Short News

ಮರಾಠಾ ಮೀಸಲಾತಿಗೆ ಆಗ್ರಹಿಸಿ ಇಂದು ಮಹಾರಾಷ್ಟ್ರ ಬಂದ್

ಮರಾಠಾ ಮೀಸಲಾತಿಗೆ ಆಗ್ರಹಿಸಿ ಇಂದು ಮಹಾರಾಷ್ಟ್ರ ಬಂದ್

ಮಹಾರಾಷ್ಟ್ರದ ಪ್ರಮುಖ ಮರಾಠಾ ಸಂಘಟನೆಯಾದ ಸಕಲ ಮರಾಠಾ ಸಮಾಜವು ಇಂದು ಮಹಾರಾಷ್ಟ್ರ ಬಂದ್ ಗೆ ಕರೆ ನೀಡಿದೆ. ಬಂದ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯದಾದ್ಯಂತ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ. ಮರಾಠಿಗರಿಗೆ ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ನೀಡುವಂತೆ ಕೋರಿ ಇತ್ತೀಚೆಗಷ್ಟೇ, ಮಹಾರಾಷ್ಟ್ರದಾದ್ಯಂತ ಪ್ರತಿಭಟನೆ ಭುಗಿಲೆದ್ದಿತ್ತು. ಅದರದೇ ಮುಂದುವರಿದ ರೂಪ ಎಂಬಂತೆ, ಮರಾಠಿಗರಿಗೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಇಂದು ಬಂದ್ ನಡೆಸಲಾಗುತ್ತಿದೆ. ಬಂದ್ ಗೆ ಸಕಲ ಮರಾಠ ಸಮಾಜದೊಂದಿಗೆ ವಿವಿಧ ಮರಾಠಾ ಸಂಘಟನೆಗಳು ಬೆಂಬಲ ನೀಡಿವೆ.
ಸ್ವಾತಂತ್ರ್ಯೋತ್ಸವ ದಿನಾಚರಣೆ : 30 ಭಾರತೀಯ ಕೈದಿಗಳನ್ನು ಬಿಡುಗಡೆಗೊಳಿಸುತ್ತಿರುವ ಪಾಕ್

ಸ್ವಾತಂತ್ರ್ಯೋತ್ಸವ ದಿನಾಚರಣೆ : 30 ಭಾರತೀಯ ಕೈದಿಗಳನ್ನು ಬಿಡುಗಡೆಗೊಳಿಸುತ್ತಿರುವ ಪಾಕ್

ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನಲೆ ಹಾಗೂ ಮಾನವೀಯತೆ ಆಧಾರದ ಮೇಲೆ ಪಾಕ್​ 30 ಭಾರತೀಯ ಕೈದಿಗಳನ್ನ ಆಗಸ್ಟ್​ 14 ರಂದು ಬಿಡುಗಡೆ ಮಾಡಲು ತೀರ್ಮಾನಿಸಿದೆ. ಪಾಕಿಸ್ತಾನದ ವಿದೇಶಾಂಗ ಸಚಿವರು ಈ ಮಾಹಿತಿಯನ್ನು ನೀಡಿದ್ದಾರೆ. ಬಿಡುಗಡೆಗೊಳ್ಳುತ್ತಿರುವ 30 ಕೈದಿಗಳ ಪೈಕಿ 27 ಕೈದಿಗಳು ಮೀನುಗಾರರಾಗಿದ್ದಾರೆ. ಮಾನವೀಯ ವಿಷಯಗಳನ್ನ ನಾವು ರಾಜಕೀಯಕರಣಗೊಳಿಸಲು ಇಷ್ಟ ಪಡಲ್ಲ, ಹಾಗಾಗಿ ನಾವು 30 ಜನರನ್ನ ಬಂಧಮುಕ್ತಗೊಳಿಸುತ್ತಿದ್ದೇವೆ ಎಂದಿದ್ದಾರೆ.
ಮುಸ್ಲಿಮರು ಕಡ್ಡಾಯವಾಗಿ 'ಭಾರತ್ ಮಾತಾ ಕೀ ಜೈ' ಎನ್ನಿ: ರಿಜ್ವಿ

