Short News

LIVE: ರಾಜ್ಯಸಭೆ ಉಪಸಭಾಪತಿ ಚುನಾವಣೆಗೆ ಕ್ಷಣಗಣನೆ

LIVE: ರಾಜ್ಯಸಭೆ ಉಪಸಭಾಪತಿ ಚುನಾವಣೆಗೆ ಕ್ಷಣಗಣನೆ

ರಾಜ್ಯಸಭೆ ಉಪ ಸಭಾಪತಿಯ ಆಯ್ಕೆಯ ಸಲುವಾಗಿ ಇಂದು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಚುನಾವಣೆ ನಡೆಯಲಿದೆ. ಪಿ.ಜೆ.ಕುರಿಯನ್ ಅವರ ಅಧಿಕಾರಾವಧಿ ಜು.1 ರಂದು ಮುಕ್ತಾಯವಾಗಿರುವ ಕಾರಣ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಸಂಸದ ಬಿ.ಕೆ.ಹರಿಪ್ರಸಾದ್ ಅವರಿಗೆ ವಿಪಕ್ಷಗಳ ಬೆಂಬಲವಿದ್ದು, ಎನ್ ಡಿಎ ಅಭ್ಯರ್ಥಿ ಹರಿವಂಶ ನಾರಾಯಣ ಸಿಂಗ್ ಸ್ಪರ್ಧೆಯಲ್ಲಿದ್ದಾರೆ. ಎನ್ ಸಿಪಿ ಸಂಸದೆ ವಂದನಾ ಚವಾನ್ ಸಹ ಸ್ಪರ್ಧಿಸಿದ್ದು, ಅವರಿಗೆ ಶಿವಸೇನೆಯ ಬೆಂಬಲ ಸಿಕ್ಕುವ ಸಾಧ್ಯತೆ ಇದೆ. ಮುಂಗಾರು ಅಧಿವೇಶನ ನಾಳೆ(ಆಗಸ್ಟ್ 10) ಅಂತ್ಯವಾಗಲಿದ್ದು, ಅದಕ್ಕೂ ಮುನ್ನ ರಾಜ್ಯಸಭಾ ಉಪಸಭಾಪತಿ ಆಯ್ಕೆ ನಡೆಯಲಿದೆ.
ಕಳಪೆ ಗುಣಮಟ್ಟದ 'ಪವರ್ ಬ್ಯಾಂಕ್' ಬಳಸಿದರೆ ಏನಾಗುತ್ತದೆ ಗೊತ್ತಾ?

ಕಳಪೆ ಗುಣಮಟ್ಟದ 'ಪವರ್ ಬ್ಯಾಂಕ್' ಬಳಸಿದರೆ ಏನಾಗುತ್ತದೆ ಗೊತ್ತಾ?

ಸ್ಮಾರ್ಟ್‌ಫೋನ್‌ಗಳು ಹೆಚ್ಚು ಬ್ಯಾಟರಿಯನ್ನು ಸ್ವಾಹ ಮಾಡುವುದರಿಂದ ಎಲ್ಲರಿಗೂ ಒಂದೊಂದು ಪವರ್‌ಬ್ಯಾಂಕ್ ಅನ್ನು ಖರೀದಿಸುವ ಸೌಭಾಗ್ಯ ಒದಗಿಬಂದಿರುತ್ತದೆ. ಮನೆಯಲ್ಲಿಯೇ ಮೊಬೈಲ್ ಬಳಕೆಯ ವೇಳೆ, ಪ್ರಯಾಣದ ವೇಳೆ, ಮೊಬೈಲ್ ಚಾರ್ಜ್ ಮಾಡಲು ಪವರ್ ಬ್ಯಾಂಕ್ ಅತ್ಯಗತ್ಯ ಎಂಬುದು ಎಲ್ಲರಿಗೂ ಅನಿಸಿರುವುದು ಸಹ ಪವರ್ ಬ್ಯಾಂಕ್ ಅಗತ್ಯತೆಯನ್ನು ತಿಳಿಸುತ್ತದೆ.ಮೇಲ್ನೋಟಕ್ಕೆ ಪವರ್ ಬ್ಯಾಂಕ್ ಬಳಕೆ ಬಹಳ ಸುಲಭವಾಗಿ ಕಂಡರೂ ಸಹ ನಾವು ಬಳಸುವ ಪವರ್ ಬ್ಯಾಂಕ್ ಸುರಕ್ಷಿತೆ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ.

