Short News

ರಾಜ್ಯಸಭೆಯಲ್ಲಿಂದು ತ್ರಿವಳಿ ತಲಾಖ್ ಮಸೂದೆ ಮಂಡನೆ ನಿರೀಕ್ಷೆ

ರಾಜ್ಯಸಭೆಯಲ್ಲಿಂದು ತ್ರಿವಳಿ ತಲಾಖ್ ಮಸೂದೆ ಮಂಡನೆ ನಿರೀಕ್ಷೆ

ತ್ರಿವಳಿ ತಲಾಖ್ ತಿದ್ದುಪಡೆ ಮಸೂದೆಗೆ ಕೇಮದ್ರ ಸಂಪುಟ ಒಪ್ಪಿಗೆ ನೀಡಿದ ಮರುದಿನ, ಅಂದರೆ ಇಂದು ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆಯಾಗಲಿದೆ. ಕಳೆದ ಡಿಸೆಂಬರ್ 29 ರಂದು ಲೋಕಸಭೆಯು ತ್ರಿವಳಿ ತಲಾಖ್ ಮಸೂದೆಯನ್ನು ಮಂಡಿಸಿತ್ತು. ಇದರ ಪ್ರಕಾರ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಅಥವಾ ಮತ್ತಾವುದೇ ಮಾಧ್ಯಮದ ಮೂಲಕ ಮೌಕಿಕ ಅಥವಾ ಲಿಕಿತವಾಗಿ ಮುಸ್ಲಿಂ ಪತಿ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡುವುದನ್ನು ಅಸಿಂಧು ಎಂಮದು ಘೋಷಿಸಲಾಗಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ವಿರೋಧಿಸಿದ್ದರೆ, ಬಹುಪಾಲು ಜನ ಸ್ವಾಗತಿಸಿದ್ದರು.
ಆಗಸ್ಟ್ 20ರವರೆಗೆ ಶಿರಾಡಿ ಘಾಟ್ ಸಂಚಾರ ಸಂಪೂರ್ಣ ಬಂದ್

ಆಗಸ್ಟ್ 20ರವರೆಗೆ ಶಿರಾಡಿ ಘಾಟ್ ಸಂಚಾರ ಸಂಪೂರ್ಣ ಬಂದ್

ವಿಪರೀತ ಮಳೆಯಿಂದ ಗುಡ್ಡ ಹಾಗೂ ರಸ್ತೆ ಕುಸಿತ ಉಂಟಾಗುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆಗಸ್ಟ್ 20ರವರೆಗೂ ಶಿರಾಡಿ ಘಾಟ್ ಮಾರ್ಗದಲ್ಲಿನ ಸಂಚಾರವನ್ನು ಬಂದ್ ಮಾಡಿದೆ.

ಅಲ್ಲದೆ, ಭಾರಿ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸೀಸ್ ವಾಹನಗಳು, ಎಲ್ಲ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ಓಡಾಟವನ್ನು ಆಗಸ್ಟ್ 25ರವರೆಗೂ ನಿಷೇಧಿಸಿದೆ.

ಸಕಲೇಶಪುರ ಉಪವಿಭಾಗದ ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿ ಘಾಟ್ ಭಾಗದ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಧನಂಜಯ್-ಸೂರಿ ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತಿಬ್ಬರು ನಟಿಯರು

