Short News

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಆತ್ಮಹತ್ಯೆ ಶಂಕೆ

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಆತ್ಮಹತ್ಯೆ ಶಂಕೆ

ಸರ್ಕಾರಿ ಶಾಲೆಯೊಂದರ ಆವರಣದಲ್ಲಿ ಮೂವರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿಯ ಮೃತದೇಹ ಗುರುವಾರ ಪತ್ತೆಯಾಗಿದೆ. ಉತ್ತರ ಪ್ರದೇಶದ ಬುದಾವುನ್ ನಗರದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ತನ್ನ ಮಗಳು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನತದೃಷ್ಟ ಬಾಲಕಿಯ ತಾಯಿ ತಿಳಿಸಿದ್ದಾರೆ. ಅವಮಾನವಾಗಿದ್ದರಿಂದ ನನ್ನ ಮಗಳು ನೇಣು ಹಾಕಿಕೊಂಡಿದ್ದಾಳೆ. ಅಲ್ಲದೆ, ಆಕೆಯ ಸಹೋದರರಿಗೆ ತೊಂದರೆ ನೀಡುವುದಾಗಿ ಆಕೆಗೆ ಬೆದರಿಸಲಾಗಿತ್ತು' ಎಂದು ತಾಯಿ ಹೇಳಿದ್ದಾರೆ. ಆಗಸ್ಟ್ 21ರಂದು ಅತ್ಯಾಚಾರದ ಕುರಿತ ದೂರು ದಾಖಲಾಗಿತ್ತು . ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.   
ಮೊದಲ ನಾಲ್ಕು ಕ್ಯಾಮೆರಾ ಫೋನ್‌ ಲಾಂಚ್‌ಗೆ ಶಿಯೋಮಿ ರೆಡಿ...!

ಮೊದಲ ನಾಲ್ಕು ಕ್ಯಾಮೆರಾ ಫೋನ್‌ ಲಾಂಚ್‌ಗೆ ಶಿಯೋಮಿ ರೆಡಿ...!

ಈಗಾಗಲೇ ಬಜೆಟ್‌ ಬೆಲೆಯಲ್ಲಿ ರೆಡ್‌ಮಿ ನೋಟ್ ಸರಣಿಯಲ್ಲಿ ಮೂರು ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿರುವ ಶಿಯೋಮಿ. ಈ ಬಾರಿ ಮತ್ತೊಂದು ರೆಡ್‌ಮಿ ನೋಟ್ 6 ಸರಣಿಯ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಸಿದ್ಧತೆ ಮಾಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಹೆಚ್ಚಿನ ಸದ್ದು ಮಾಡುತ್ತಿದೆ. ಸದ್ಯ ಲೀಕ್ ಆಗಿರುವ ಪೋಟೋಗಳು ಮಾರುಕಟ್ಟೆಯಲ್ಲಿ ಲಾಂಚ್ ಆಗಲಿರುವ ರೆಡ್‌ಮಿ ನೋಟ್ 6 ಸರಣಿಯ ರೆಡ್‌ಮಿ ನೋಟ್ 6 ಪ್ರೋ ಸ್ಮಾರ್ಟ್‌ಫೋನ್ ಒಟ್ಟು ನಾಲ್ಕು ಕ್ಯಾಮೆರಾವನ್ನು ಹೊಂದಿದೆ ಎಂಬುದನ್ನು ತೋರಿಸಿಕೊಡುತ್ತಿದೆ.
ಜಿಯೋ-ಏರ್‌ಟೆಲ್ ಅಸ್ತಿತ್ವಕ್ಕೆ ಧಕ್ಕೆ ತಂದಿದೆ ಆಪಲ್ 'ಇ-ಸಿಮ್'!

ಜಿಯೋ-ಏರ್‌ಟೆಲ್ ಅಸ್ತಿತ್ವಕ್ಕೆ ಧಕ್ಕೆ ತಂದಿದೆ ಆಪಲ್ 'ಇ-ಸಿಮ್'!

