Short News

ಉನ್ನಾವೋ ಪ್ರಕರಣದಲ್ಲಿ ಮೋದಿ ಹೆಸರು ತಂದ ರಾಹುಲ್, ಸ್ವಾಮಿಯಿಂದ ತರಾಟೆ

ಉನ್ನಾವೋ ಪ್ರಕರಣದಲ್ಲಿ ಮೋದಿ ಹೆಸರು ತಂದ ರಾಹುಲ್, ಸ್ವಾಮಿಯಿಂದ ತರಾಟೆ

ಉನ್ನಾವೋ ಅತ್ಯಾಚಾರ ಪ್ರಕರಣದ ಸಾಕ್ಷಿಯೊಬ್ಬರು ಮೃತರಾದ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯನ್ನು ದೂರಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜರ್ಮನಿಯಲ್ಲಿ ಪ್ರವಾಸದಲ್ಲಿದ್ದ ರಾಹುಲ್ ಬಿಜೆಪಿ ಶಾಸಕ ಕುಲದೀಪ್ ಸೇನ್ಗಾರ್ ಆರೋಪಿಯಾಗಿರುವ ಉನ್ನಾವೋ ಅತ್ಯಾಚಾರ ಮತ್ತು ಸಾಕ್ಷಿಯ ಸಾವು ಪ್ರಕರಣದಲ್ಲಿ ಯಾವುದೋ ಪಿತೂರಿಯವ ವಾಸನೆ ಬರುತ್ತಿಲ್ಲವೇ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಸ್ವಾಮಿ ರಾಹುಲ್ ಗಾಂಧಿ ಅವರು ವಿಶ್ವಮಟ್ಟದಲ್ಲಿ ಭಾರತದ ಪ್ರಧಾನಿ ಮೋದಿ ಅವರ ಮಾನ ಕಳೆಯುತ್ತಿದ್ದಾರೆ. ಇದು ಸರಿಯಲ್ಲ ಎಂದಿದ್ದಾರೆ.
ಕೇಂದ್ರ ಲೋಕಾ ಸೇವಾ ಆಯೋಗದಲ್ಲಿ ಅಡ್ಮಿನಿಸ್ಟ್ರೇಟೀವ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

ಕೇಂದ್ರ ಲೋಕಾ ಸೇವಾ ಆಯೋಗದಲ್ಲಿ ಅಡ್ಮಿನಿಸ್ಟ್ರೇಟೀವ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

ಕೇಂದ್ರ ಲೋಕಾ ಸೇವಾ ಆಯೋಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಡ್ಮಿನಿಸ್ಟ್ರೇಟೀವ್ ಆಫೀಸರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 11, 2018 ಕೊನೆಯ ದಿನಾಂಕ. ಸಂಬಂಧಪಟ್ಟ ಫೀಲ್ಡ್‌ನಲ್ಲಿ ಪದವಿ ಮಾಡಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಹಾಗೇ ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು. ಹುದ್ದೆ ಬಗೆಗಿನ ಹೆಚ್ಚಿನ ಮಾಹಿತಿ ಮತ್ತು ಹುದ್ದೆಗೆ ಅರ್ಜಿ ಸಲ್ಲಿಸಲು https://upsconline.nic.in/ ಗೆ ಭೇಟಿ ನೀಡಿ.
ಆಟೋ ಕ್ರಾಸ್ ರೇಸ್ ನಲ್ಲಿ ಧೂಳೆಬ್ಬಿಸಲು ರೆಡಿಯಾಗುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್

ಆಟೋ ಕ್ರಾಸ್ ರೇಸ್ ನಲ್ಲಿ ಧೂಳೆಬ್ಬಿಸಲು ರೆಡಿಯಾಗುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್

