Short News

18 ವರ್ಷದಿಂದ ಇರುವ  ‘ಬೆಸ್ಟ್​ ​ಫ್ರೆಂಡ್​’ ಅನ್ನು ಪರಿಚಯಿಸಿದ ಮೋಹಕ ತಾರೆ ರಮ್ಯಾ

18 ವರ್ಷದಿಂದ ಇರುವ ‘ಬೆಸ್ಟ್​ ​ಫ್ರೆಂಡ್​’ ಅನ್ನು ಪರಿಚಯಿಸಿದ ಮೋಹಕ ತಾರೆ ರಮ್ಯಾ

ಎಐಸಿಸಿ ಸೋಷಿಯಲ್‌ ಮೀಡಿಯ ವಿಭಾಗದ ಮುಖ್ಯಸ್ಥೆ ನಟಿ ರಮ್ಯಾ ಅವರಿಗೆ ಮಾಜಿ ಸಚಿವ,ಕಾಂಗ್ರೆಸ್‌ ಮುಖಂಡ ಮಿಲಿಂದ್ ದಿಯೋರಾ ಬಹು ಕಾಲದ ಗೆಳೆಯ. ಮುಂಬೈ ಮೂಲದವರಾದ ಮಿಲಿಂದ್​, ಕಾಂಗ್ರೆಸ್ ಪಕ್ಷದ ಮುಖಂಡ. ರಮ್ಯಾ ಸಕ್ರಿಯ ರಾಜಕಾರಣಕ್ಕೆ ಬರುವ ಮೊದಲೇ ಮಿಲಿಂದ್ ಸ್ನೇಹಿತರಾಗಿದ್ದರು. ಇವರಿಬ್ಬರ ಗೆಳೆತನಕ್ಕೆ 18 ವರ್ಷವಾಗಿದ್ದು, ಇದನ್ನು ರಮ್ಯಾ ಟ್ವೀಟ್ ಮಾಡಿ ತಿಳಿಸಿದ್ದಾರೆ.ಇದಕ್ಕೆ ಉತ್ತರವಾಗಿ ಮಿಲಿಂದ್ ‘ಇನ್ನಷ್ಟು ವರ್ಷಗಳು ಹೀಗೆ ಇರೋಣ' ಎಂದು ರಿಟ್ವೀಟ್ ಮಾಡಿದ್ದಾರೆ.
ಈ ರಾಶಿಯವರು ಕಷ್ಟಪಡದೇ-ಸುಖ ಭೋಗಗಳನ್ನು ಹೊಂದಲು ಇಷ್ಟಪಡುತ್ತಾರೆ

ಈ ರಾಶಿಯವರು ಕಷ್ಟಪಡದೇ-ಸುಖ ಭೋಗಗಳನ್ನು ಹೊಂದಲು ಇಷ್ಟಪಡುತ್ತಾರೆ

ತುಲಾ ರಾಶಿಯ ವ್ಯಕ್ತಿಗಳು ಯಾವುದೇ ವಿಚಾರಗಳ ಕುರಿತಾಗಿಯೂ ಒಮ್ಮೆಲೇ ನಿರ್ಧಾರವನ್ನು ಕೈಗೊಳ್ಳುವುದಿಲ್ಲ. ಇವರು ವಿಷಯಗಳನ್ನು ಅಥವಾ ಸನ್ನಿವೇಶಗಳನ್ನು ಕೆಟ್ಟದಾಗಿಸಲು ಬಯಸುವುದಿಲ್ಲ. ಇವರು ಸಾಮಾನ್ಯವಾಗಿ ಸಂಘರ್ಷಗಳನ್ನು ದ್ವೇಷಿಸುತ್ತಾರೆ. ಕೆಟ್ಟ ಸಂದರ್ಭದಲ್ಲಿ ನಾವು ತೆಗೆದುಕೊಳ್ಳುವ ಕೆಲವು ತೀರ್ಮಾನಗಳು ಅನುಚಿತವಾಗಿರುತ್ತವೆ. ಅವುಗಳಿಂದ ಯಾವುದೇ ರೀತಿಯ ಉತ್ತಮ ಫಲಿತಾಂಶ ದೊರೆಯದು ಎಂದು ಭಾವಿಸುತ್ತಾರೆ. ಇನ್ನು ಮೀನ ರಾಶಿಯವರು ಅತಿಯಾದ ಗುಟ್ಟು ಹಾಗೂ ಸೋಲಿಸುವ ಗುಣವನ್ನು ಇಷ್ಟಪಡರು. ಈ ವಿಚಾರಗಳು ಹೆಚ್ಚು ಒತ್ತಡವನ್ನುಂಟುಮಾಡುತ್ತವೆ. ಇವರು ಹೆಚ್ಚು ಒತ್ತಡವನ್ನು ಇಷ್ಟಪಡದ ಜನರು ಎಂದು ಹೇಳಲಾಗುವುದು.

