Short News

ವೈರಲ್ ವಿಡೀಯೋ: ವಾಜಪೇಯಿ ಶ್ರದ್ಧಾಂಜಲಿ ಸಭೆಯಲ್ಲಿ ನಕ್ಕ ಬಿಜೆಪಿ ನಾಯಕರು!

ವೈರಲ್ ವಿಡೀಯೋ: ವಾಜಪೇಯಿ ಶ್ರದ್ಧಾಂಜಲಿ ಸಭೆಯಲ್ಲಿ ನಕ್ಕ ಬಿಜೆಪಿ ನಾಯಕರು!

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರು ಗಹಗಹಿಸಿ ನಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಛತ್ತೀಸ್ ಗಢದ ರಾಯ್ಪುರಲ್ಲಿ ಆ.23 ರಂದು ನಡೆಯುತ್ತಿದ್ದ ವಾಜಪೇಯಿ ಶ್ರದ್ಧಾಂಜಲಿ ಸಭೆಯಲ್ಲಿ, ಛತ್ತೀಸ್ ಗಢದ ಕೃಷಿ ಸಚಿವ ಬೃಜ್ಮೋಹನ್ ಅಗರ್ವಾಲ್ ಮತ್ತು ಆರೋಗ್ಯ ಸಚಿವ ಅಜಯ್ ಚಂದ್ರಶೇಖರ್ ಅವರು ಹಾಸ್ಯ ಮಾಡಿಕೊಂಡು ನಗುತ್ತಿದ್ದರು. ಮಾಜಿ ಪ್ರಧಾನಿಯೊಬ್ಬರ ಶ್ರದ್ಧಾಂಜಲಿ ಸಭೆಯಲ್ಲಿ ಅವರದೇ ಪಕ್ಷದ ನಾಯಕರು, ಅದರಲ್ಲೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿಗಳು ಹೀಗೆ ನಗುತ್ತಿರುವುದನ್ನು ಹಲವರು ಖಂಡಿಸಿದ್ದಾರೆ.
ಒಂದೇ ಒಂದು 'ಟೊಮೆಟೊ' ಕೂದಲಿನ ಅಂದಚೆಂದ ಹೆಚ್ಚಿಸುತ್ತದೆ!

ಒಂದೇ ಒಂದು 'ಟೊಮೆಟೊ' ಕೂದಲಿನ ಅಂದಚೆಂದ ಹೆಚ್ಚಿಸುತ್ತದೆ!

ಒಂದು ಪಾತ್ರೆಯಲ್ಲಿ ಲಿಂಬೆರಸ ಹಾಕಿ. ಈಗ ಟೊಮೆಟೋದ ತಿರುಳು ತೆಗೆಯಿರಿ ಮತ್ತು ಇದನ್ನು ಪಾತ್ರೆಗೆ ಹಾಕಿ.
ಟೊಮೇಟೊ ತಿರುಳು ಮತ್ತು ಲಿಂಬೆರಸವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಮೆತ್ತಗಿನ ಪೇಸ್ಟ್ ಮಾಡಿ. ಕೈಗಳನ್ನು ಬಳಸಿಕೊಂಡು ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ. ಈ ಪೇಸ್ಟ್ ಹಚ್ಚಿಕೊಳ್ಳುವಾಗ ಉಗುರಿನಿಂದ ತಲೆಬುರುಡೆ ಕೆರೆದುಕೊಳ್ಳಬೇಡಿ. 30 ನಿಮಿಷ ಕಾಲ ಹಾಗೆ ಬಿಟ್ಟ ಬಳಿಕ ತಣ್ಣೀರಿನಿಂದ ತೊಳೆಯಿರಿ. ಕೂದಲು ತೊಳೆದ ಬಳಿಕ ಒಣಗಿಸಿ. ಪೇಸ್ಟ್ ಹಚ್ಚಿಕೊಂಡ ಬಳಿಕ ಶಾಂಪೂ ಬಳಸುವ ಅಗತ್ಯವಿಲ್ಲ. ಪರಿಣಾಮಕಾರಿ ಫಲಿತಾಂಶಕ್ಕಾಗಿ ನೀವು ಇದನ್ನ ವಾರದಲ್ಲಿ ಎರಡು ಸಲ ಬಳಸಿ. ಟೊಮೇಟೊ ತಿರುಳು ಹಾಕಿ,

