Short News

ವಾಜಪೇಯಿ ನಿಧನದ ಸುದ್ದಿಯನ್ನು ಮುಚ್ಚಿಟ್ಟಿತ್ತು ಬಿಜೆಪಿ: ಶಿವಸೇನೆ

ವಾಜಪೇಯಿ ನಿಧನದ ಸುದ್ದಿಯನ್ನು ಮುಚ್ಚಿಟ್ಟಿತ್ತು ಬಿಜೆಪಿ: ಶಿವಸೇನೆ

"ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮೊದಲೇ ನಿಧನಾರಾಗಿದ್ದರೂ ಅವರ ನಿಧನದ ಸುದ್ದಿಯನ್ನು ಬಿಜೆಪಿ ಬೇಕೆಂದೇ ಮುಚ್ಚಿಟ್ಟಿತ್ತು" ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಸಂಶಯ ವ್ಯಕ್ತಪಡಿಸಿದ್ದಾರೆ. ಶಿವಸೇನೆ ಮುಖವಾಣಿ 'ಸಾಮ್ನಾ'ದಲ್ಲಿ ಬರೆದ ಸಂಪಾದಕೀಯದಲ್ಲಿ ಈ ರೀತಿ ಬರೆಯುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. "ಅಟಲ್ ಬಿಹಾರಿ ವಾಜಪೇಯಿ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಗಸ್ಟ್ 12 ಮತ್ತು 13 ರಂದೇ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಬಹುಶಃ ಅವರು ಮೊದಲೇ ನಿಧನರಾಗಿದ್ದರೂ ಬಿಜೆಪಿ ಅದನ್ನು ಮುಚ್ಚಿತ್ತಿತ್ತು" ಎಂದು ಅವರು ಬಿಜೆಪಿ ಮೇಲೆ ಆರೋಪದ ಸುರಿಮಳೆಗೈದಿದ್ದಾರೆ.
ಇಂದು ಸಿದ್ದರಾಮಯ್ಯ-ರಾಹುಲ್ ಭೇಟಿ: ಮಹತ್ವದ ಮಾತುಕತೆ ಸಾಧ್ಯತೆ

ಇಂದು ಸಿದ್ದರಾಮಯ್ಯ-ರಾಹುಲ್ ಭೇಟಿ: ಮಹತ್ವದ ಮಾತುಕತೆ ಸಾಧ್ಯತೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಲಿದ್ದು, ರಾಜ್ಯದ ರಾಜಕೀಯ ಬೆಳವಣಿಗೆಯ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಯುರೋಪ್ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ವಾಪಸ್ಸಾಗುತ್ತಲೇ ಸೆ.16 ರಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ರಾಹುಲ್ ಭೇಟಿಗೆ ಅವಕಾಶ ಮಾಡಿಕೊಡುವಂತೆ ಸಿದ್ದರಾಮಯ್ಯ ಮನವಿ ಮಾಡಿದ್ದರು.

ಸಮ್ಮಿಶ್ರ ಸರ್ಕಾರದ ವಿರುದ್ಧ ಜಾರಕಿಹೊಳಿ ಸಹೋದರರು ಬಂಡಾಯ ಎದ್ದಿರುವುದು

ಮಲಗುವ ಮುನ್ನ ನಿಮ್ಮ ಮುಖವನ್ನು ಹೇಗೆ ಸ್ವಚ್ಛಗೊಳಿಸಿದರೆ ಒಳ್ಳೆಯದು?

ಮಲಗುವ ಮುನ್ನ ನಿಮ್ಮ ಮುಖವನ್ನು ಹೇಗೆ ಸ್ವಚ್ಛಗೊಳಿಸಿದರೆ ಒಳ್ಳೆಯದು?