ಧನಂಜಯ್-ಸೂರಿ ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತಿಬ್ಬರು ನಟಿಯರು

'ಟಗರು' ಚಿತ್ರದ ನಂತರ ನಿರ್ದೇಶಕ ಸೂರಿ ಮತ್ತು ಡಾಲಿ ಧನಂಜಯ್ ಜೋಡಿಯಲ್ಲಿ ಇನ್ನೊಂದು ಸಿನಿಮಾ ಬರ್ತಿದೆ. ಈ ಚಿತ್ರಕ್ಕೆ 'ಪಾಪ್ ಕಾರ್ನ್ ಮಂಕಿ ಟೈಗರ್' ಎಂದು ಹೆಸರಿಡಲಾಗಿದೆ. ಧನಂಜಯ್ ನಾಯಕನಾಗಿದ್ದು, ನಿವೇದಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ, ಮತ್ತಿಬ್ಬರು ಹೊಸ ನಟಿಯರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಬಹಿರಂಗವಾಗಿದೆ. ಶ್ರೀನಿವಾಸ ಎಂಬ ಪಾತ್ರದಲ್ಲಿ ಧನಂಜಯ್ ಹಾಗೂ ದೇವಿಕಾ ಪಾತ್ರದಲ್ಲಿ ನಿವೇದಿತಾ ಬಣ್ಣ ಹಚ್ಚಲಿದ್ದು, ಸಪ್ತಮಿ ಹಾಗೂ ಅಮೃತಾ ಎಂಬ ನಟಿಯರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗಿರಿಜಾ ಮತ್ತು ನಂದಿನಿ ಎಂಬ ಪಾತ್ರಗಳನ್ನ ಇವರಿಬ್ಬರು ಪೋಷಿಸಲಿದ್ದಾರೆ.
ದೇವರ ನಾಡು ಕೇರಳದಲ್ಲಿ ನಿಲ್ಲದ ಮಹಾಮಳೆ: 57 ಜನ ಸಾವು,  ಎಲ್ಲಾ ಜಿಲ್ಲೆಗಳಿಗೂ ರೆಡ್ ಅಲರ್ಟ್ ಘೋಷಣೆ !

ದೇವರ ನಾಡು ಕೇರಳದಲ್ಲಿ ನಿಲ್ಲದ ಮಹಾಮಳೆ: 57 ಜನ ಸಾವು, ಎಲ್ಲಾ ಜಿಲ್ಲೆಗಳಿಗೂ ರೆಡ್ ಅಲರ್ಟ್ ಘೋಷಣೆ !

ದೇವರನಾಡು ಕೇರಳದಲ್ಲಿ ಹಿಂದೆಂದೂ ಕಾಣದ ಶತಮಾನದ ಮಳೆಯಾಗುತ್ತಿದ್ದು, ವರುಣ ತಣ್ಣಗಾಗುತ್ತಿರುವ ಲಕ್ಷಣ ಕಾಣುತ್ತಿಲ್ಲ. ಭಾರಿ ಮಳೆಗೆ ಈ ವರೆಗೆ 57 ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಮಾತ್ರವಲ್ಲ 14 ಜಿಲ್ಲೆಗಳನ್ನು ಹೊಂದಿರುವ ಕೇರಳ ರಾಜ್ಯದ 34 ಅಣೆಕಟ್ಟುಗಳಲ್ಲಿ ನೀರು ಗರಿಷ್ಟ ಮಟ್ಟ ತಲುಪಿದ್ದು, ಎಲ್ಲಾ ಡ್ಯಾಂ ನ ಗೇಟ್ ಗಳನ್ನು ತೆರೆಯಲಾಗಿದೆ. ಇನ್ನು ಇಡುಕ್ಕಿ ಡ್ಯಾಂ ನಿಂದ ಪ್ರತೀ 1 ಸೆಕೆಂಡಿಗೆ ಬರೊಬ್ಬರಿ 8.5ಲಕ್ಷ ಲೀಟರ್ ನೀರು ಹೊರಹೋಗುತ್ತಿದೆ. ಇದರ ಜತೆಗೆ 14ಜಿಲ್ಲೆಗಳಲ್ಲಿ ಕೂಡ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಳೆಯ ಪರಿಣಾಮದಿಂದ 25ರಂದು ಕೊನೆಗಳ್ಳುವ ಓಣಂ ಹಬ್ಬವನ್ನು ಆಚರಿಸದಿರಲು ನಿರ್ಧರಿಸಲಾಗಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more