ಮುಸ್ಲಿಮರು ಕಡ್ಡಾಯವಾಗಿ 'ಭಾರತ್ ಮಾತಾ ಕೀ ಜೈ' ಎನ್ನಿ: ರಿಜ್ವಿ

ಮುಸ್ಲಿಮರು ಕಡ್ಡಾಯವಾಗಿ ಭಾರತ್ ಮಾತಾ ಕೀ ಜೈ ಎಂದು ಜೈಕಾರ ಹಾಕಿ. ಇಲ್ಲವೆಂದರೆ ಪರಿಣಾಮ ಎದುರಿಸಿ ಎಂದು ಉತ್ತರ ಪ್ರದೇಶ ಶಿಯಾ ವಕ್ಫ್ ಬೋರ್ಡ್ ಹೇಳಿದೆ. ಸ್ವಾತಂತ್ರ್ಯ ದಿನದಂದು ಪ್ರತಿಯೊಬ್ಬರೂ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ಕೂಗಬೇಕು. ರಾಷ್ಟ್ರಗೀತೆಗೆ ದನಿಗೂಡಿಸಿ, ನಂತರ ಕೂಗುವ ಭಾರತ್ ಮಾತಾ ಕೀ ಜೈ ಘೋಷಣೆಗೂ ಧನಿಗೂಡಿಸಿ ಎಂದು ಶಿಯಾ ವಕ್ಫ್ ಬೋರ್ಡ್ ಚೇರ್ ಮನ್ ವಾಸೀಮ್ ರಿಜ್ವಿ ಹೇಳಿದ್ದಾರೆ. "ಪ್ರತಿಯೊಬ್ಬರೂ ಈ ಘೋಷಣೆ ಕೂಗಬೇಕು ಎಂಬುದು ಶಿಯಾ ವಕ್ಫ್ ಬೋರ್ಡಿನ ಆಜ್ಞೆಯಾಗಿದ್ದು, ಈ ಆಜ್ಞೆಯನ್ನು ಯಾರಾದರೂ ಮುರಿದರೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು" ಎಂದು ರಿಜ್ವಿ ಹೇಳಿದ್ದಾರೆ.
ಬೆಂಗಳೂರಿನಿಂದ ಏರ್ ಶೋ ಕಸಿಯಬೇಡಿ: ಹಸ್ತಾಕ್ಷರ ಅಭಿಯಾನ

ಬೆಂಗಳೂರಿನಿಂದ ಏರ್ ಶೋ ಕಸಿಯಬೇಡಿ: ಹಸ್ತಾಕ್ಷರ ಅಭಿಯಾನ

ಏರ್‌ ಶೋ ಬೆಂಗಳೂರಿನಲ್ಲಿಯೇ ಮುಂದುವರೆಯಬೇಕು ಎಂದು ಒತ್ತಾಯಿಸಿ ಎನ್‌ಎಸ್‌ಯುಐ ಸಂಘಟನೆ ಹಸ್ತಾಕ್ಷರ ಅಭಿಯಾನವನ್ನು ಸೋಮವಾರ ಬೆಳಗ್ಗೆ ಹಮ್ಮಿಕೊಂಡಿತ್ತು. ಬೆಂಗಳೂರಲ್ಲಿ ಕಳೆದ 22 ವರ್ಷಗಳಿಂದ ನಡೆಯುತ್ತಿದ್ದ ಏರ್‌ ಶೋವನ್ನು ಲಕ್ನೋಗೆ ಸ್ಥಳಾಂತರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಎನ್‌ಎಸ್‌ಯುಐ ಹಸ್ತಾಕ್ಷರ ಅಭಿಯಾನ ಏರ್ಪಡಿಸಿತ್ತು. ಬೆಂಗಳೂರಿನಲ್ಲಿಯೇ ಏರ್‌ ಶೋ ನಡೆಯಬೇಕು ಎಂದು ಇಚ್ಛಿಸುವವರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದಾಗಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more