pirated laptop ಇದ್ದಂತೆ ರಾಹುಲ್ ಗಾಂಧಿ : ಬಿಜೆಪಿಯ ಕೇಂದ್ರ ಸಚಿವ ನಖ್ವಿ ಟೀಕೆ

pirated laptop ಇದ್ದಂತೆ ರಾಹುಲ್ ಗಾಂಧಿ : ಬಿಜೆಪಿಯ ಕೇಂದ್ರ ಸಚಿವ ನಖ್ವಿ ಟೀಕೆ

ಕೇಂದ್ರ ಸಚಿವ ಮುಕ್ತಾರ್​ ಅಬ್ಬಾಸ್​ ನಖ್ವಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಯನ್ನು pirated laptopಗೆ ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ. ಜಾರ್ಖಂಡ್​ನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಹುಲ್​ ಬರೀ ವಂಚನೆಯ ಹಾಗೂ ಸುಳ್ಳು ಪದಗಳನ್ನಾಡುತ್ತಾರೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಪ್ರತಿಪಕ್ಷಗಳ ಒಕ್ಕೂಟ ಮಹಾಘನಬಂಧನ ಅನ್ನು ಬಲೂನ್​ ಎಂದಿರುವ ನಕ್ವಿ, ಚುನಾಣೆಗೆ ಮುನ್ನವೇ ಅದು ಒಡೆದುಹೋಗುತ್ತದೆ ಎಂದು ಹೇಳಿದ್ದಾರೆ. ಮೋದಿ ನಾಯಕತ್ವದಲ್ಲಿ ಯೋಜಿತ ಕಾರ್ಯಗಳು ನಡೆಯುತ್ತಿವೆ, ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಸು ಬಾಯಿಯಿಂದ ತಮಿಳು ಮತ್ತು ಸಂಸ್ಕೃತ ಮಾತನಾಡಿಸುತ್ತೇನೆ, ಸ್ವಾಮಿ ನಿತ್ಯಾನಂದ

ಹಸು ಬಾಯಿಯಿಂದ ತಮಿಳು ಮತ್ತು ಸಂಸ್ಕೃತ ಮಾತನಾಡಿಸುತ್ತೇನೆ, ಸ್ವಾಮಿ ನಿತ್ಯಾನಂದ

ಮಾಡರ್ನ್ ಸ್ವಾಮೀಜಿ ಎಂದೇ ಹೆಸರಾದ ಬಿಡದಿಯ ಸ್ವಾಮಿ ನಿತ್ಯಾನಂದ, ಹೊಸ ಆವಿಷ್ಕಾರದೊಂದಿಗೆ ಮತ್ತೆ ಸುದ್ದಿಯಾಗಿದ್ದಾರೆ. ತನ್ನ ಭಕ್ತರಿಗೆ ನೀಡಿದ ಪ್ರವಚನದಲ್ಲಿ ಹಸು ಬಾಯಿಯಿಂದ ತಮಿಳು ಮತ್ತು ಸಂಸ್ಕೃತ ಮಾತನಾಡಿಸುತ್ತೇನೆ ಎಂದಿದ್ದಾರೆ. ಅವರ ಪ್ರವಚನದ ವಿಡಿಯೋ ಸದ್ಯ ವೈರಲ್ ಆಗಿದೆ. ಹಸು, ಮಂಗ, ಹುಲಿ ಮುಂತಾದ ಪ್ರಾಣಿಗಳ ಅತಿಂದ್ರೀಯ ಶಕ್ತಿಗಳನ್ನು ಪ್ರಗತಿಗೊಳಿಸುವ ಮೂಲಕ, ವೈಜ್ಞಾನಿಕವಾಗಿ ಇದನ್ನು ರುಜುವಾತು ಪಡಿಸುತ್ತೇನೆ, ಇದನ್ನು ಒಂದು ದಿನದ ಹಿಂದೆ ಪರೀಕ್ಷೆ ಮಾಡಲಾಗಿದ್ದು, ಇದು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more