ಅಕ್ಟೋಬರ್ 10 ರಿಂದ 19ರವರೆಗೆ ವೈಭವೋಪೇತವಾಗಿ ನಡೆಯಲಿರುವ ಮೈಸೂರು ದಸರಾದಲ್ಲಿ ಈ ಬಾರಿ ಹಲವು ಅಚ್ಚರಿಗಳು ಕಾದಿವೆ. ಪ್ರತಿ ವರುಷ ಕೇವಲ ಯುವ ದಸರಾದಲ್ಲಿ ಭಾಗಿಯಾಗಿ ಯುವಕರನ್ನು ಮೋಡಿ ಮಾಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಬಾರಿ ಆಟೋ ಕ್ರಾಸ್ ರೇಸ್ ಗೆ ಮೆರಗು ನೀಡಲಿದ್ದಾರೆ. ಅಕ್ಟೋಬರ್ 7 ರಂದು ಆಟೋ ಟ್ರ್ಯಾಕ್ ರೇಸ್ ನಡೆಯಲಿದ್ದು, ಅಂದು ರೇಸ್ ನಲ್ಲಿ ಧೂಳೆಬ್ಬಿಸಲು ದರ್ಶನ್ ಈಗಾಗಲೇ ಪೂರ್ವ ತಯಾರಿ ನಡೆಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮೈಸೂರಿನ ಲಲಿತ ಮಹಲ್ ಬಳಿ ದರ್ಶನ್ ಆಟೋ ಕ್ರಾಸ್ ರೇಸ್ ನಡೆಸಿದ್ದ ಫೋಟೋಗಳು ವೈರಲ್ ಆಗಿದ್ದವು. ಆದರೆ ಏಕೆಂದು ಯಾರಿಗೂ ತಿಳಿದಿರಲಿಲ್ಲ.
ಪಿಒಪಿ ಗಣೇಶ ಮೂರ್ತಿಯನ್ನೇ ಗೊಬ್ಬರವನ್ನಾಗಿ ಬದಲಿಸಿದ ಬೆಳಗಾವಿ ಯುವಕರು

ಪಿಒಪಿ ಗಣೇಶ ಮೂರ್ತಿಯನ್ನೇ ಗೊಬ್ಬರವನ್ನಾಗಿ ಬದಲಿಸಿದ ಬೆಳಗಾವಿ ಯುವಕರು

ಬೆಳಗಾವಿಯ ನಾಗರಗಾಳಿಯಲ್ಲಿ ನೀರಿಗೆ ಬರ. ಇಂಥಹದರಲ್ಲಿ ಅಲ್ಲಿ ಗಣೇಶ ವಿಸರ್ಜನೆ ಮಾಡುವು ಹೇಗೆ ಎಂದು ತಲೆ ಕೆಡಿಸಿಕೊಂಡಾಗ, ಅಲ್ಲಿಯ ದೀಪ್ ದೇವನ್ ಹಾಗೂ ಅಮೃತ್ ಗೌರವ್ ಎಂಬ ಇಬ್ಬರು ಯುವಕರು ಮುಂಬೈನಲ್ಲಿ ಅನುಸರಿಸುವ ಪದ್ಧತಿ ಬಗ್ಗೆ ತಿಳಿದು ಕೊಂಡರು. ಪಿಒಪಿ ಗಣೇಶಗಳನ್ನು ಅಮೋನಿಯಂ ಬೈಕಾರ್ಬೋನೆಟ್ ಸೇರಿಸಿದ ನೀರಿನಲ್ಲಿ ವಿಸರ್ಜಿಸುವ ಮಾಹಿತಿ ಪಡೆದ ಅವರು ಅದನ್ನು ಊರಿನಲ್ಲಿ ಅನುಸರಿಸಿ, ಪಿಒಪಿ ಗಣೇಶಗಳನ್ನು ಗೊಬ್ಬರವಾಗಿ ತಯಾರಿಸುವ ವಿಧಾನ ಪರಿಚಯಿಸಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಇದೇ ರೀತಿಯ ಹೆಜ್ಜೆಗಳನ್ನು ಇರಿಸುವ ಮೂಲಕ ಪಿಒಪಿ ಮೂರ್ತಿಯನ್ನು ಗೊಬ್ಬರವನ್ನಾಗಿ ಬದಲಿಸುವ ನಿರ್ಧಾರಕ್ಕೆ ಬಂದಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more