ಮೊನ್ನೆ ತಾನೆ ಮಾರುಕಟ್ಟೆಗೆ ಕಾಲಿಟ್ಟಿರುವ ಆಪಲ್ ಐಫೋನ್ Xs, ಐಫೋನ್ Xs ಮ್ಯಾಕ್ಸ್ ಹಾಗೂ ಐಫೋನ್ Xr ಸ್ಮಾರ್ಟ್‌ಫೋನ್‌ಗಳಲ್ಲಿ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಹೊಸ ಅವಕಾಶವನ್ನು ಆಪಲ್ ಮಾಡಿಕೊಟ್ಟಿದೆ. ಆಂಡ್ರಾಯ್ಡ್ ಫೋನ್‌ಗಳಲ್ಲಿ ಇರುವುದಕ್ಕಿಂತ ಭಿನ್ನ ಮಾದರಿಯಲ್ಲಿ ಬಂದಿರುವ ಇ-ಸಿಮ್‌ನಿಂದಾಗಿ ಟೆಲಿಕಾಂ ಆಪರೇಟರ್‌ಗಳ ಅಸ್ತಿತ್ವವೇ ಅಲುಗಾಡುತ್ತದೆ ಎಂಬ ಭೀತಿ ಈಗ ಎದುರಾಗಿದೆ. ಇ-ಸಿಮ್‌ನಿಂದ ಒಂದು ನೆಟ್‌ವರ್ಕ್‌ ನಿಂದ ಇನ್ನೊಂದು ನೆಟ್‌ವರ್ಕ್‌ಗೆ ಬದಲಾಗುವುದು ಅತ್ಯಂತ ಸುಲಭವಾಗಿದೆ. ಟೆಲಿಕಾಂ ಕಂಪನಿಗಳ ಕಚೇರಿಗೆ ಹೋಗದೇ, ಕೇವಲ ಫೋನ್‌ನಲ್ಲಿರುವ ಸೆಟ್ಟಿಂಗ್ಸ್ ಬದಲಿಸಿದರೆ ಸಾಕು ನೆಟ್‌ವರ್ಕ್ ಕೂಡ ಬದಲಾಗಲಿದೆ.
ಹೊಸದಾಗಿ ಬಿಡುಗಡೆಗೊಂಡ ಮಹೀಂದ್ರಾ ಮರಾಜೊ ಕಾರಿಗೆ ಫುಲ್ ಡಿಮ್ಯಾಂಡ್

ಹೊಸದಾಗಿ ಬಿಡುಗಡೆಗೊಂಡ ಮಹೀಂದ್ರಾ ಮರಾಜೊ ಕಾರಿಗೆ ಫುಲ್ ಡಿಮ್ಯಾಂಡ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಮಾರುಕಟ್ಟೆಯಲ್ಲಿ ಎಂಪಿಪಿ ಕಾರಿನ ಬೇಡಿಕೆಯು ಹೆಚ್ಚುತ್ತಿರುವ ಕಾರಣ ಗ್ರಾಹಕರಿಗೆ ಅನುಕುಣವಾಗಿ ಮರಾಜೊ ಎಂಪಿವಿ ಕಾರನ್ನು ಸೆಪ್ಟೆಂಬರ್ 3ರಂದು ಬಿಡುಗಡೆಗೊಳಿಸಿತ್ತು. ಶಾರ್ಕ್ ವಿನ್ಯಾಸವನ್ನು ಮತು ಪ್ರೀಮಿಯಮ್ ಫೀಚರ್‍‍ಗಳಿಂದ ಸಜ್ಜುಗೊಂಡ ಈ ಕಾರಿಗೆ ಇದೀಗ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ. ಈ ಕಾರಿನ ಬುಕ್ಕಿಂಗ್ ಹೆಚ್ಚುತ್ತಿರುವ ಕಾರಣ ಆಗಸ್ಟ್ ತಿಂಗಳಿನಲ್ಲಿ ಸುಮಾರು 1,762 ಯೂನಿಟ್ ಕಾರುಗಳನ್ನು ತಮ್ಮ ಡೀಲರ್‍‍ಗಳ ಯಾರ್ಡ್‍ಗೆ ತಲುಪಿಸಲಾಗಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more