ನಂಜನಗೂಡಿನ ಕಪಿಲೆಯಲ್ಲಿ ಈಜಲು ಹೋದವನು ಕಣ್ಮರೆ

ನಂಜನಗೂಡಿನ ಕಪಿಲೆಯಲ್ಲಿ ಈಜಲು ಹೋದವನು ಕಣ್ಮರೆ

ಈಜಲು ಹೋದ ಯುವಕನೊಬ್ಬ ಮರಳಿ ದಡ ಸೇರದೆ ಕಣ್ಮರೆಯಾಗಿರುವ ಘಟನೆ ಕಪಿಲ ನದಿಯಲ್ಲಿ ನಡೆದಿದೆ.

ನಂಜನಗೂಡಿನ ಕನಕ ನಗರ ಬಡಾವಣೆಯ ನಿವಾಸಿ ದಿ.ನಂಜಪ್ಪರವರ ಪುತ್ರ ಸಿದ್ದರಾಜು (23) ಈಜಲು ಹೋಗಿ ಕಣ್ಮರೆಯಾಗಿರುವ ಯುವಕ. ಈತ ನಂಜನಗೂಡಿನ ದೇವರಾಜ ಅರಸು ಸೇತುವೆ ಬಳಿಯಿಂದ ಈಜಲು ಹೋಗಿ ಕಪಿಲಾ ನದಿಯ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ.

ಕಾರ್ಖಾನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿದ್ದರಾಜು ಭಾನುವಾರ ಕೆಲಸಕ್ಕೆ ರಜೆ ಇದ್ದ ಕಾರಣದಿಂದ ತನ್ನ ಅಕ್ಕ ಮಂಜುಳಾಳನ್ನು ಆಸ್ಪತ್ರೆಗೆ ತೋರಿಸಿ ಮನೆಗೆ ಬಿಟ್ಟು ಕಪಿಲಾ ನದಿ

ಜಿಯೋ ಗಿಗಾಫೈಬರ್‌ಗೆ ಟಾಂಗ್‌ ನೀಡಲು ಏರ್‌ಟೆಲ್ ರೆಡಿ..!

ಜಿಯೋ ಗಿಗಾಫೈಬರ್‌ಗೆ ಟಾಂಗ್‌ ನೀಡಲು ಏರ್‌ಟೆಲ್ ರೆಡಿ..!

ಏರ್‌ಟೆಲ್ ಮಾತ್ರ ಜಿಯೋಗೆ ಎದೆಯೊಡ್ಡಲು ಸಿದ್ಧವಾಗಿದ್ದು, ಜಿಯೋ ಗಿಗಾಫೈಬರ್‌ಗೆ ಟಾಂಗ್ ನೀಡಲು ರೆಡಿಯಾಗಿದೆ. ಹೌದು, ಏರ್‌ಟೆಲ್‌ ತನ್ನ ಬ್ರಾಡ್‌ಬ್ಯಾಂಡ್‌ ಗ್ರಾಹಕರಿಗೆ ವಿಧಿಸಿದ್ದ ಡೇಟಾ ಮಿತಿ ನೀತಿಯನ್ನು 20 ಮಾರುಕಟ್ಟೆಗಳಲ್ಲಿ ರದ್ಧುಪಡಿಸಿದ್ದು, ಆ ಪ್ಲಾನ್‌ಗಳನ್ನು ಅನ್‌ಲಿಮಿಟೆಡ್‌ ಡೇಟಾ ಪ್ಲಾನ್‌ಗಳನ್ನಾಗಿ ಪರಿವರ್ತಿಸಿದ್ದು, ಜಿಯೋದ ಮುಂದಿನ ಗಿಗಾಫೈಬರ್‌ಗೆ ಈಗಿನಿಂದಲೇ ಏರ್‌ಟೆಲ್‌ ಸ್ಪರ್ಧೆಯೊಡ್ಡುತ್ತಿದೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more