ಬಿಎಸ್​ವೈ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಶಾಸಕರೊಂದಿಗೆ ನೂಕಾಟ-ತಳ್ಳಾಟ

ಬಿಎಸ್​ವೈ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಶಾಸಕರೊಂದಿಗೆ ನೂಕಾಟ-ತಳ್ಳಾಟ

ಕಾಂಗ್ರೆಸ್‌ನ ಕಾರ್ಯಕರ್ತರು ಹಠಾತ್ತನೆ ಇಂದು ಯಡಿಯೂರಪ್ಪ ಅವರ ಡಾಲರ್ಸ್‌ ಕಾಲೋನಿಯ ನಿವಾಸದ ಮುಂದೆ ಪ್ರತಿಭಟನೆ ಮಾಡಿದರು. ಹಲವು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಯಡಿಯೂರಪ್ಪ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಯಡಿಯೂರಪ್ಪ ಅವರ ನಿವಾಸಕ್ಕೆ ನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಅವರನ್ನು ತಡೆಯುವ ಯತ್ನ ಮಾಡಿದರು. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರ ನಿವಾಸಲ್ಲಿದ್ದ ಬಿಜೆಪಿಯ ಶಾಸಕರಾದ ರೇಣುಕಾಚಾರ್ಯ, ವಿಶ್ವನಾಥ, ರವಿಕುಮಾರ್ ಹಾಗೂ ಇನ್ನು ಕೆಲವರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದ ನಡೆಸಿದರು. ಈ ಸಂದರ್ಭದಲ್ಲಿ ನೂಕಾಟ-ತಳ್ಳಾಟ ಸಹ ನಡೆಯಿತು.
8.5 ಕೋಟಿಗೆ ಕಿಂಗ್ ಫಿಶರ್ ನ ಎರಡು ಹೆಲಿಕಾಪ್ಟರ್ ಹರಾಜು

8.5 ಕೋಟಿಗೆ ಕಿಂಗ್ ಫಿಶರ್ ನ ಎರಡು ಹೆಲಿಕಾಪ್ಟರ್ ಹರಾಜು

  • ಕಿಂಗ್ ಫಿಶರ್ ಏರ್ಲೈನ್ಸ್ ಸಂಸ್ಥೆ ತನ್ನ ಎರಡು ಹೆಲಿಕಾಪ್ಟರ್ ಗಳನ್ನು 8.5 ಕೋಟಿ ರೂಪಾಯಿಗಳಿಗೆ ಹರಾಜು ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.
  • ವಿಜಯ ಮಲ್ಯ ಮಾಲೀಕತ್ವದ ಕಿಂಗ್ಫಿಷರ್ ಏರ್ಲೈನ್ಸ್ ನ ಎರಡು ಏರ್ಬಸ್ ಹೆಲಿಕಾಪ್ಟರ್ ಗಳನ್ನು ಹರಾಜಿಗೆ ಇಡಲಾಗಿತ್ತು. ವಿಜಯ ಮಲ್ಯ ಪಾವತಿಸಬೇಕಿದ್ದ ಸಾಲದಾತರ ಬಾಕಿ ಮೊತ್ತವನ್ನು ಮರುಪಾವತಿಸಲು ಈ ಹರಾಜು ಪ್ರಕ್ರಿಯೆಗೆ ಮುಂದಾಗಿದೆ.
  • ಬುಧವಾರ ರೂ. 8.5 ಕೋಟಿಗಳಷ್ಟು ಹಣಕ್ಕಾಗಿ ಎರಡು ಹೆಲಿಕಾಪ್ಟರ್ ಗಳು ಹರಾಜು ಮಾಡಲಾಗಿದೆಯೆಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more