಾರೆ. ಅ.2ರ ಗಾಂಧಿ ಜಯಂತಿ ದಿನದಿಂದು ರಾಜ್ಯದ ವಿವಿದೆಡೆ ಸ್ವಚ್ಛತಾ ಅಭಿಯಾನವನ್ನು ನಡೆಸಲಿದೆ. ಸೆ.25ರ ತನಕ ವಿವಿಧ ಸ್ಲಂಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಲಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more