ದಿನವೂ ಮಲಗುವ ಮುನ್ನ ಮುಖವನ್ನು ಸ್ವಚ್ಛಗೊಳಿಸುವುದರಿಂದ ಚರ್ಮದ ಕಲ್ಮಶಗಳನ್ನು ತೆಗೆಯಬಹುದು. ಇದರಿಂದ ನಿಮ್ಮ ಚರ್ಮಕ್ಕೆ ಉಸಿರಾಡಲು ಸಹಾಯವಾಗುತ್ತದೆ. ಮುಖವನ್ನು ತೊಳೆದುಕೊಳ್ಳುವಾಗ ನಾವು ನಿಧಾನವಾಗಿ ಮುಖದ ಮಸಾಜ್ ಮಾಡಿಕೊಳ್ಳುತ್ತೇವೆ.ಅದರಿಂದ ರಕ್ತ ಸಂಚಾರ ಹೆಚ್ಚಾಗಿ ಮುಖದ ಹೊಳಪು ಹೆಚ್ಚುತ್ತದೆ. ಮುಖವನ್ನು ಸ್ವಚ್ಛಗೊಳಿಸುವುದರಿಂದ ಮೊಡವೆ ಮತ್ತು ಕಪ್ಪು ಕಲೆಗಳಿಂದ ದೂರವಿರಬಹುದು. ಮುಖವನ್ನು ಸ್ವಚ್ಛಗೊಳಿಸುವುದರಿಂದ ನೀವು ದಣಿದ್ದಿದರೂ ಸಹ ಮುಖ ಹೆಚ್ಚು ಸುಸ್ತಾದಂತೆ ಕಾಣುವುದಿಲ್ಲ. ಮುಖವನ್ನು ತೊಳೆದು ಸ್ವಚ್ಛಗೊಳಿಸಲು ನೀವು ಸಾಕಷ್ಟು ಸಮಯವನ್ನು ನೀಡಬೇಕು.

ಷೇರು ಪೇಟೆಯಲ್ಲಿ ಕೊಚ್ಚಿಹೋಯಿತು ಹೂಡಿಕೆದಾರರ 2.72 ಲಕ್ಷ ಕೋಟಿ ರುಪಾಯಿ

ಷೇರು ಪೇಟೆಯಲ್ಲಿ ಕೊಚ್ಚಿಹೋಯಿತು ಹೂಡಿಕೆದಾರರ 2.72 ಲಕ್ಷ ಕೋಟಿ ರುಪಾಯಿ

ಸೋಮವಾರ ಹಾಗೂ ಮಂಗಳವಾರ ಎರಡೇ ದಿನದಲ್ಲಿ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು 2.72ಲಕ್ಷ ಕೋಟಿ ರುಪಾಯಿಯನ್ನು ಕಳೆದುಕೊಂಡಿದ್ದಾರೆ. ಎರಡು ದಿನಗಳಲ್ಲೇ ಸೆನ್ಸೆಕ್ಸ್ ಸೂಚ್ಯಂಕವು 800 ಅಂಶಗಳಷ್ಟು ಕುಸಿತ ಕಂಡಿದೆ. ಮಂಗಳವಾರ ಸೆನ್ಸೆಕ್ಸ್ 295 ಅಂಶಗಳಷ್ಟು ಕುಸಿದು, ದಿನಾಂತ್ಯಕ್ಕೆ 37,290.67 ಅಂಶಕ್ಕೆ ತಲುಪಿತು. ಜಾಗತಿಕ ಮಟ್ಟದಲ್ಲಿ ನಡೆದಿರುವ (ಅಮೆರಿಕ ಹಾಗೂ ಚೀನಾ ಮಧ್ಯೆ) ವ್ಯಾಪಾರದ ಕದನ, ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆಯಿಂದ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಸೋಮವಾರದಂದು ಸಹ ರುಪಾಯಿ ಮೌಲ್ಯ ಕುಸಿತ ಹಾಗೂ ಇತರ ಅಂಶಗಳ ಪ್ರಭಾವದಿಂದಾಗಿ ಸೆನ್ಸೆಕ್ಸ್ 505 ಅಂಶಗಳಷ್ಟು ಇಳಿಕೆ ಕಂಡಿತ್ತು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more